AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ; ಪ್ರವೇಶ ಸಿಗಬೇಕಾದರೆ ಏನು ಮಾಡಬೇಕು ಗೊತ್ತಾ?

ಕರ್ನಾಟಕ ಚುನಾವಣೆ ಹಿನ್ನೆಲೆ ನಾಳೆ ಕೊಡುಗು ಜಿಲ್ಲೆಯಲ್ಲಿರುವ ರಾಜಾ ಸೀಟ್, ಅಬ್ಬಿ ಫಾಲ್ಸ್, ಸನ್ನಿಸೈಡ್ ಮ್ಯೂಸಿಯಂ ಮತ್ತು ಮಲ್ಲಳ್ಳಿ ಫಾಲ್ಸ್‌ಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

Rakesh Nayak Manchi
| Updated By: Digi Tech Desk|

Updated on:May 11, 2023 | 4:42 PM

Share
Kodagu tourist places Restrictions on entry to tourist spots in Kodagu

ಮತದಾನ ನಡೆಯಲಿರುವ ಹಿನ್ನೆಲೆ ನಾಳೆ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರೆ ಪ್ರವೇಶ ಸಿಗುವುದಿಲ್ಲ. ಯಾವೆಲ್ಲಾ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ? ಪ್ರವೇಶ ಸಿಗಬೇಕೆಂದರೆ ಏನು ಮಾಡಬೇಕು? ಮುಂದಕ್ಕೆ ಹೇಳುತ್ತೇವೆ ನೋಡಿ.

1 / 8
Kodagu tourist places Restrictions on entry to tourist spots in Kodagu

ಮೇ 10 ರಂದು ರಾಜಾ ಸೀಟ್​ ತಾಣಕ್ಕೆ ಪ್ರವಾಸಿಗರು ಭೇಟಿ ನೀಡಿದರೆ ಒಳಗೆ ಪ್ರವೇಶ ಸಿಗುವುದಿಲ್ಲ. (ಫೋಟೋ: expedia)

2 / 8
Kodagu tourist places Restrictions on entry to tourist spots in Kodagu

ಹೇಗೂ ರಜೆ ಇದೆ, ಅಬ್ಬಿ ಫಾಲ್ಸ್​ ನೋಡಿ ಬರೋಣ ಅಂತ ಇಲ್ಲಿಗೆ ಹೋದರೆ ವಾಪಸ್ ಬರಬೇಕಾದಿತು. ಇಲ್ಲಿಗೂ ಪ್ರವೇಶ ನಿರ್ಬಂಧಿಸಲಾಗಿದೆ. (ಫೋಟೋ: fabhotels)

3 / 8
Kodagu tourist places Restrictions on entry to tourist spots in Kodagu

ಅಬ್ಬಿ ಫಾಲ್ಸ್​ಗೆ ಹೇಗೂ ಪ್ರವೇಶ ಸಿಗಲ್ಲ, ಮಲ್ಲಳ್ಳಿ ಫಾಲ್ಸ್‌ಗಾದರೂ ಹೋಗಿ ಬರೋಣ ಎಂದು ಇಲ್ಲಿಗೆ ಭೇಟಿ ನೀಡಿದರೂ ಪ್ರಯೋಜನವಿಲ್ಲ. ಏಕೆಂದರೆ, ಇಲ್ಲಿಯೂ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. (ಫೋಟೋ: thrillophilia)

4 / 8
Kodagu tourist places Restrictions on entry to tourist spots in Kodagu

ಸನ್ನಿಸೈಡ್ ಮ್ಯೂಸಿಯಂಗೆ ನಾಳೆ ಭೇಟಿ ನೀಡಬೇಕು ಎನ್ನುವವರಿಗೂ ಪ್ರವೇಶ ಸಿಗುವುದಿಲ್ಲ. ಇಲ್ಲಿಗೂ ಪ್ರವೇಶ ನಿರ್ಬಂಧಿಸಲಾಗಿದೆ. (ಫೋಟೋ: coorg.com)

5 / 8
Kodagu tourist places Restrictions on entry to tourist spots in Kodagu

ಹೆಚ್ಚಿನ ಜನರು ಮತದಾನ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸತೀಶ ಬಿ.ಸಿ ಹೇಳಿದ್ದಾರೆ. ಬೇರೆ ರಾಜ್ಯಗಳ ಮಕ್ಕಳು ಮತ್ತು ಪ್ರವಾಸಿಗರಿಗೆ ಇದು ಅನ್ವಯಿಸುವುದಿಲ್ಲ ಅಂತ ಹೇಳಿದ್ದಾರೆ.

6 / 8
Kodagu tourist places Restrictions on entry to tourist spots in Kodagu

ಜಿಲ್ಲೆಯ ಜನರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದವರಿಗೆ ಮಾತ್ರ ನಾಳೆ ಈ ಎಲ್ಲಾ ತಾಣಗಳಿಗೆ ಪ್ರವೇಶ ಸಿಗಲಿದೆ. ಬೆರಳಿಗೆ ಹಾಕುವ ಅಳಿಸಲಾಗದ ಶಾಯಿ ತೋರಿಸಿದರಷ್ಟೇ ಪ್ರವೇಶಕ್ಕೆ ಅನುಮತಿ ಸಿಗಲಿದೆ.

7 / 8
Kodagu tourist places Restrictions on entry to tourist spots in Kodagu

ಇದರೊಂದಿಗೆ ಜಿಲ್ಲೆಯ ಕೆಲವು ಹೋಟೆಲ್‌ಗಳು ಜನರು ತಮ್ಮ ಬೆರಳುಗಳ ಮೇಲೆ ಅಳಿಸಲಾಗದ ಶಾಯಿ ಗುರುತು ತೋರಿಸಿದರೆ ಹೋಟೆಲ್ ಬುಕಿಂಗ್‌ನಲ್ಲಿ ಶೇ 10 ರಿಂದ ಶೇ 20 ರಷ್ಟು ರಿಯಾಯಿತಿ ಪಡೆಯಲಿದ್ದಾರೆ. (ಫೋಟೋ: trivago.in)

8 / 8

Published On - 7:21 pm, Tue, 9 May 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!