ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ: ಸಿದ್ದರಾಮಯ್ಯ ಸ್ಪಷ್ಟನೆ

|

Updated on: Apr 22, 2023 | 8:28 PM

ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ. ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು: ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ. ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿಗೆ ಸೀಮಿತವಾಗಿ ಮಾತ್ರ ನಾನು ಹೇಳಿಕೆ ನೀಡಿದ್ದೇನೆ. ಈ ಹಿಂದೆ ಸಿಎಂ ಆಗಿದ್ದ ಲಿಂಗಾಯತ ಸಮಾಜದವರು ಪ್ರಮಾಣಿಕರಾಗಿದ್ದರು. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಜೆ.ಹೆಚ್‌.ಪಟೇಲ್‌, S.R.ಕಂಠಿ ಸೇರಿ ಲಿಂಗಾಯತ ಸಮುದಾಯದ ಸಿಎಂಗಳು ಅತ್ಯಂತ ಹಾನೆಸ್ಟ್‌ ಆಗಿದ್ದರು. ನನ್ನ ಹೇಳಿಕೆಯನ್ನು ಬಿಜೆಪಿ ಸೋಷಿಯಲ್ ಮೀಡಿಯಾ ತಿರುಚುತ್ತಿದೆ. ಚುನಾವಣೆ ಹಿನ್ನೆಲೆ ನನ್ನ ಹೇಳಿಕೆ ತಿರುಚಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಲಿಂಗಾಯತರ ಮೇಲೆ ವಿಶ್ವಾಸ ಇಲ್ಲದಿದ್ದರೆ ಏಕೆ ಇಷ್ಟು ಸೀಟ್‌ ನೀಡುತ್ತಿದ್ದೆವು ಎಂದು ಪ್ರಶ್ನಿಸಿದರು.

ಲಿಂಗಾಯತರೇ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿದ್ದಾರೆ

ಲಿಂಗಾಯತ ಅಸ್ತ್ರ ಎಂಬ ಪ್ರಶ್ನೆಗೆ ಮಾತ್ರ ನಾನು ಉತ್ತರ ನೀಡಿದ್ದೇನೆ. ಈಗಾಗಲೇ ಲಿಂಗಾಯತರೇ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಲಿಂಗಾಯತರೇ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿದ್ದಾರೆ. ಸೋಮಣ್ಣ, RSS ಏನೇ ಮಾಡಿದ್ರು ಜನ ಕೈ ಹಿಡಿಯುತ್ತಾರೆ. ಸಂತೋಷ್​ಗೂ, ಸೋಮಣ್ಣಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ವರುಣ ಕ್ಷೇತ್ರದಲ್ಲೇ ನನ್ನನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ: ಸಿದ್ದರಾಮಯ್ಯ

ಜೆಡಿಎಸ್ ಮತ್ತೆ ಬಿಜೆಪಿಗೆ ಮತ ಹಾಕದಂತೆ ಸಿದ್ಧರಾಮಯ್ಯ ಕರೆ

ನನ್ನ ಸೋಲಿಸಲು, ದಲಿತ ಮತ ವಿಭಜನೆ ಮಾಡಲು ಜೆಡಿಎಸ್ ಹಾಗೂ ಬಿಎಸ್ಪಿಯಿಂದ ದಲಿತ ಅಭ್ಯರ್ಥಿ ಗಳನ್ನು ಹಾಕಿದ್ದಾರೆ. ಜೆಡಿಎಸ್, ಬಿಎಸ್ಪಿಗೆ ಮತ ಹಾಕಿದ್ರೆ ಬಿಜೆಪಿಗೆ ಹೋಗುತ್ತದೆ. ಹೀಗಾಗಿ ಬಿಎಸ್ಪಿ, ಜೆಡಿಎಸ್​ಗೆ ಮತ ಹಾಕಬೇಡಿ. ನನಗೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಿ. ಬಿಎಸ್ಪಿ ಇಲ್ಲಿ ಗೆಲ್ಲೋದಿಲ್ಲ, ಆದರೆ ಅವರು ನನಗೆ ತೊಂದರೆ ಕೊಡೋಕೆ ನಿಂತಿರೋದು. ಜೆಡಿಎಸ್ ಮತ್ತೆ ಬಿಜೆಪಿ ಅಭ್ಯರ್ಥಿಗಳನ್ನು ತಿರಸ್ಕಾರ ಮಾಡಬೇಕು ಎಂದು ಪ್ರಚಾರದಲ್ಲಿ ಹೇಳಿದರು.

RSS, ಬಿಜೆಪಿ, ಸೋಮಣ್ಣ ಏನೇ ಮಾಡಿದರೂ ಪ್ರಯೋಜನವಾಗಲ್ಲ

ವರುಣ ಕ್ಷೇತ್ರದಲ್ಲೇ ನನ್ನನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವರುಣ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಹೇಳಿದರು. RSS, ಬಿಜೆಪಿ, ಸೋಮಣ್ಣ ಏನೇ ಮಾಡಿದರೂ ಪ್ರಯೋಜನವಾಗಲ್ಲ. ಆದರೆ ವರುಣ ವಿಧಾನಸಭಾ ಕ್ಷೇತ್ರದ ಜನತೆ ನನ್ನ ಕೈಹಿಡಿಯುತ್ತಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದೆ, ಲಿಂಗಾಯತರೇ ಸಿಎಂ ಆಗಿರುವುದು.

ಇದನ್ನೂ ಓದಿ: Siddaramaiah: ನನ್ನನ್ನು ಸೋಲಿಸಲೆಂದೇ ವರುಣಾಕ್ಕೆ ಬಂದ ಬಿಎಲ್​ ಸಂತೋಷ್; ಸಿದ್ದರಾಮಯ್ಯ

ಇವಾಗ ಅವರೇ ಅಲ್ವ ಭ್ರಷ್ಟಾಚಾರ ಮಾಡಿ ಕೆಟ್ಟಹೆಸರು ತಂದಿರುವುದು ಎಂದು ಕಿಡಿಕಾರಿದರು. ಈ ಚುನಾವಣೆ ಮಹತ್ತರವಾದ ಚುನಾವಣೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನದ ಮುಂದೆ ಯಾರು ಎಷ್ಟೇ ದ್ವೇಷದ ರಾಜಕಾರಣ ಮಾಡಿದರು ಅದು ನಗಣ್ಯ. ಎರಡು ಬಾರಿ ವರುಣದಿಂದ ಗೆಲ್ಸಿದ್ದೀರಿ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:28 pm, Sat, 22 April 23