ಇಂದಿನ ಕಾಂಗ್ರೆಸ್​ ನಾಯಕರ ರಾಜ್ಯ ಪ್ರವಾಸ; ಸೋನಿಯಾ ಗಾಂಧಿ, ರಾಹುಲ್​, ಸಿದ್ದರಾಮಯ್ಯ​ ಸೇರಿ ಘಟಾನುಘಟಿ ನಾಯಕರು ಎಲ್ಲೆಲ್ಲಿ ಪ್ರಚಾರ ನಡೆಸಲಿದ್ದಾರೆ ಗೊತ್ತಾ?

|

Updated on: May 06, 2023 | 8:46 AM

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ರಾಜ್ಯದಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್​ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದೆ. ರಾಹುಲ್​ ಗಾಂಧಿ, ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ, ಸಿದ್ದರಾಮಯ್ಯ, ನಟಿ ರಮ್ಯಾ, ಶಿವರಾಜ್ ಕುಮಾರ್​​ ಸೇರಿದಂತೆ ಘಟಾನುಘಟಿ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.

ಇಂದಿನ  ಕಾಂಗ್ರೆಸ್​ ನಾಯಕರ ರಾಜ್ಯ ಪ್ರವಾಸ; ಸೋನಿಯಾ ಗಾಂಧಿ, ರಾಹುಲ್​, ಸಿದ್ದರಾಮಯ್ಯ​ ಸೇರಿ ಘಟಾನುಘಟಿ ನಾಯಕರು ಎಲ್ಲೆಲ್ಲಿ ಪ್ರಚಾರ ನಡೆಸಲಿದ್ದಾರೆ ಗೊತ್ತಾ?
ರಾಹುಲ್​ ಗಾಂಧಿ, ಸೋನಿಯಾ ಗಾಂಧಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ರಾಜ್ಯದಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್​ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದೆ. ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi), ರಾಹುಲ್​ ಗಾಂಧಿ(Rahul Gandhi), ಸಿದ್ದರಾಮಯ್ಯ(Siddaramaiah), ನಟಿ ರಮ್ಯಾ, ಶಿವರಾಜ್ ಕುಮಾರ್​​ ಸೇರಿದಂತೆ ಘಟಾನುಘಟಿ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇಂದು(ಮೇ.6) ಕೂಡ ವಿವಿಧ ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ, ರೋಡ್ ಶೋ ನಡೆಸಲಿದ್ದಾರೆ. ಹಾಗಿದ್ದರೆ ಯಾವ ನಾಯಕರು ಯಾವ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ? ಇಲ್ಲಿದೆ ಮಾಹಿತಿ.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ

ಇಂದು(ಮೇ.6) ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಪ್ರಚಾರ ನಡೆಸಲಿದ್ದು, ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿ ಹಾಗೂ ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಯಮಕನಮರಡಿ ಕಾಂಗ್ರೆಸ್ ‌ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಮಧ್ಯಾಹ್ನ 2 ಕ್ಕೆ ಕ್ಷೇತ್ರದ ಭೂತರಾಮನಹಟ್ಟಿಯಲ್ಲಿ , ಬಳಿಕ ಸಂಜೆ 4 ಕ್ಕೆ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿ ಗಣೇಶ ಹುಕ್ಕೇರಿ ಪರ ಮತಯಾಚನೆ ನಡೆಸಲಿದ್ದಾರೆ.

ಇದನ್ನೂ ಓದಿ:ಜೆಡಿಎಸ್​ಗೆ ಮತ ಹಾಕಿದರೆ ಕಾಂಗ್ರೆಸ್​ಗೆ ಹಾಕಿದಂತೆ, ಕಾಂಗ್ರೆಸ್ ವೋಟ್ ಹಾಕಿದರೆ ಪಿಎಫ್​​ಐಗೆ ನೀಡಿದಂತೆ: ಜೆಪಿ ನಡ್ಡಾ

ಹುಬ್ಬಳ್ಳಿಗೆ ಬರಲಿದ್ದಾರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ

ಚುನಾವಣೆ ಘೋಷಣೆಯಾದ ಬಳಿಕ ಮೊಟ್ಟಮೊದಲ ಬಾರಿಗೆ ಹುಬ್ಬಳ್ಳಿಗೆ ಸೋನಿಯಾ ಗಾಂಧಿ ಬರುತ್ತಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಿಜೆಪಿ ಭದ್ರಕೋಟೆಗೆ ಎಂಟ್ರಿ ಕೊಡಲಿದ್ದು, ಬಿಜೆಪಿಯಿಂದ ಕಾಂಗ್ರೆಸ್​ಗೆ ಬಂದಿದ್ದ ಜಗದೀಶ್ ಶೆಟ್ಟರ್ ಗೆಲ್ಲಿಸಲು ಕಾಂಗ್ರೆಸ್ ವರಿಷ್ಠೆ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಬೃಹತ್‌ ಸಮಾವೇಶದಲ್ಲಿ ಭಾಗಿಯಾಗಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ. ಉತ್ತರ ಕರ್ನಾಟಕವನ್ನೇ ಟಾರ್ಗೆಟ್ ಮಾಡಿಕೊಂಡು ಹುಬ್ಬಳ್ಳಿಗೆ ಬರುತ್ತಿದ್ದು, ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯ ಸೆಟ್ಲಮೆಂಟ್‌ನ ಹಾಕಿ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಸಾಯಂಕಾಲ 6 ಗಂಟೆಯವರೆಗೆ ‌ಭಾಗಿಯಾಗಲಿದ್ದಾರೆ. ಬಳಿಕ ಕಾರ್ಯಕ್ರಮ ಮುಗಿಸಿ ಮತ್ತೆ ಹುಬ್ಬಳ್ಳಿಯಿಂದ ದೆಹಲಿಗೆ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳಸಲಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರ

ಇಡೀ ದಿನ ಚಿಕ್ಕಮಗಳೂರು ಜಿಲ್ಲೆಯ 4 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಶೃಂಗೇರಿ ಕ್ಷೇತ್ರದ ಎನ್.ಆರ್ ಪುರದಿಂದ ಪ್ರಚಾರ ಆರಂಭಿಸಲಿರುವ ಸಿದ್ದು‌. ಶೃಂಗೇರಿ ,ಚಿಕ್ಕಮಗಳೂರು, ಕಡೂರು ತರೀಕೆರೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಬೆಳಗಾವಿಗೆ ಆಗಮಿಸಲಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್

ಕಿಚ್ಚ ಸುದೀಪ ಬೆಳಗಾವಿ ಪ್ರವಾಸ ಹಾಗೂ ಪ್ರಚಾರದ ಬಳಿಕ ಮತ್ತೋರ್ವ ಸ್ಟಾರ್ ನಟ ಡಾ.ಶಿವರಾಜ್‌ಕುಮಾರ್ ಬೆಳಗಾವಿಗೆ ಬರಲಿದ್ದು, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರ ಪ್ರಚಾರ ಮಾಡಲಿದ್ದಾರೆ. ಶಿಂಧೊಳ್ಳಿ ಹಾಗೂ ಹೊನ್ನಿಹಾಳ ಗ್ರಾಮದಲ್ಲಿ ಡಾ.ಶಿವರಾಜ್ ಕುಮಾರ್ ರೋಡ್ ಶೋ ನಡೆಸುವುದರ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಪರ ಶಿವಣ್ಣ ಪ್ರಚಾರ ಮಾಡಲಿದ್ದಾರೆ. ಈ ಕುರಿತು ಶಿವಣ್ಣ ವಿಡಿಯೋ ಮಾಡಿದ್ದಾರೆ. ಇನ್ನು ಬಳಿಕ ಹುಬ್ಬಳ್ಳಿ-ಧಾರವಾಡ‌ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಹೊರಲಿರುವ ಶಿವಣ್ಣ ಜಗದೀಶ್​ ಶೆಟ್ಟರ್​ ಪರ ರೋಡ್‌ಶೋ ಮಾಡಲಿದ್ದಾರೆ.

ಇದನ್ನೂ ಓದಿ:ಚುನಾವಣೆ ಪ್ರಚಾರದಲ್ಲಿ ಜೋಗಿ ಸಿನಿಮಾದ ಹಾಡು ಹಾಡಿದ ಶಿವರಾಜ್ ಕುಮಾರ್

ಬಬಲೇಶ್ವರ ಕ್ಷೇತ್ರಕ್ಕೆ ಆಗಮಿಸಲಿರುವ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ

ಇಂದು ವಿಜಯಪುರ ‌ಜಿಲ್ಲೆಯ ಬಬಲೇಶ್ವರ ಕ್ಷೇತ್ರಕ್ಕೆ ಆಗಮಿಸಲಿರುವ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಎಂ ಬಿ ಪಾಟೀಲ್‌ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಳ್ಳಲಿರುವ ರಮ್ಯಾ. ರಮ್ಯಾಗೆ ಎಂ ಬಿ ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್ ಸಾಥ್ ನೀಡಲಿದ್ದಾರೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಜಾಲಗೇರಿಯಲ್ಲಿ ಕಾರ್ನರ್ ಮೀಟಿಂಗ್, 9-30 ಗಂಟೆಗೆ ತಿಕೋಟಾಗೆ ಆಗಮಿಸಲಿದ್ದು, ಬಳಿಕ 10 ಗಂಟೆಗೆ ನಿಡೋಣಿಯಲ್ಲಿ ಬಹಿರಂಗ ಸಭೆ ಮಾಡಲಿದ್ದಾರೆ. 10.30 ಕ್ಕೆ ಬಬಲೇಶ್ವರ ಪಟ್ಟಣದಲ್ಲಿನ ಶಾಂತವೀರ ಸರ್ಕಲ್‌ ನಲ್ಲಿ‌ ಕಾರ್ನರ್ ಮೀಟಿಂಗ್, 12 ಗಂಟೆಗೆ ಹೊನಗನಹಳ್ಳಿಯಲ್ಲಿ ಆಯೋಜನೆಗೊಂಡಿರೋ ಸಭೆಯಲ್ಲಿ ಭಾಗಿ, ಮದ್ಯಾಹ್ನ 3 ಕ್ಕೆ ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿ, 3. 30 ಕ್ಕೆ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಪ್ರಚಾರ ಸಭೆ ನಡೆಸಿ, ಸಾಯಂಕಾಲ 4 ಗಂಟೆಗೆ ಮಮದಾಪುರದಲ್ಲಿ ಕಾರ್ನರ್ ಮೀಟಿಂಗ್, 4. 30ಕ್ಕೆ ಹೊಸೂರು ಫ್ಯಾಕ್ಟರಿಯಲ್ಲಿ ಬಹಿರಂಗ ಸಭೆ ಮಾಡಿ ಬಳಿಕ 5 ಗಂಟೆಗೆ ಜಿಲ್ಲೆಯಿಂದ ಹೊರಡಲಿದ್ದಾರೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ