ಡಾ: ಚಂದ್ರು ಲಮಾಣಿಗೆ ತೊಡಕಾದ ಸರ್ಕಾರಿ ವೈದ್ಯಕೀಯ ವೃತ್ತಿ: ಇಂದೇ ರಾಜೀನಾಮೆ ಅಂಗೀಕಾರ ಪತ್ರ ಸಲ್ಲಿಸಲು ಬಿಜೆಪಿ ಗಡುವು
ಶಿರಹಟ್ಟಿ ಹಾಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್ ಕೈತಪ್ಪಿದೆ. ರಾಮಣ್ಣ ಬದಲಿಗೆ ಡಾ: ಚಂದ್ರು ಲಮಾಣಿಗೆ ಹೈಕಮಾಂಡ್ ಮಣೆ ಹಾಕಿದೆ. ಆದರೆ ಡಾ: ಚಂದ್ರು ಲಮಾಣಿ ಅವರಿಗೆ ಡಾಕ್ಟರ್ ಹುದ್ದೆ ತೊಡಕಾಗಿದೆ.
ಗದಗ: ಶಿರಹಟ್ಟಿ ಹಾಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ (Dr. Chandru Lamani) ಟಿಕೆಟ್ ಕೈತಪ್ಪಿದೆ. ರಾಮಣ್ಣ ಬದಲಿಗೆ ಡಾ: ಚಂದ್ರು ಲಮಾಣಿಗೆ ಹೈಕಮಾಂಡ್ ಮಣೆ ಹಾಕಿದೆ. ಆದರೆ ಡಾ: ಚಂದ್ರು ಲಮಾಣಿ ಅವರಿಗೆ ಡಾಕ್ಟರ್ ಹುದ್ದೆ ತೊಡಕಾಗಿದೆ. ಈಗಾಗಲೇ ಚಂದ್ರು ಅವರು ತಮ್ಮ ವೈದ್ಯ ಹುದ್ದಗೆ ರಾಜೀನಾಮೆ ನೀಡಿದ್ದಾರೆ. ಆದರೆ ಆರೋಗ್ಯ ಇಲಾಖೆ ಇನ್ನೂ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಹೀಗಾಗಿ ಚಂದ್ರುಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಬಿಜೆಪಿ ಗಡುವು ನೀಡಿದೆ. ಇಂದು ರಾಜೀನಾಮೆ ಪತ್ರ ಸಲ್ಲಿಸುವಂತೆ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಡಾ: ಚಂದ್ರು ಲಮಾಣಿಗೆ ಸೂಚನೆ ನೀಡಿದ್ದಾರೆ. ಇನ್ನು ಚಂದ್ರು ಲಮಾಣಿ ನಾಮಪತ್ರ ಸಲ್ಲಿಕೆಗೆ ತೊಡಕು ಉಂಟಾಗಿದ್ದರಿಂದ ಹಾಲಿ ಶಾಸಕ ರಾಮಣ್ಣ ಲಮಾಣಿ ಇನ್ನೂ ಟಿಕೆಟ್ಗಾಗಿ ಲಾಬಿ ಮುಂದುವರೆಸಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ಗೆ ಟಿಕೆಟ್ ನೀಡುವಂತೆ ಕೊನೆ ಕ್ಷಣದಲ್ಲಿ ಟಿಕೆಟ್ಗಾಗಿ ಚಂದ್ರು ಲಮಾಣಿ ಸರ್ಕಸ್ ನಡೆಸಿದ್ದಾರೆ. ರಾಜಕೀಯ ಅಖಾಡಕ್ಕೆ ಧುಮಕಬೇಕು ಎನ್ನುವ ಕಾರಣಕ್ಕೆ ಸರ್ಕಾರಿ ವೈದ್ಯ ಹುದ್ದೆಗೆ 31 ಆಗಷ್ಟ 2021ಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಎರಡು ವರ್ಷಗಳಾದರೂ ಈವರಿಗೆ ರಾಜೀನಾಮೆ ಮಾತ್ರ ಅಂಗೀಕಾರವಾಗಿಲ್ಲ. ಹೀಗಾಗಿ ಡಾ. ಚಂದ್ರು ಲಮಾಣಿ ಸಂಕಷ್ಟಕ್ಕೆ ಈಡಾಗಿದ್ದಾರೆ.
ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭ ಮಾಡಿದ್ದ ಚಂದ್ರು ಲಮಾಣಿ
ಡಾ: ಚಂದ್ರು ಲಮಾಣಿಯವರು 2018 ಜುಲೈ 21 ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭ ಮಾಡಿದ್ದರು. ಇದರ ಮದ್ಯದಲ್ಲಿ ಅವರ ಮೇಲೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 2021 ಅಗಸ್ಟ್ 31 ರಂದು ರಾಜಿನಾಮೆ ಸಲ್ಲಿಸಿ, ಹೊರಗಡೆ ಬಂದಿದ್ದಾರೆ. ಆದರೆ ಇದುವರೆಗೂ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ.
ಓರ್ವ ಸರ್ಕಾರಿ ನೌಕರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬರೋದಿಲ್ಲ, ಬೇರೆಯವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿಯಲ್ಲಿ ಕೂಗು ಕೇಳಿ ಬಂದಿದೆ. ಗದಗ ಜಿಲ್ಲಾ ಎಸ್ಸಿ ಘಟಕ ಜಿಲ್ಲಾ ಉಪಾಧ್ಯಕ್ಷ ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ನೀಡಿದ್ದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದಿದ್ದಾರೆ.
ಕರ್ತವ್ಯ ಲೋಪ; ಆರೋಗ್ಯ ಇಲಾಖೆಗೆ ರಾಜೀನಾಮೆ ಪತ್ರ
ಡಾ.ಚಂದ್ರು ಲಮಾಣಿಯವರು ಶಿರಹಟ್ಟಿ ತಾಲೂಕಿನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯಿಂದ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಇಲಾಖೆಗೆ ಕಡತವನ್ನು ಕಳುಹಿಸಲಾಗಿದೆ.
ಇದನ್ನೂ ಓದಿ: ಗದಗ: ಶಿರಹಟ್ಟಿ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಸಿಕ್ಕಿದರೂ ಬಿ ಪಾರ್ಮ್ ಸಿಗೋದು ಅನುಮಾನ; ಕಾರಣ ಇಲ್ಲಿದೆ ನೋಡಿ
ಆದರೆ ಡಾ. ಚಂದ್ರು ಸೇರಿ ಮೂರು ವೈದ್ಯರು ರಾಜೀನಾಮೆ ಸಲ್ಲಿಸಿದ್ದು, ಈ ವಿಷಯ ಕುರಿತು ಆರೋಗ್ಯ ಇಲಾಖೆ ಆಯುಕ್ತರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಶಿರಹಟ್ಟಿ ಆಸ್ಪತ್ರೆ ವೈದ್ಯ ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತ ಇಲಾಖೆ ವಿಚಾರಣೆ ಕಡತ ಚಾಲ್ತಿಯಲ್ಲಿದೆ. ಹೀಗಾಗಿ ಸದರಿ ವೈದ್ಯರನ್ನು ಹೊರತುಪಡಿಸಿ ಉಳಿದ ವೈದ್ಯರ ಮುಂದಿನ ಕ್ರಮಕ್ಕಾಗಿ ಪತ್ರ ಬರೆದಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Mon, 17 April 23