ಗದಗ: ಶಿರಹಟ್ಟಿ ಅಭ್ಯರ್ಥಿಗೆ ಬಿಜೆಪಿ ಟಿಕೆಟ್​ ಸಿಕ್ಕಿದರೂ ಬಿ ಪಾರ್ಮ್ ಸಿಗೋದು ಅನುಮಾನ; ಕಾರಣ ಇಲ್ಲಿದೆ ನೋಡಿ

ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಕಮಲ ಪಕ್ಷದ ಟಿಕೆಟ್‌ ಪೈಟ್ ಭಾರಿ ಕೋಲಾಹಲ ಸೃಷ್ಟಿ ಮಾಡಿತ್ತು. ಹಾಲಿ ಶಾಸಕನಿಗೆ ಸೆಡ್ಡು ಹೊಡೆದು ಡಾ. ಚಂದ್ರು ಲಮಾಣಿ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಇದಕ್ಕೆ ರೊಚ್ಚಿಗೆದ್ದ ಹಾಲಿ ಶಾಸಕ ರಾಮಣ್ಣ ಲಮಾಣಿ ಬಂಡಾಯದ ಕಹಳೆ ಊದಿದ್ದರು. ಆದ್ರೆ, ಈಗ ಬಿಜೆಪಿ ಟಿಕೆಟ್ ಪಡೆದ ಅಭ್ಯರ್ಥಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಮಲ ಪಕ್ಷದ ಬಿ ಪಾರ್ಮ್ ಸಿಗೋದೆ ಡೌಟ್ ಎನ್ನಲಾಗುತ್ತಿದೆ‌. ಅಷ್ಟಕ್ಕೂ ಕಮಲದ ಟಿಕೆಟ್ ಸಿಕ್ಕರೂ, ಸ್ಪರ್ಧೆಗೆ ಕೊಕ್ಕೆ ಬಿಳೋದು ಯಾಕೇ ಅಂತೀರಾ ಇಲ್ಲಿದೆ ನೋಡಿ.

ಗದಗ: ಶಿರಹಟ್ಟಿ ಅಭ್ಯರ್ಥಿಗೆ ಬಿಜೆಪಿ ಟಿಕೆಟ್​ ಸಿಕ್ಕಿದರೂ ಬಿ ಪಾರ್ಮ್ ಸಿಗೋದು ಅನುಮಾನ; ಕಾರಣ ಇಲ್ಲಿದೆ ನೋಡಿ
ಬಿಜೆಪಿ ​ ಅಭ್ಯರ್ಥಿ ಡಾ. ಚಂದ್ರು ಲಮಾಣಿ
Follow us
|

Updated on:Apr 15, 2023 | 1:29 PM

ಗದಗ: ಜಿಲ್ಲೆಯ ಶಿರಹಟ್ಟಿ(Shirahatti) ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ(BJP)ಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಉಂಟಾಗಿತ್ತು. ಬಿಜೆಪಿ ಹೈಕಮಾಂಡ್​ ಅಳೆದು ತೂಗಿ ಡಾ. ಚಂದ್ರು ಲಮಾಣಿಗೆ ಟಿಕೆಟ್ ಪೈನಲ್ ಮಾಡಿದೆ. ಇದರಿಂದ ಕೆರಳಿದ್ದ ಹಾಲಿ ಶಾಸಕ ರಾಮಣ್ಣ ಲಮಾಣಿ ಬಂಡಾಯದ ಕಹಳೆ ಊದಿದ್ದಾರೆ. ಇನ್ನೇನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಅಖಾಡಕ್ಕೆ ಧುಮುಕಬೇಕು ಎನ್ನುವಷ್ಟರಲ್ಲಿ ಬಿಜೆಪಿ ಅಭ್ಯರ್ಥಿಗೆ ಭಾರಿ ಸಂಕಷ್ಟ ಎದುರಾಗಿದೆ. ಹೌದು ಡಾ. ಚಂದ್ರು ಲಮಾಣಿ(Dr. Chandru Lamani)ಮೂಲತಃ ಸರ್ಕಾರಿ ವೈದ್ಯ. ರಾಜಕೀಯ ಅಖಾಡಕ್ಕೆ ಧುಮಕಬೇಕು ಎನ್ನುವ ಕಾರಣಕ್ಕೆ ಸರ್ಕಾರಿ ವೈದ್ಯ ಹುದ್ದೆಗೆ 31 ಆಗಷ್ಟ 2021ಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ, ಎರಡು ವರ್ಷಗಳಾದ್ರೂ ಈವರಿಗೆ ರಾಜೀನಾಮೆ ಮಾತ್ರ ಅಂಗೀಕಾರವಾಗಿಲ್ಲ. ಹೀಗಾಗಿ ಡಾ. ಚಂದ್ರು ಲಮಾಣಿ ಸಂಕಷ್ಟಕ್ಕೆ ಈಡಾಗಿದ್ದಾರೆ.

ಟಿಕೆಟ್ ಘೋಷಣೆ ಆದರೂ ಈಗ ಬಿ ಫಾರ್ಮ್ ಸಿಗುತ್ತೋ ಇಲ್ವೋ ಎನ್ನುವ ಆತಂಕ

ಇದೀಗ ಲಡ್ಡು ಬಂದು ಬಾಯಿಗೆ ಬಂದು ಬಿದ್ರು ತಿನ್ನೋಕೆ ಆಗ್ತಾಯಿಲ್ಲ ಎನ್ನುವ ಹಾಗಾಗಿದೆ. ಹೌದು ಟಿಕೆಟ್ ಘೋಷಣೆ ಆದ್ರೂ ಈಗ ಬಿ ಫಾರ್ಮ್ ಸಿಗುತ್ತೋ ಇಲ್ವೋ ಎನ್ನುವ ಆತಂಕ ಶುರುವಾಗಿದೆ. ಒಂದು ವೇಳೆ ಬಿ ಫಾರ್ಮ್ ಸಿಕ್ಕರೂ ಸ್ಪರ್ಧೆಗೆ ಕಾನೂನು ಅಡ್ಡಿಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ:Karnataka Assembly Polls: ರಾಜಕಾರಣಿಗಳಿಗೆ ಸಾವಿನ ಮನೆಯಲ್ಲೂ ರಾಜಕೀಯದ ಮಾತು ಬೇಕೇ?

ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭ ಮಾಡಿದ್ದ ಚಂದ್ರು ಲಮಾಣಿ

ಡಾ: ಚಂದ್ರು ಲಮಾಣಿಯವರು 2018 ಜುಲೈ 21 ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭ ಮಾಡಿದ್ರು. ಇದರ ಮದ್ಯದಲ್ಲಿ ಅವರ ಮೇಲೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 2021 ಅಗಸ್ಟ್ 31 ರಂದು ರಾಜಿನಾಮೆ ಸಲ್ಲಿಸಿ, ಹೊರಗಡೆ ಬಂದಿದ್ದಾರೆ. ಆದರೆ ಇದುವರೆಗೂ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಓರ್ವ ಸರ್ಕಾರಿ ನೌಕರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬರೋದಿಲ್ಲ, ಬೇರೆಯವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿಯಲ್ಲಿ ಕೂಗು ಕೇಳಿ ಬಂದಿದೆ. ಗದಗ ಜಿಲ್ಲಾ ಎಸ್ಸಿ ಘಟಕ ಜಿಲ್ಲಾ ಉಪಾಧ್ಯಕ್ಷ ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ನೀಡಿದ್ರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದಿದ್ದಾರೆ.

ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗ ಕರ್ತವ್ಯ ಲೋಪ; ಆರೋಗ್ಯ ಇಲಾಖೆಗೆ ರಾಜೀನಾಮೆ ಪತ್ರ

ಇನ್ನು ಡಾ.ಚಂದ್ರು ಲಮಾಣಿಯವರು ಶಿರಹಟ್ಟಿ ತಾಲೂಕಿನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಡಾ: ಚಂದ್ರು ಲಮಾಣಿಯವರ ಗದಗ ಜಿಲ್ಲಾ ಆರೋಗ್ಯ ಇಲಾಖೆಗೆ ರಾಜೀನಾಮೆ ಪತ್ರವನ್ನು ಕಳುಹಿಸಿದರು, ಜಿಲ್ಲಾ ಆರೋಗ್ಯ ಇಲಾಖೆಯಿಂದ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಇಲಾಖೆಗೆ ಕಡತವನ್ನು ಕಳುಹಿಸಲಾಗಿದೆ. ಆದ್ರೆ, ಡಾ. ಚಂದ್ರು ಸೇರಿ ಮೂರು ವೈದ್ಯರು ರಾಜೀನಾಮೆ ಸಲ್ಲಿಸಿದ್ದು, ಈ ವಿಷಯ ಕುರಿತು ಆರೋಗ್ಯ ಇಲಾಖೆ ಆಯುಕ್ತರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಶಿರಹಟ್ಟಿ ಆಸ್ಪತ್ರೆ ವೈದ್ಯ ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತ ಇಲಾಖೆ ವಿಚಾರಣೆ ಕಡತ ಚಾಲ್ತಿಯಲ್ಲಿದೆ. ಹೀಗಾಗಿ ಸದರಿ ವೈದ್ಯರನ್ನು ಹೊರತುಪಡಿಸಿ ಉಳಿದ ವೈದ್ಯರ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ ಎಂದು ಪತ್ರ ಬರೆದಿದ್ದಾರೆ.

ಇದನ್ನೂ ಓದಿ:S Angara: ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆದ ಎಸ್. ಅಂಗಾರ, ಭಾಗೀರಥಿ ಮುರುಳ್ಯ ಪರ ಪ್ರಚಾರ ಮಾಡುವೆ

ಇನ್ನೇನೂ ನಾಮಪತ್ರ ಸಲ್ಲಿಸಲು ಸಜ್ಜಾದ ಡಾ. ಚಂದ್ರು ಲಮಾಣಿಗೆ ಈಗ ಸಂಕಷ್ಟ ಎದುರಾಗಿದೆ. ಡಾ.ಚಂದ್ರು ಲಮಾಣಿ ರಾಜೀನಾಮೆ ಅಂಗೀಕಾರ ಪತ್ರವನ್ನು ಪಡೆಯಲು ಬೆಂಗಳೂರಿಗೆ ತೆರಳಿದ್ದಾರೆ‌. ಇದೀಗ ಬಿಜೆಪಿ ಡಾ. ಚಂದ್ರು ಲಮಾಣಿಗೆ ಬಿ ಪಾರ್ಮ್ ಕೂಡ ನೀಡುತ್ತಿಲ್ಲವಂತೆ, ರಾಜೀನಾಮೆ ಅಂಗೀಕಾರ ಆಗದಿದ್ರೆ, ಅವರು ನಾಮಪತ್ರವನ್ನು ಸಲ್ಲಿಸಿದ್ರು ಅದು ತಿರಸ್ಕೃತವಾಗುವ ಆತಂಕ ಎದುರಾಗಿದೆ.

ಪ್ರೊಬೆಷನರಿ ಕ್ಲೀಯರ್​ ಆಗಿಲ್ಲ ಅಂದ್ರೆ ಖಾಯಂ ನೌಕರನಾಗಿ ಪರಿಗಣಿಸಿಲ್ಲ; ಡಾ. ಚಂದ್ರು ಲಮಾಣಿ

ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ಅವರು ಕೇಳಿದ್ರೆ, ರಾಜೀನಾಮೆ ನೀಡುವಾಗಿ ಪ್ರೋಬೆಷನರ್ ಅವಧಿ ಇನ್ನೂ ಪೂರ್ಣ ಆಗಿಲ್ಲ. ಆಗ ನಾನು ಖಾಯಂ ನೌಕರನಾಗಿರಲ್ಲಿಲ್ಲ. ಸ್ವಮೋಟೋ ಕೇಸ್ ಆಕಸ್ಮಿಕ ಲೋಕಾಯುಕ್ತರು ಮಾಡಿದ್ದಾರೆ. ಎರಡೂವರೆ ವರ್ಷದ ಹಿಂದೆ ಹೊರರೋಗಿಗಳ ಶುಲ್ಕು 2 ರೂಪಾಯಿ ಇದ್ದದ್ದು 5 ರೂ ಮಾಡಿತ್ತು. ಅದು ಇ.ಆರ್.ಎಸ್ ಕಮೀಟಿ ನಿರ್ಧಾರ ಮಾಡ್ತಾರೆ. ಗ್ರೂಪ್ ಡಿ ವೇತನ ಆಗಿಲ್ಲ. ವೈದ್ಯರು ನೋಡಿಲ್ಲ ಅನ್ನೋ ದೂರು ಇದೆ. ಆದ್ರೆ, ಯಾವುದೇ ಕ್ರಿಮಿನಲ್ ಆರೋಪವಿಲ್ಲ. ಒಂದೂವರೆ ವರ್ಷದ ಹಿಂದೆ ರಾಜಿನಾಮೆ ನೀಡಿದ್ದೇನೆ. ಪ್ರೊಬೆಷನರಿ ಕ್ಲೀಯರ್​ ಆಗಿಲ್ಲ ಅಂದ್ರೆ ಖಾಯಂ ನೌಕರ ಪರಿಗಣಿಸಿಲ್ಲ. ಇವತ್ತು ಬೆಂಗಳೂರಿಗೆ ಬಂದಿದ್ದೇನೆ. ನಾಳೆ ರಾಜಿನಾಮೆ ಸ್ವೀಕಾರ ಪತ್ರ ತರುತ್ತೇನೆ. ವಿರೋಧಿಗಳು ಈ ರೀತಿ ಷಡ್ಯಂತ್ರ ನಡೆಸಿದ್ದಾರೆ ಅಂತ ಕಿಡಿಕಾರಿದ್ದಾರೆ.

ಇದನ್ನೂ ಓದಿ:Kanakapura Assembly Constituency: ಅಸೆಂಬ್ಲಿ ಚುನಾವಣೆ ಸಮ್ಮುಖದಲ್ಲಿ ಬಂಡೆಗಳ ನಾಡು ಕನಕಪುರ ಕ್ಷೇತ್ರ ರಾಜಕೀಯವಾಗಿ ಹೇಗಿದೆ?

ಇದೀಗ ಕೈಗೆ ಬಂದು ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಅಭ್ಯರ್ಥಿ ಡಾ: ಚಂದ್ರು‌ ಲಮಾಣಿಯ ರಾಜೀನಾಮೆ ಅಂಗೀಕಾರ ಆಗುತ್ತಾ, ಅಥವಾ ತಿರಸ್ಕಾರ ಆಗುತ್ತಾ ಎನ್ನುವುದು ಕೂತುಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಕಮಲ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಮತ್ತೆ ಹೊಸ ಭರಸವೆ ಮೂಡಿದ್ದು, ಮಾತ್ರ ಸುಳ್ಳಲ್ಲ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:28 pm, Sat, 15 April 23

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ