Narendra Modi: ಪ್ರಧಾನಿ ಮೋದಿ ನೋಡಲು ಮುಂಜಾನೆಯಿಂದಲೇ ರಸ್ತೆ ಪಕ್ಕ ನಿಂತ ಜನ

Narendra Modi: ಪ್ರಧಾನಿ ಮೋದಿ ನೋಡಲು ಮುಂಜಾನೆಯಿಂದಲೇ ರಸ್ತೆ ಪಕ್ಕ ನಿಂತ ಜನ

ಆಯೇಷಾ ಬಾನು
|

Updated on: May 06, 2023 | 9:29 AM

ಬೆಳಗ್ಗೆ 10 ಗಂಟೆಗೆ ಜೆ.ಪಿ ನಗರ ಬ್ರಿಗೇಡ್ ಮಿಲೇನಿಯಂನಿಂದ ಆರಂಭವಾಗಲಿರುವ ರೋಡ್ ಶೋ. ಸೌತ್ ಎಂಡ್ ಸರ್ಕಲ್, ಕೃಷ್ಣ ರಾವ್ ಪಾರ್ಕ್ ಮೂಲಕ ರಾಮಕೃಷ್ಣ ಆಶ್ರಮ ಮಾರ್ಗವಾಗಿ ಆಗಮನ.

ವಿಧಾನಸಭೆ ಚುನಾವಣೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದ್ದು(Karnataka Assembly Elections 2023), ಕೊನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಪರ ಅಲೆ ಎಬ್ಬಿಸಲು ಸಜ್ಜಾಗಿದ್ದಾರೆ. ಪ್ರಧಾನಿ ಮೋದಿ ಇಂದು(ಮೇ 06) ಮತ್ತು ನಾಳೆ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ ಇಡೀ ಬೆಂಗಳೂರು ಕೇಸರಿಮಯವಾಗಿದೆ. ಎಲ್ಲಾ ರೀತಿಯ ಸಿದ್ಧತೆಯೂ ಪೂರ್ಣಗೊಂಡಿದೆ. ಬೆಳಗ್ಗೆ 10 ಗಂಟೆಗೆ ಜೆ.ಪಿ ನಗರ ಬ್ರಿಗೇಡ್ ಮಿಲೇನಿಯಂನಿಂದ ಆರಂಭವಾಗಲಿರುವ ರೋಡ್ ಶೋ. ಸೌತ್ ಎಂಡ್ ಸರ್ಕಲ್, ಕೃಷ್ಣ ರಾವ್ ಪಾರ್ಕ್ ಮೂಲಕ ರಾಮಕೃಷ್ಣ ಆಶ್ರಮ ಮಾರ್ಗವಾಗಿ ಆಗಮನ. ರಾಮಕೃಷ್ಣ ಆಶ್ರಮ ಸರ್ಕಲ್ ನಲ್ಲಿ ಪೊಲೀಸ್ ಬಿಗಿ ಭದ್ರತೆ. ರಸ್ತೆಯುದ್ದಕ್ಕೂ ರಾರಾಜಿಸುತ್ತಿರೊ ಪ್ರಧಾನಿ ಮೋದಿ ಭಾವಚಿತ್ರ.