ಕೊಡಗು ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ; ಪ್ರವೇಶ ಸಿಗಬೇಕಾದರೆ ಏನು ಮಾಡಬೇಕು ಗೊತ್ತಾ?
ಕರ್ನಾಟಕ ಚುನಾವಣೆ ಹಿನ್ನೆಲೆ ನಾಳೆ ಕೊಡುಗು ಜಿಲ್ಲೆಯಲ್ಲಿರುವ ರಾಜಾ ಸೀಟ್, ಅಬ್ಬಿ ಫಾಲ್ಸ್, ಸನ್ನಿಸೈಡ್ ಮ್ಯೂಸಿಯಂ ಮತ್ತು ಮಲ್ಲಳ್ಳಿ ಫಾಲ್ಸ್‌ಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
Updated on:May 11, 2023 | 4:42 PM

ಮತದಾನ ನಡೆಯಲಿರುವ ಹಿನ್ನೆಲೆ ನಾಳೆ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರೆ ಪ್ರವೇಶ ಸಿಗುವುದಿಲ್ಲ. ಯಾವೆಲ್ಲಾ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ? ಪ್ರವೇಶ ಸಿಗಬೇಕೆಂದರೆ ಏನು ಮಾಡಬೇಕು? ಮುಂದಕ್ಕೆ ಹೇಳುತ್ತೇವೆ ನೋಡಿ.

ಮೇ 10 ರಂದು ರಾಜಾ ಸೀಟ್ ತಾಣಕ್ಕೆ ಪ್ರವಾಸಿಗರು ಭೇಟಿ ನೀಡಿದರೆ ಒಳಗೆ ಪ್ರವೇಶ ಸಿಗುವುದಿಲ್ಲ. (ಫೋಟೋ: expedia)

ಹೇಗೂ ರಜೆ ಇದೆ, ಅಬ್ಬಿ ಫಾಲ್ಸ್ ನೋಡಿ ಬರೋಣ ಅಂತ ಇಲ್ಲಿಗೆ ಹೋದರೆ ವಾಪಸ್ ಬರಬೇಕಾದಿತು. ಇಲ್ಲಿಗೂ ಪ್ರವೇಶ ನಿರ್ಬಂಧಿಸಲಾಗಿದೆ. (ಫೋಟೋ: fabhotels)

ಅಬ್ಬಿ ಫಾಲ್ಸ್‌ಗೆ ಹೇಗೂ ಪ್ರವೇಶ ಸಿಗಲ್ಲ, ಮಲ್ಲಳ್ಳಿ ಫಾಲ್ಸ್‌ಗಾದರೂ ಹೋಗಿ ಬರೋಣ ಎಂದು ಇಲ್ಲಿಗೆ ಭೇಟಿ ನೀಡಿದರೂ ಪ್ರಯೋಜನವಿಲ್ಲ. ಏಕೆಂದರೆ, ಇಲ್ಲಿಯೂ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. (ಫೋಟೋ: thrillophilia)

ಸನ್ನಿಸೈಡ್ ಮ್ಯೂಸಿಯಂಗೆ ನಾಳೆ ಭೇಟಿ ನೀಡಬೇಕು ಎನ್ನುವವರಿಗೂ ಪ್ರವೇಶ ಸಿಗುವುದಿಲ್ಲ. ಇಲ್ಲಿಗೂ ಪ್ರವೇಶ ನಿರ್ಬಂಧಿಸಲಾಗಿದೆ. (ಫೋಟೋ: coorg.com)

ಹೆಚ್ಚಿನ ಜನರು ಮತದಾನ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸತೀಶ ಬಿ.ಸಿ ಹೇಳಿದ್ದಾರೆ. ಬೇರೆ ರಾಜ್ಯಗಳ ಮಕ್ಕಳು ಮತ್ತು ಪ್ರವಾಸಿಗರಿಗೆ ಇದು ಅನ್ವಯಿಸುವುದಿಲ್ಲ ಅಂತ ಹೇಳಿದ್ದಾರೆ.

ಜಿಲ್ಲೆಯ ಜನರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದವರಿಗೆ ಮಾತ್ರ ನಾಳೆ ಈ ಎಲ್ಲಾ ತಾಣಗಳಿಗೆ ಪ್ರವೇಶ ಸಿಗಲಿದೆ. ಬೆರಳಿಗೆ ಹಾಕುವ ಅಳಿಸಲಾಗದ ಶಾಯಿ ತೋರಿಸಿದರಷ್ಟೇ ಪ್ರವೇಶಕ್ಕೆ ಅನುಮತಿ ಸಿಗಲಿದೆ.

ಇದರೊಂದಿಗೆ ಜಿಲ್ಲೆಯ ಕೆಲವು ಹೋಟೆಲ್‌ಗಳು ಜನರು ತಮ್ಮ ಬೆರಳುಗಳ ಮೇಲೆ ಅಳಿಸಲಾಗದ ಶಾಯಿ ಗುರುತು ತೋರಿಸಿದರೆ ಹೋಟೆಲ್ ಬುಕಿಂಗ್‌ನಲ್ಲಿ ಶೇ 10 ರಿಂದ ಶೇ 20 ರಷ್ಟು ರಿಯಾಯಿತಿ ಪಡೆಯಲಿದ್ದಾರೆ. (ಫೋಟೋ: trivago.in)
Published On - 7:21 pm, Tue, 9 May 23




