ಈ ರೀತಿ ಮಾತುಗಳು ತುಂಬಾ ಹೇಸಿಗೆ ಅನಿಸುತ್ತೆ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ ಗರಂ

|

Updated on: Apr 24, 2023 | 3:49 PM

ಕುಮಾರಸ್ವಾಮಿ ಅವರ ಈ ರೀತಿ ಮಾತುಗಳು ತುಂಬಾ ಹೇಸಿಗೆ ಅನಿಸುತ್ತೆ. ಅಂಬರೀಶ್​​​ ಅವರಿಗೆ ಗೌರವ ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲಾ. ರಾಜ್ಯದ ಜನತೆ ಅವರಿಗೆ ಗೌರವ ಸ್ಥಾನಮಾನ ಕೊಟ್ಟಿರೋದು.

ಈ ರೀತಿ ಮಾತುಗಳು ತುಂಬಾ ಹೇಸಿಗೆ ಅನಿಸುತ್ತೆ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ ಗರಂ
ಸುಮಲತಾ
Follow us on

ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಮತ್ತು ಸಂಸದೆ ಸುಮಲತಾ ಅಂಬರೀಶ್ (Sumalatha)​​​​ ನಡುವೆ ಕೆಲ ದಿನಗಳಿಂದ ವಾಕ್​ ಸಮರ ನಡೆಯುತ್ತಿದೆ. ಸದ್ಯ ಪರಸ್ಪರ ವಾದ- ಪ್ರತಿವಾದಗಳು ಮುಂದುವರೆದಿದ್ದು, ಅಂಬರೀಶ್​​ ಮೃತ ದೇಹ ಮಂಡ್ಯಕ್ಕೆ ತಂದ ವಿಚಾರದ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಗರಂ ಆಗಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಈ ರೀತಿ ಮಾತುಗಳು ತುಂಬಾ ಹೇಸಿಗೆ ಅನಿಸುತ್ತೆ. ಅಂಬರೀಶ್​​ ಅವರಿಗೆ ಗೌರವ ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲಾ. ರಾಜ್ಯದ ಜನತೆ ಅವರಿಗೆ ಗೌರವ ಸ್ಥಾನಮಾನ ಕೊಟ್ಟಿರೋದು. ನಾನೇ ನಾನೇ ಎಂದು ಕುಮಾರಸ್ವಾಮಿ ಹೇಳುವುದು ಅವರಿಗೆ ಶೋಭೆ ತರಲ್ಲ ಎಂದು ಹರಿಹಾಯ್ದಿದ್ದಾರೆ.

ತಮ್ಮ ಹೇಳಿಕೆ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ  

ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೀನಿ ಎಂದು ಈ ರೀತಿ ದ್ವೇಷ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ದ್ವೇಷ ಮಾಡಿದ್ದು ನಾನಾ, ಅವರ ಎಂದು ಜನ ನೋಡಿಕೊಂಡು ಬಂದಿದ್ದಾರೆ. ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುವ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಮಂಡ್ಯ ಜಿಲ್ಲೆ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ: ಸಂಸದೆ ಸುಮಲತಾ

ದ್ವೇಷದ ರಾಜಕಾರಣ ಮಾಡುತ್ತಿರುವವರು ಅವರು

ದ್ವೇಷದ ರಾಜಕಾರಣ ಅವರು ಮತ್ತು ಅವರ ಕಡೆಯವರು ಮಾಡಿಕೊಂಡು ಬಂದಿದ್ದಾರೆ. ಅಂಬರೀಶ್​​ ಹಾಗೂ ಅವರ ಕುಟುಂಬ ಪ್ರೀತಿಯಿಂದನೇ ಎಲ್ಲರನ್ನ ಗೆದ್ದಿರುವುದು. ಹಿಂದಿನ ರೆಕಾರ್ಡ್ ತೆಗೆದು ನೋಡಿಕೊಂಡು ಆಮೇಲೆ ಈ ರೀತಿ ಹೇಳಿಕೆ ನೀಡಲಿ.

ಅವರು ಒಪ್ಪಿಕೊಳ್ಳೊಕೆ ಸಾಧ್ಯ ಇಲ್ಲಾ

ಅಂಬರೀಶ್​ರಿಂದ ಮಂಡ್ಯದಲ್ಲಿ ಜೆಡಿಎಸ್ 7ಕ್ಕೆ 7 ಸ್ಥಾನ ಗೆದ್ದಿತು ಎಂಬ ಸುಮಲತಾ ಹೇಳಿಕೆಯನ್ನ ಜೆಡಿಎಸ್ಸಿಗರು ಒಪ್ಪದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಅವರು ಒಪ್ಪಿಕೊಳ್ಳೊಕೆ ಸಾಧ್ಯ ಇಲ್ಲಾ. ಅವರ ಮನಸ್ಸನ್ನ ಅವರು ಕೇಳಿಕೊಳ್ಳಲಿ. ಒಪ್ಪಿಕೊಳ್ಳದೆ ಇರುವವರು ಅಂಬರೀಶ್​​ ಅವರನ್ನ ಸಂಪರ್ಕಿಸಲು ಎಷ್ಟು ಭಾರಿ ನಮ್ಮ ಮನೆಗೆ ಬಂದಿದ್ದಾರೆ ಗೊತ್ತಿದೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: 2 ಕಡೆ ಸ್ಪರ್ಧಿಸುವಂತೆ ಜೆಡಿಎಸ್ ಮುಖಂಡರ ಒತ್ತಡಕ್ಕೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು

ಮಂಡ್ಯಕ್ಕೆ ಈ ನಾಯಕರ ಕೊಡುಗೆ ಏನು: ಸುಮಲತಾ ಪ್ರಶ್ನೆ 

ಅಂಬರೀಶ್​​​​ಯಿಂದ ಏನು ಪ್ರಯೋಜನವಿಲ್ಲವೆಂದು ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗೋಕೆ ಕಾರಣ ಯಾರು ಎಂದು ಪ್ರಶ್ನಿಸಿದರು. ಅಪಮಾನ ಆಗಿದ್ದಕ್ಕೆ ಅಂಬರೀಶ್​ ಅಭಿಮಾನಿಗಳಿಂದ ತಕ್ಕ ಪಾಠ ಮಾಡಲಾಯಿತು.

ಕಾಂಗ್ರೆಸ್​ಗೆ ಅಂಬರೀಶ್​ ಅಭಿಮಾನಿಗಳು ತಕ್ಕ ಪಾಠ ಕಲಿಸಿದ್ದಾರೆ. ಹಾಗಾಗಿಯೇ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆದರು. ಆಗ ಮೊದಲನೇ ದಿನವೇ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋದರು. ಮಂಡ್ಯಕ್ಕೆ ಈ ನಾಯಕರ ಕೊಡುಗೆ ಏನಿದೆ ಎಂದು ತೋರಿಸಲಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Mon, 24 April 23