AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shashikala Jolle: ಶಶಿಕಲಾ ಜೊಲ್ಲೆ ಕುಟುಂಬದ ಬಳಿ ಇದೆ ಬರೊಬ್ಬರಿ 68.58 ಕೋಟಿ ರೂ. ಮೌಲ್ಯದ ಆಸ್ತಿ

ನಿಪ್ಪಾಣಿ ಶಾಸಕಿ, ಮುಜರಾಯಿ ಸಚಿವೆ, ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಶಿಕಲಾ ಜೊಲ್ಲೆ ಅವರ ಕುಟುಂಬದ ಬಳಿ ಬರೋಬ್ಬರಿ ಬರೊಬ್ಬರಿ 68.58 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್​​ನಿಂದ ತಿಳಿದುಬಂದಿದೆ.

Shashikala Jolle: ಶಶಿಕಲಾ ಜೊಲ್ಲೆ ಕುಟುಂಬದ ಬಳಿ ಇದೆ ಬರೊಬ್ಬರಿ 68.58 ಕೋಟಿ ರೂ. ಮೌಲ್ಯದ ಆಸ್ತಿ
ಶಶಿಕಲಾ ಜೊಲ್ಲೆ
ಗಣಪತಿ ಶರ್ಮಾ
|

Updated on: Apr 18, 2023 | 10:57 PM

Share

ಮುಖ್ಯಾಂಶಗಳು

  • ಶಶಿಕಲಾ ಜೊಲ್ಲೆ ಅವರ ಕುಟುಂಬದ ಬಳಿ ಬರೋಬ್ಬರಿ ಬರೊಬ್ಬರಿ 68.58 ಕೋಟಿ ರೂ. ಮೌಲ್ಯದ ಆಸ್ತಿ
  • ಶಶಿಕಲಾ ಜೊಲ್ಲೆ ಬಳಿ 11.6 ಕೋಟಿ ರೂ. ಮೌಲ್ಯದ ಚರಾಸ್ತಿ ಇದ್ದರೆ, 56.98 ಕೊಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ.
  • ಶಿಕಲಾ ಜೊಲ್ಲೆ ಅವರ ಇಡೀ ಕುಟುಂಬದವರ ಬ್ಯಾಂಕ್​ ಖಾತೆಯಲ್ಲಿರುವ ಒಟ್ಟು ಹಣ 2.19 ಕೋಟಿ ರೂ.

ಬೆಳಗಾವಿ: ನಿಪ್ಪಾಣಿ ಶಾಸಕಿ, ಮುಜರಾಯಿ ಸಚಿವೆ, ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಶಿಕಲಾ ಜೊಲ್ಲೆ (Shashikala Jolle) ಅವರ ಕುಟುಂಬದ ಬಳಿ ಬರೋಬ್ಬರಿ ಬರೊಬ್ಬರಿ 68.58 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್​​ನಿಂದ ತಿಳಿದುಬಂದಿದೆ. ಶಶಿಕಲಾ ಜೊಲ್ಲೆ ಬಳಿ 11.6 ಕೋಟಿ ರೂ. ಮೌಲ್ಯದ ಚರಾಸ್ತಿ ಇದ್ದರೆ, 56.98 ಕೊಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಶಶಿಕಲಾ ಜೊಲ್ಲೆ ಹೆಸರಲ್ಲಿ 3.9 ಕೋಟಿ ರೂ‌., ಪತಿ ಅಣ್ಣಾಸಾಹೇಬ ಜೊಲ್ಲೆ ಹೆಸರಲ್ಲಿ 5.73 ಕೋಟಿ ರೂ‌. ಪುತ್ರರ ಹೆಸರಲ್ಲಿ 1.17 ಕೋಟಿ ರೂ. ಹಾಗೂ ಇತರರ ಹೆಸರಲ್ಲಿ 26 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.

ಸಚಿವೆ ಶಶಿಕಲಾ ಜೊಲ್ಲೆ ಹೆಸರಲ್ಲಿ 24.13 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತಿ ಹೆಸರಲ್ಲಿ 15.04 ಕೋಟಿ ರೂ., ಪುತ್ರನ ಹೆಸರಲ್ಲಿ 17.81 ಕೋಟಿ ರೂ. ಸೇರಿ ಒಟ್ಟು 56.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. 42.81 ಲಕ್ಷ ರೂ. ಹಣ ಶಶಿಕಲಾ ಜೊಲ್ಲೆರವರ ಬ್ಯಾಂಕ್ ಖಾತೆಯಲ್ಲಿದೆ.

ಕುಟುಂಬದವರ ಬ್ಯಾಂಕ್ ಖಾತೆಯಲ್ಲಿದೆ 2.19 ಕೋಟಿ ರೂ.

ಶಶಿಕಲಾ ಜೊಲ್ಲೆ ಅವರ ಇಡೀ ಕುಟುಂಬದವರ ಬ್ಯಾಂಕ್​ ಖಾತೆಯಲ್ಲಿರುವ ಒಟ್ಟು ಹಣ 2.19 ಕೋಟಿ ರೂ. ಇದಲ್ಲದೆ, 1.87 ಕೋಟಿ ರೂ. ಮೌಲ್ಯದ ವಿವಿಧ ಷೇರು ಹಾಗೂ ಬಾಂಡ್‌ಗಳನ್ನು ಅವರು ಖರೀದಿಸಿದ್ದಾರೆ. ಶಶಿಕಲಾ ಜೊಲ್ಲೆ ಬ್ಯಾಂಕುಗಳಿಂದ 80 ಲಕ್ಷ ರೂ. ವೈಯಕ್ತಿಕ ಸಾಲ ಹಾಗೂ 9.05 ಕೋಟಿ ರೂ. ಮೌಲ್ಯದ ವಿವಿಧ ಸಾಲ ಪಡೆದಿದ್ದಾರೆ. ಜೊಲ್ಲೆ ಕುಟುಂಬದ ಮೇಲೆ ಒಟ್ಟು 22.41 ಕೋಟಿ ರೂ. ಸಾಲವಿದೆ.

ಎಷ್ಟಿದೆ ಚಿನ್ನಾಭರಣ?

73 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿರುವ ಶಶಿಕಲಾ ಜೊಲ್ಲೆ ಬಳಿ ಒಟ್ಟಾರೆಯಾಗಿ 1.45 ಕೋಟಿ ರೂ. ಮೌಲ್ಯ ಚಿನ್ನ ಹಾಗೂ ಬೆಳ್ಳಿ ಆಭರಣ ಇವೆ. ವಿವಿಧ ಗ್ರಾಮಗಳಲ್ಲಿ 3.9 ಕೋಟಿ ರೂ. ಮೌಲ್ಯದ ಕೃಷಿ ಜಮೀನು ಹೊಂದಿದ್ದಾರೆ. 11.76 ಕೋಟಿ ರೂ. ಮೌಲ್ಯದ ಜಮೀನು ಇದೆ. 15.20 ಕೋಟಿ ರೂ. ಮೌಲ್ಯದ ವಾಣಿಜ್ಯ ಭೂಮಿಯನ್ನೂ ಹೊಂದಿದ್ದಾರೆ. ಒಟ್ಟಾರೆಯಾಗಿ ಜೊಲ್ಲೆ ಕುಟುಂಬ ಬಳಿ 21.85 ಕೋಟಿ ರೂ. ಮೌಲ್ಯದ ವಾಣಿಜ್ಯ ಭೂಮಿಯಿದೆ.

ಜೊಲ್ಲೆ ಕುಟುಂಬದ ಬಳಿ 10 ಹೈಬ್ರೀಡ್‌ ಹಸುಗಳು, 17 ದೇಸಿ ಹಸುಗಳು, 6 ಎಮ್ಮೆ, ಒಂದು ಕುದುರೆ ಹಾಗೂ 4 ನಾಯಿಗಳು ಇವೆ.

ಕಲಬುರಗಿ; ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್ 42 ಕೋಟಿ ಆಸ್ತಿಯ ಒಡೆಯ

ಕಲಬುರಗಿ ಜಿಲ್ಲೆ ಜೇವರ್ಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್ 42 ಕೋಟಿ ಆಸ್ತಿಯ ಒಡೆಯ ಎಂಬುದು ಅಫಿಡವಿಟ್​​ನಿಂದ ತಿಳಿದುಬಂದಿದೆ. ಅಜಯ್ ಸಿಂಗ್ ಹೆಸರಲ್ಲಿ 20.22 ಕೋಟಿ ರೂ. ಮೌಲ್ಯದ ಚರಾಸ್ತಿ, 21.44 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅಜಯ್ ಸಿಂಗ್ ಪತ್ನಿ ಹೆಸರಲ್ಲಿ 8.95 ಕೋಟಿ ರೂ. ಚರಾಸ್ತಿ, 3.40 ಕೋಟಿ ರೂ. ಸ್ಥಿರಾಸ್ತಿ ಇದೆ. ಅಜಯ್ ಸಿಂಗ್​ ಮಕ್ಕಳಿಬ್ಬರು 2.5 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ನೆಲೋಗಿ ಗ್ರಾಮ ಸೇರಿದಂತೆ ಅನೇಕ ಕಡೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಬೆಂಗಳೂರು ಸೇರಿದಂತೆ ಅನೇಕ ಕಡೆ ಸೈಟ್​ಗಳನ್ನು ಸಹ ಹೊಂದಿದ್ದಾರೆ. ಅನೇಕ ಕಂಪನಿಗಳ ಷೇರು​ಗಳನ್ನೂ ಡಾ.ಅಜಯ್ ಸಿಂಗ್ ಹೊಂದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More