ಭಾಸ್ಕರ್ ರಾವ್​ಗೆ ಟಿಕೆಟ್ ನೀಡಿದಕ್ಕೆ ಆಕ್ರೋಶ: ಸೈಲೆಂಟ್ ಸುನೀಲ್ ಬೆಂಬಲಿಗರಿಂದ ಬಿಜೆಪಿ ಕಚೇರಿ ಎದುರು ಗಲಾಟೆ

|

Updated on: Apr 12, 2023 | 6:10 PM

ಸೈಲೆಂಟ್ ಸುನೀಲ್​ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರಿಂದ ಗಲಾಟೆ ಮಾಡಲಾಗಿದೆ. ಭಾಸ್ಕರ್ ರಾವ್​ಗೆ ಟಿಕೆಟ್ ನೀಡಿದಕ್ಕೆ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಭಾಸ್ಕರ್ ರಾವ್​ಗೆ ಟಿಕೆಟ್ ನೀಡಿದಕ್ಕೆ ಆಕ್ರೋಶ: ಸೈಲೆಂಟ್ ಸುನೀಲ್ ಬೆಂಬಲಿಗರಿಂದ ಬಿಜೆಪಿ ಕಚೇರಿ ಎದುರು ಗಲಾಟೆ
ಸೈಲೆಂಟ್​ ಸುನೀಲ್​ಬೆಂಬಲಿಗರಿಂದ ಬಿಜೆಪಿ ಕಚೇರಿ ಎದುರು ಪ್ರತಿಭಟನೆ
Follow us on

ಬೆಂಗಳೂರು: ಸೈಲೆಂಟ್ ಸುನೀಲ್​ಗೆ (Silent Sunil) ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರಿಂದ ಗಲಾಟೆ ಮಾಡಲಾಗಿದೆ. ಭಾಸ್ಕರ್ ರಾವ್​ಗೆ ಟಿಕೆಟ್ ನೀಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಚಾಮರಾಜಪೇಟೆ ಕ್ಷೇತ್ರಕ್ಕೆ ಅನ್ಯಾಯ ಆಗಿದೆ ಅಂತ ಗಲಾಟೆ ಮಾಡಲಾಗಿದೆ. ಒಂದು ಕಾಲದಲ್ಲಿ ರೌಡಿಸಂ ಜಗತ್ತಲ್ಲಿ ಸದ್ದು ಮಾಡಿದ್ದವರು ಇದೀಗ ಏಕಾಏಕಿ ಸಮಾಜ ಸೇವೆ ಮಂತ್ರ ಜಪಿಸಿ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದರು. ಅದರಲ್ಲೂ ಬೆಂಗಳೂರಿನ ರೌಡಿ ಶೀಟರ್ ಸೈಲೆಂಟ್ ಸುನೀಲ  ಸೈಲೆಂಟ್ ಆಗಿಯೇ ಪಾಲಿಟಿಕ್ಸ್​ಗೆ ಪ್ರವೇಶಿಸಲು ಚಾಮರಾಜಪೇಟೆ ಕ್ಷೇತ್ರದಿಂದ ಕಣಕ್ಕಿಳಿಯ ತಯಾರಿ ನಡೆಸಿದ್ದರು. ಸೈಲೆಂಟ್ ಸುನೀಲ್​ ರಾಜಕೀಯಕ್ಕೆ ಬರಲು ತಯಾರಿ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಸುತ್ತಲು ರೌಡಿಗಳನ್ನು ಹಾಕಿಕೊಂಡು ತಿರುಗುತಿದ್ದವರು ಎಂಎಲ್ಎ, ಎಂಪಿಗಳೊಂದಿಗೆ ತಿರುಗುತ್ತಿದ್ದರು.

ತಾನೊಬ್ಬ ರೌಡಿ ಎನ್ನುವ ಪಟ್ಟ ಹೊಂದಿದ್ದರೆ ಸಮಾಜದಲ್ಲಿ ಕೊನೆಯತನಕವೂ ರೌಡಿಯಾಗಿಯೇ ಇರಬೇಕಾಗುತ್ತದೆ. ಅದರೆ ಅದೇ ರೌಡಿ ಎನ್ನುವ ಹಣೆಪಟ್ಟಿಯ ಬದಲು ರಾಜಕೀಯ ನಾಯಕ ಎಂದು ಬದಲಾದರೆ ಯಾವುದೇ ಆತಂಕ ಇರುವುದಿಲ್ಲ ಎನ್ನುವ ನಿಲುವಿಗೆ ಬಂದಿರುವಂತಿತ್ತು.

ಇದನ್ನೂ ಓದಿ: ವರುಣಾ ಕುರುಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸೋಮಣ್ಣ ಮಣಿಸಲು ರಹಸ್ಯ ಸ್ಥಳದಲ್ಲಿ ಸಿದ್ದರಾಮಯ್ಯ ಮತ್ತು ಆಪ್ತರಿಂದ ತಂತ್ರಗಾರಿಗೆ

ಆದರೆ ಯಾವಾಗ ಸುನೀಲ್​ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡರೋ ಅಂದಿನಿಂದ ವಿಪಕ್ಷಗಳಿಗೆ ಅಸ್ತ್ರವೊಂದು ಸಿಕ್ಕಂತಾಗಿತ್ತು. ಸೈಲೆಂಟ್ ಸುನೀಲ್​ ಪಕ್ಷ ಸೇರುತ್ತಿರುವ ಬಗ್ಗೆ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ರೌಡಿ ಮೋರ್ಚಾ ತೆರೆಯುವುತ್ತಿದ್ದಾರೆ ಎಂಬಿತ್ಯಾದಿ ಟೀಕೆಗಳನ್ನು ಕಾಂಗ್ರೆಸ್ ನಡೆಸಿತ್ತು.

ಸೈಲೆಂಟ್ ಸುನೀಲ್ ಸದಸ್ಯತ್ವ ರದ್ದು

ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಪಕ್ಕಾವಾಗುತ್ತಿದ್ದಂತೆ ಬಿಜೆಪಿ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಬಿಜೆಪಿ ಘಟಕ ರದ್ದುಗೊಳಿಸಿತ್ತು. ಸುನೀಲ್ ಬಿಜೆಪಿ ಸೇರಿದ್ದ ಬಗ್ಗೆ ಫೋಟೋ ವೈರಲ್ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಸುನೀಲ್ ಹೆಸರಿನ ಸದಸ್ಯತ್ವಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: Explainer: ಸಿದ್ದರಾಮಯ್ಯ ವಿರುದ್ಧ ಸೋಮಣ್ಣರನ್ನೇ ಆಯ್ಕೆ ಮಾಡಿದ್ದೇಕೆ? ಬಿಜೆಪಿ ಹೈಕಮಾಂಡ್​ನ ಲೆಕ್ಕಾಚಾರವೇನು? ಇಲ್ಲಿದೆ ವರುಣಾ ಗ್ರೌಂಡ್ ರಿಪೋರ್ಟ್

ಈ ಬಗ್ಗೆ ಟಿವಿ9 ಜೊತೆ ಮಾಹಿತಿ ಹಂಚಿಕೊಂಡ ಅವರು, ಸೈಲೆಂಟ್ ಸುನೀಲನನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿಲ್ಲ. ಸದಸ್ಯತ್ವ ನೋಂದಣಿ ವೇಳೆ ಆನ್‌ಲೈನ್‌ ಮೂಲಕ ಬಿಜೆಪಿ ಸದಸ್ಯತ್ವ ಪಡೆದಿದ್ದನು. ಈ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಘಟಕದಿಂದ ರದ್ದುಪಡಿಸಿದ್ದೇವೆ. ಸುನೀಲ್ ಸದಸ್ಯತ್ವ ರದ್ದಿನ ಬಗ್ಗೆ ರಾಜ್ಯ ಘಟಕಕ್ಕೂ ಶಿಫಾರಸು ಮಾಡಲಾಗಿದೆ. ಈ ರೀತಿಯ ಘಟನೆಯಿಂದ ಬಿಜೆಪಿಗೂ ಮುಜುಗರವಾಗಿದೆ ಎಂದು ಹೇಳಿದ್ದರು.

ಜಮೀರ್ ಹಣಿಯಲು ನಡೆದಿತ್ತಾ ‘ಸೈಲೆಂಟ್’ ಪ್ಲ್ಯಾನ್?

ಬೆಂಗಳೂರಿನ ಚಾಮರಾಜಪೇಟೆ ಅಕ್ಷರಶಃ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಕೋಟೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್ ಮತಗಳಿಗೆ ಗಾಳ ಹಾಕುವುದು ಅಷ್ಟು ಸುಲಭದ ಮಾತಲ್ಲ. ಆದರೆ ಇದೇ ಏರಿಯಾದಲ್ಲಿ ಹವಾ ಇಟ್ಟಿರೋ ಸೈಲೆಂಟ್ ಸುನೀಲ, ಚಾಮರಾಜಪೇಟೆಯಲ್ಲಿ ಕಣಕ್ಕಿಳಿಯಲು ಸ್ಕೆಚ್ ಹಾಕಿದ್ದಾನೆ ಎನ್ನಲಾಗಿತ್ತು. ಇದಕ್ಕೆ ರಾಜಕೀಯ ಪಕ್ಷಗಳು, ಜಮೀರ್ ಎದುರಾಳಿಗಳ ಕೃಪಾಕಟಾಕ್ಷ ಸುನೀಲನ ಮೇಲಿದೆ ಎಂದು ಹೇಳಲಾಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Wed, 12 April 23