ದಕ್ಷಿಣ ಕನ್ನಡ: ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹೇಗಾದರೂ ಮಾಡಿ ಗೆಲುವು ಸಾಧಿಸಲು ಉಭಯ ಪಕ್ಷಗಳು ಹರಸಾಹಸ ಪಡುತ್ತಿವೆ. ಅದರಂತೆ ಇದೀಗ ಬಾರಿ ಕುತೂಹಲ ಕೆರೆಳಿಸುತ್ತಿರುವ ಪುತ್ತೂರು ಕ್ಷೇತ್ರ ಈ ಬಾರಿ ಸಂಚಲವನ್ನ ಮೂಡಿಸಿದೆ. ಇದಕ್ಕೆ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲ(Arun Kumar Puttila), ಹೌದು ಇದರಿಂದ ಬಿಜೆಪಿ (BJP)ಗೆ ಇದೀಗ ಸಂಕಷ್ಟ ಬಂದೊದಗಿದ್ದು, ಈ ಕುರಿತು ‘ಬಿಜೆಪಿ ಸದಸ್ಯರು ತಪ್ಪು ಮಾಡಿದರೆ ಅವರನ್ನು ಕೇಳುವವರು ಇದ್ದು, ತಪ್ಪಾಗಿದ್ರೆ ಅವ್ರನ್ನ ತಿದ್ದಿ ಸರಿಯಾಗಿ ಹೋಗು ಎಂದು ಹೇಳೋಕೆ ಪಕ್ಷ ಇದೆ. ಆದರೆ, ಸ್ವತಂತ್ರ ಅಭ್ಯರ್ಥಿಯನ್ನು ಪ್ರಶ್ನೆ ಮಾಡುವುದಕ್ಕೆ ಯಾರಿದ್ದಾರೆ? ಎಂದು ಅರುಣ್ ಕುಮಾರ್ ಪುತ್ತಿಲ ವಿರುದ್ಧ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್(Kalladka Prabhakar Bhat) ಹರಿಹಾಯ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿಯಿಂದ ಶಕ್ತಿ ಪ್ರದರ್ಶನದ ವೇಳೆ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ‘ ನೀವು ಮೋದಿ, ಅಮಿತ್ ಶಾ, ಯೋಗಿಯನ್ನ ವಿರೋಧ ಮಾಡುತ್ತಿದ್ದೀರಿ, ಇವರು ಬಿಜೆಪಿ ಬಿಟ್ಟರೆ ಅಸ್ತಿತ್ವ ಇದೆಯಾ? ಪುತ್ತಿಲರೇ ನಿಮ್ಮ ಅಸ್ತಿತ್ವ ಎಲ್ಲಿ?ನೀವೂ ಯೋಚನೆ ಮಾಡಬೇಕಿತ್ತು, ನಾಚಿಕೆ ಅಲ್ಲವಾ ಇದು. ಈಗಾಗಲೇ ಕೀಳುಮಟ್ಟದ ರಾಜಕೀಯ ಮಾಡ್ತಾ ಇದ್ದೀರಿ, ಮುಂದೆ ಹೇಗೆ?, ಸಂಘದ ಹಿಂದುತ್ವ ದೊಡ್ಡದ ಅಥವಾ ವ್ಯಕ್ತಿ ಹಿಂದುತ್ವ ದೊಡ್ಡದ. ನಿಜವಾದ ಹಿಂದುತ್ವ ಇರುವುದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿ ಬೆಂಬಲಿಸಿದರೆ ಅದು ಪುಣ್ಯದ ಕೆಲಸ, ಇಲ್ಲವೆಂದ್ರೆ ಅದು ಪಾಪದ ಕೆಲಸ ಎನ್ನುವ ಮೂಲಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಪುತ್ತೂರು ಕ್ಷೇತ್ರದಲ್ಲಿ ಹಿಂದೂ ಶಕ್ತಿ ಪ್ರದರ್ಶನದೊಂದಿಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ ಅರುಣ್ ಪುತ್ತಿಲ
ಇಂದು(ಮೇ.4) ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಊರಿನಲ್ಲೇ ಬಿಜೆಪಿ ಶಕ್ತಿ ಪ್ರದರ್ಶನ ಹಮ್ಮಿಕೊಂಡಿದ್ದು, ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಪುತ್ತಿಲ ಅವರಿಗೆ ಸೆಡ್ಡು ಹೊಡೆದು ಅವರ ಊರಿನಲ್ಲೇ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರ ಬಿಜೆಪಿ ಶಕ್ತಿ ಪ್ರದರ್ಶನ ಮಾಡುತ್ತಿದೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದು, ಬೈಕ್ ರ್ಯಾಲಿ ಮೂಲಕ ಆಗಮಿಸಿದರು. ಈ ಸಂದರ್ಭದಲ್ಲಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಹಿಂದೂ ಮುಖಂಡ ಡಾ. ಪ್ರಸಾದ್ ಭಂಡಾರಿ ಭಾಗಿಯಾಗಿದ್ದರು.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ