ಡಾ. ಚಂದ್ರು‌ ಲಮಾಣಿ ಈವರೆಗೂ ಸರ್ಕಾರಿ ನೌಕರನೇ; ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ‌ ಮುಂದುವರಿದ ಸಂಕಷ್ಟ

|

Updated on: Apr 18, 2023 | 9:21 PM

ಶಿರಹಟ್ಟಿ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು‌ ಲಮಾಣಿ ಅವರಿಗೆ ಡಾಕ್ಟರ್​ ಹುದ್ದೆ ತೊಡಕಾಗಿದೆ. ಈಗಲೂ ಅವರು ಸರ್ಕಾರಿ ನೌಕರ ಎಂದು ಗದಗ ಜಿಲ್ಲಾಧಿಕಾರಿಯವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಡಾ. ಚಂದ್ರು‌ ಲಮಾಣಿ ಈವರೆಗೂ ಸರ್ಕಾರಿ ನೌಕರನೇ; ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ‌ ಮುಂದುವರಿದ ಸಂಕಷ್ಟ
ಶಿರಹಟ್ಟಿ ಬಿಜೆಪಿ ಅಭ್ಯರ್ಥಿ ಡಾ ಚಂದ್ರು ಲಮಾಣಿ ಮತ್ತು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್
Follow us on

ಗದಗ: ಸರ್ಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಬೇಕು. ಆದರೆ ಶಿರಹಟ್ಟಿ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು‌ ಲಮಾಣಿ (Dr Chandru Lamani) ರಾಜೀನಾಮೆ ಸಲ್ಲಿಸಿದ್ದರೂ ಅಂಗೀಕಾರವಾಗಿಲ್ಲ. ಹೀಗಾಗಿ ಈಗಲೂ ಅವರು ಸರ್ಕಾರಿ ನೌಕರ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ತಮ್ಮ ಮೇಲಿನ ಆರೋಪದಿಂದ ನುಣುಚಿಕೊಳ್ಳಲು ರಾಜೀನಾಮೆ ನೀಡಿದ್ದಾರೆ. ಆದರೆ ಅದು ಕೂಡ ಅಂಗೀಕಾರವಾಗಿಲ್ಲ ಎಂದು ಪ್ರತದಲ್ಲಿ ಉಲ್ಲೇಖಿಸಿದ್ದಾರೆ.

ಚಂದ್ರು ಲಮಾಣಿ ಅವರು 2021, ಜುಲೈ 31 ರಂದು ರಾಜಿನಾಮೆ ನೀಡಿದ್ದು, ಇದುವರೆಗೆ ಅಗೀಕಾರವಾಗಿಲ್ಲ. ಅವರು ಈವರೆಗೂ ಸರ್ಕಾರಿ ನೌಕರನೇ ಆಗಿದ್ದಾರೆ. ರಾಜಕೀಯ ಪ್ರಭಾವ ಬೆಳೆಸಿ ಬಿಜೆಪಿ ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮ 2021 ಉಪ ನಿಯಮ 3ರ ಸಾಮಾನ್ಯ ತತ್ವಗಳು (1) (2) (3) ಮತ್ತು‌ ಉಪ ನಿಯಮ 5 ಅನ್ನು ಉಲ್ಲಂಘಿಸುರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಡಾ: ಚಂದ್ರು ಲಮಾಣಿಗೆ ತೊಡಕಾದ ಸರ್ಕಾರಿ ವೈದ್ಯಕೀಯ ವೃತ್ತಿ: ಇಂದೇ ರಾಜೀನಾಮೆ ಅಂಗೀಕಾರ ಪತ್ರ ಸಲ್ಲಿಸಲು‌ ಬಿಜೆಪಿ ಗಡುವು

ಮಾತ್ರವಲ್ಲದೆ, ಚುನಾವಣಾ ನೀತಿ ಸಂಹಿತೆ ಆದೇಶವನ್ನು ಪಾಲಿಸದೇ ನಿಯಮಗಳನ್ನು ಉಲ್ಲಂಘಿಸಿದ ಅಪರಾಧದ ಹಿನ್ನೆಲೆಯಲ್ಲಿ ಚಂದ್ರು ಲಮಾಣಿ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಹೀಗಾಗಿ ಶಿರಹಟ್ಟಿ ಸಾರ್ವಜನಿಕ ಆಸ್ಪತ್ರೆ ವೈದ್ಯ ಚಂದ್ರು ಲಮಾಣಿ ಅವರು ಸರ್ಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ನಡೆದುಕೊಂಡು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) 2021 ಉಪ ನಿಯಮ 3ರ ಸಾಮಾನ್ಯ ತತ್ವಗಳು (1) (2) (3) ಮತ್ತು‌ ಉಪ ನಿಯಮ 5 ಅನ್ನು ಉಲ್ಲಂಘಿಸುರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಮುಂದುವರೆದ ಟಿಕೆಟ್ ಲಾಬಿ

ಈಗಾಗಲೇ ಚಂದ್ರು ಅವರು ತಮ್ಮ ವೈದ್ಯ ಹುದ್ದಗೆ ರಾಜೀನಾಮೆ ನೀಡಿದ್ದಾರೆ. ಆದರೆ ಆರೋಗ್ಯ ಇಲಾಖೆ ಇನ್ನೂ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಹೀಗಾಗಿ ಚಂದ್ರುಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಬಿಜೆಪಿ ಗಡುವು ನೀಡಿದೆ. ಕೂಡಲೇ ರಾಜೀನಾಮೆ ಪತ್ರ ಸಲ್ಲಿಸುವಂತೆ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್​ ಅವರು ಚಂದ್ರು ಲಮಾಣಿಗೆ ಸೂಚನೆ ನೀಡಿದ್ದಾರೆ. ಇನ್ನು ಚಂದ್ರು ಲಮಾಣಿ ನಾಮಪತ್ರ ಸಲ್ಲಿಕೆಗೆ ತೊಡಕು ಉಂಟಾಗಿದ್ದರಿಂದ ಟಿಕೆಟ್ ಕಳೆದುಕೊಂಡಿದ್ದ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರು ಟಿಕೆಟ್​​ಗಾಗಿ ಲಾಬಿ ಮುಂದುವರೆಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:21 pm, Tue, 18 April 23