ಗಣಿ ಧಣಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಯಾರಿಗೆ ಗೊತ್ತಿಲ್ಲ ಹೇಳಿ. ರಾಜಕೀಯ ವೈರತ್ವ ಬೆಳೆಸಿಕೊಂಡಿರುವ ರೆಡ್ಡಿ-ರಾಮುಲು ಜೋಡಿ ಈ ದಿಕ್ಕಿನಿಂದ ಪೀಕಲಾಟ ಶುರುವಾಗುತ್ತೆ ಎಂದು ನಿರೀಕ್ಷಿಸಿರಲಿಲ್ಲವೇನೋ!? ಆನೆ ನಡೆದಿದ್ದೇ ದಾರಿ ಎಂದು ಸಾಗುತ್ತಿರುವ ಜನಾರ್ದನ ರೆಡ್ಡಿಯಂತೂ ಖಂಡಿತಾ ಈ ದಿಕ್ಕಿನಿಂದಲೂ (Social Media) ತನಗೆ ಸಂಕಟ ಶುರುವಾಗುತ್ತೆ ಎಂದು ನಿರೀಕ್ಷಿಸಿರಲಿಲ್ಲ! ಕೆಆರ್ ಪಿಪಿ ಪಕ್ಷ ಸ್ಪಾಪನೆ ಮಾಡಿ ಹೊಸ ಇನ್ಸಿಂಗ್ ಆರಂಭಿಸಿರುವ ಜನಾರ್ದನ ರೆಡ್ಡಿ (Janardhana Reddy) ಹಾಗೂ ಸಾರಿಗೆ ಸಚಿವ ಶ್ರೀರಾಮುಲುಗೆ (Sriramulu) ಇದೀಗ ಹೊಸದೊಂದು ಪೀಕಲಾಟ ಶುರುವಾಗಿದೆ. HacKING ಗಳ ಹಾವಳಿಗೆ ಅಂತರಂಗದ ಆಪ್ತರಿಬ್ಬರೂ ಸುಸ್ತಾಗಿ ಹೋಗಿದ್ದಾರೆ. ಅಷ್ಟಕ್ಕೂ ರೆಡ್ಡಿ-ರಾಮುಲುಗೆ ಹ್ಯಾಕರ್ಸ್ (Hacker) ಮಾಡ್ತಿರೋದಾದ್ರು ಎನೂ.. ಆ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ಒಂದೆಡೆ ಲಂಗುಲಗಾಮಿಲ್ಲದೆ, ಕೆಆರ್ ಪಿಪಿ ಪಕ್ಷದ ಸಮಾರಂಭಕ್ಕೆ ಸ್ವಾಗತ ಕೋರಿ ಪೊಸ್ಟ್ ಹಾಕಿರುವ ಸಾರಿಗೆ ಸಚಿವ ರಾಮುಲು. ಈ ಮಧ್ಯೆ, ಜನಾರ್ದನ ರೆಡ್ಡಿ ಸ್ಥಾಪನೆ ಮಾಡಿರುವ ಕೆಆರ್ ಪಿಪಿ ಪಕ್ಷದ ಫೇಸ್ ಬುಕ್ ಅಕೌಂಟ್ ಅನ್ನೇ ಹ್ಯಾಕ್ ಮಾಡಿದ ಸೈಬರ್ ಕಳ್ಳರು. ಯೆಸ್. ಜನಾರ್ದನ ರೆಡ್ಡಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಇಬ್ಬರು ಆಪ್ತರಾದ್ರು ಪಕ್ಷ ಬೇರೆ ಬೇರೆ. ಬಿಜೆಪಿ ಇಂದ ದೂರವಾಗಿ ಹೊಸ ಪಕ್ಷ ಕಟ್ಟಿರುವ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಸಚಿವ ಶ್ರೀರಾಮುಲು ಈಗ ರಾಜಕೀಯ ವೈರಿಗಳು. ಯೆಸ್. ಇದನ್ನೆ ಅಸ್ತ್ರವಾಗಿ ಮಾಡಿಕೊಂಡಿರುವ ಕಿಡಿಗೇಡಿ ಹ್ಯಾಕರ್ಗಳು ಈ ಇಬ್ಬರು ನಾಯಕರಿಗೆ ಈಗ ಪೀಕಲಾಟ ತಂದಿಟ್ಟಿದ್ದಾರೆ ನೋಡಿ!
ಜನಾರ್ದನ ರೆಡ್ಡಿ-ರಾಮುಲುಗೆ ಕಿಡಿಗೇಡಿ ಹ್ಯಾಕರ್ಗಳು ತಂದಿಟ್ಟರು ಪೀಕಲಾಟ! ರೆಡ್ಡಿ ಪಕ್ಷದ ಸಮಾರಂಭಕ್ಕೆ ಸ್ವಾಗತ ಕೋರಿದ ಶ್ರೀರಾಮುಲು!?
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಯಾರೂ (ಪರಮ)ಮಿತ್ರರೂ ಅಲ್ಲ. ಇದನ್ನೆ ಅಸ್ತ್ರವಾಗಿ ಮಾಡಿಕೊಂಡಿರುವ ಕೆಲ ಹ್ಯಾಕರ್ಸ್ ಗಳು ಇದೀಗ ಇಬ್ಬರೂ ರಾಜಕಾರಣಿಗಳ ಮಧ್ಯೆ ಆಟ ತಂದಿಟ್ಟಿದ್ದಾರೆ ನೋಡಿ. ಬಿಜೆಪಿಯಿಂದ ದೂರವಾಗಿ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಪಾಪನೆ ಮಾಡಿದ್ದಾರೆ. ಇನ್ನು ಸಾರಿಗೆ ಸಚಿವ ಶ್ರೀರಾಮುಲು ಅಧಿಕೃತವಾಗಿ ತಾವು ಕೆಆರ್ ಪಿಪಿ ಪಕ್ಷದ ವಿರುದ್ಧವೇ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ಇದನ್ನೆ ಅಸ್ತ್ರವಾಗಿ ಮಾಡಿಕೊಂಡಿರುವ ಹ್ಯಾಕರ್ಸ್ ಗಳು ಒಬ್ಬರ ಅಕೌಂಟ್ ನಿಂದ ಇನ್ನೊಬ್ಬರಿಗೆ ಮೇಸೇಜ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಪೊಸ್ಟ್ ಕಂಡು ಕಾರ್ಯಕರ್ತರು ಸಹ ಶಾಕ್ ಗೆ ಒಳಗಾಗುತ್ತಿದ್ದಾರೆ. ಆರಂಭದಲ್ಲೆ ಕೆಆರ್ ಪಿಪಿ ಪಕ್ಷದ ಫೇಸ್ ಬುಕ್ ಅಕೌಂಟ್ ಹ್ಯಾಕ್ ಮಾಡಿರುವುದರ ವಿರುದ್ದ ರೆಡ್ಡಿ ಬೆಂಬಲಿಗರು ಸೈಬರ್ ಠಾಣೆಯ ಮೊರೆ ಹೋಗಿದ್ದಾರೆ. ತಮ್ಮ ಪಕ್ಷದ ಹೆಸರನ್ನ ಕೆಡಿಸಲು ಫೇಸ್ ಬುಕ್ ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ.
ಕೆಆರ್ ಪಿಪಿ ಪಕ್ಷಕ್ಕೂ ತಮ್ಮಗೂ ಸಂಬಂಧವಿಲ್ಲವೆಂದು ಸಾರಿಗೆ ಸಚಿವ ಶ್ರೀರಾಮುಲು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದ್ರೆ ಶ್ರೀರಾಮುಲುರ ಫೇಸ್ ಬುಕ್ ಅಕೌಂಟ್ ನಿಂದಲೇ ರೆಡ್ಡಿ ಪಕ್ಷದ ಕಾರ್ಯಕ್ರಮ ಸಮಾರಂಭಗಳಿಗೆ ಶ್ರೀರಾಮುಲು ಹೆಸರಿನಲ್ಲಿ ಸ್ವಾಗತ ಕೋರಿ ಪೊಸ್ಟ್ ಮಾಡಲಾಗುತ್ತಿದೆ! ಇದು ಕೆಆರ್ ಪಿಪಿ ಪಕ್ಷ ಅಷ್ಠೇ ಅಲ್ಲ ಬಿಜೆಪಿ ಕಾರ್ಯಕರ್ತರು. ನಾಯಕರಲ್ಲೂ ಶಾಕ್ ಮೂಡಿಸಿದೆ. ಶ್ರೀರಾಮುಲು ಅಕೌಂಟ್ ನಿಂದ ಪೊಸ್ಟ್ ಮಾಡಿದ್ಯಾರು? ಶ್ರೀರಾಮುಲು ಫೇಸ್ ಬುಕ್ ಅಕೌಂಟ್ ಸಹ ಹ್ಯಾಕ್ ಆಗಿಬಿಟ್ಟಿದೆಯಾ ಅಂತಾ ಬಳ್ಳಾರಿ ಜಿಲ್ಲೆಯಲ್ಲೀಗ ಚರ್ಚೆ ಶುರುವಾಗಿದೆ. ಅಲ್ಲದೇ ಶ್ರೀರಾಮುಲು ಫೇಸ್ ಬುಕ್ ನಿಂದಲೇ ರೆಡ್ಡಿ ಪಕ್ಷದ ಸಮಾರಂಭಕ್ಕೆ ಸ್ವಾಗತ ಕೋರಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ದಶಕಗಳ ಕಾಲ ಸ್ನೇಹಿತರಾಗಿದ್ದ ರೆಡ್ಡಿ-ರಾಮುಲು ಇದೀಗ ತದ್ದಿರುದ್ದವಾಗಿ ರಾಜಕೀಯ ಶುರು ಮಾಡಿದ್ದಾರೆ. ಇದನ್ನೆ ಅಸ್ತ್ರವಾಗಿ ಮಾಡಿಕೊಂಡಿರುವ ಹ್ಯಾಕರ್ಸ್ ಗಳು ವಿಭಿನ್ನವಾಗಿ ಪೊಸ್ಟ್ ಹಾಕಿ ಇಬ್ಬರೂ ನಾಯಕರ ಮಧ್ಯೆ ತಂದಿಡುತ್ತಿದ್ದಾರೆ. ಹ್ಯಾಕರ್ಸ್ ಗಳ ಹಾವಳಿಗೆ ರೆಡ್ಡಿ-ರಾಮುಲು ಇಕ್ಕಟ್ಟಿಗೆ ಸಿಲುಕಿದ್ದು. ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಯಾರ ವಿರುದ್ದ ಪರವಾಗಿ ಪೊಸ್ಟ್ ಹಾಕ್ತಾರೆ ಅನ್ನೋದು ಕುತೂಹಲಕಾರಿಯಾಗಿದೆ.
ವರದಿ: ವೀರೇಶ್ ದಾನಿ, ಟಿವಿ9, ಬಳ್ಳಾರಿ