
ಶಿವಮೊಗ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯ ನಾಯಕ್ ಗೆಲುವು ಸಾಧಿಸಿದ್ದಾರೆ.
2008 ರಲ್ಲಿ ಬಿಜೆಪಿ ಅಭ್ಯರ್ಥಿ ಕೆಜಿ ಕುಮಾರಸ್ವಾಮಿ ಸುಮಾರು 32 ಸಾವಿರ ಮತಗಳಿಂದ ಗೆದ್ದಿದ್ದರೆ, 2013ರಲ್ಲಿ ಶಾರದಾ ಪೂರ್ಯ ನಾಯಕ್ 278 ಮತಗಳ ಅಲ್ಪ ಮುನ್ನಡೆಯಿಂದ ಗೆಲುವು ಸಾಧಿಸಿದ್ದರು. ಇನ್ನು 2018ರಲ್ಲಿ ಅಶೋಕ್ ನಾಯಕ್ ಸುಮಾರು 4 ಸಾವಿರ ಮತಗಳಿಂದ ವಿಜಯಿಯಾಗಿದ್ದರು.
ಕ್ಷೇತ್ರ ಪುನರಚನೆ ಬಳಿಕ ಸೃಷ್ಟಿಯಾದ ಶಿವಮೊಗ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರವು ಇಲ್ಲಿಯವರೆಗೆ ಮೂರು ಚುನಾವಣೆಗಳನ್ನು ಕಂಡಿದೆ. ಇದರಲ್ಲಿ ಎರಡು ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರೆ ಒಮ್ಮೆ ಜೆಡಿಎಸ್ ಗೆಲುವು ದಾಖಲಿಸಿದೆ.
ಈ ಬಾರಿ ಹಾಲಿ ಶಾಸಕ ಅಶೋಕ್ ನಾಯಕ್ಗೆ ಮತ್ತೆ ಬಿಜೆಪಿ ಟಿಕೆಟ್ ನೀಡಿದ್ದರೆ, ಜೆಡಿಎಸ್ನಿಂದ ಶಾರದಾ ಪೂರ್ಯ ನಾಯಕ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ನಿಂದ ಡಾ. ಶ್ರೀನಿವಾಸ್ ಕರಿಯಣ್ಣ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಚುನಾವಣೆಯ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ