AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thirthahalli Election 2023 Winner: ಸಹ್ಯಾದ್ರಿ ತಪ್ಪಲು ತೀರ್ಥಹಳ್ಳಿಯಲ್ಲಿ ಬದ್ಧ ವೈರಿಗಳ ಹಣಾಹಣಿಯಲ್ಲಿ ಆರಗ ಜ್ಞಾನೇಂದ್ರಗೆ ಗೆಲುವು

Araga Jnanendra: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ(Araga Jnanendra) ಗೆಲುವು ಸಾಧಿಸಿದ್ದಾರೆ. ಸತತ ಐದನೇ ಬಾರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ ಪರಸ್ಪರ ಸ್ಪರ್ಧೆಗೊಳಿದಿದ್ದಾರೆ

Thirthahalli Election 2023 Winner: ಸಹ್ಯಾದ್ರಿ ತಪ್ಪಲು ತೀರ್ಥಹಳ್ಳಿಯಲ್ಲಿ ಬದ್ಧ ವೈರಿಗಳ ಹಣಾಹಣಿಯಲ್ಲಿ ಆರಗ ಜ್ಞಾನೇಂದ್ರಗೆ ಗೆಲುವು
ಆರಗ ಜ್ಞಾನೇಂದ್ರ
ನಯನಾ ರಾಜೀವ್
|

Updated on: May 13, 2023 | 1:00 PM

Share

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ(Araga Jnanendra) ಗೆಲುವು ಸಾಧಿಸಿದ್ದಾರೆ. ಸತತ ಐದನೇ ಬಾರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ ಪರಸ್ಪರ ಸ್ಪರ್ಧೆಗೊಳಿದಿದ್ದಾರೆ. ಈ ಹಿಂದೆ ಮೂರು ಬಾರಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದರೆ ಕಿಮ್ಮನೆ ಎರಡು ಬಾರಿ ಗೆದ್ದಿದ್ದಾರೆ. ಒಟ್ಟಾರೆ 4 ಬಾರಿ ತೀರ್ಥಹಳ್ಳಿ ಕ್ಷೇತ್ರವನ್ನು ಆರಗ ಜ್ಞಾನೇಂದ್ರ ಪ್ರತಿನಿಧಿಸಿದ್ದರು.

2018ರಲ್ಲಿ ಸುಮಾರು 22 ಸಾವಿರ ಮತಗಳಿಂದ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದರು. 2013 ಹಾಗೂ 2008ರಲ್ಲಿ ಕಿಮ್ಮನೆ 2 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಇನ್ನು 1999ರಲ್ಲಿ 4 ಸಾವಿರ ಹಾಗೂ 2004ರಲ್ಲಿ ಒಂದೂವರೆ ಸಾವಿರ ಮತಗಳಿಂದ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದರು.

ಕೃಷಿಭೂಮಿ ಹೋರಾಟಗಳಿಂದ ಹೆಸರುವಾಸಿಯಾಗಿರುವ ಸಹ್ಯಾದ್ರಿ ಬೆಟ್ಟಗಳ ತಪ್ಪಲು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಸಾಕಷ್ಟು ಪ್ರತಿಷ್ಠಿತವಾಗಿದೆ.

ಹೋರಾಟದ ಹಿನ್ನೆಲೆಯಿಂದ ಬಂದಿದ್ದ ಜಿಜಿ ಶಾಂತವೇರಿ ಗೌಡ, ಎಸ್​ ಗೋಪಾಲಗೌಡ, ಡಿವಿ ಚಂದ್ರೇಗೌಡ ಕೂಡ ತೀರ್ಥಹಳ್ಳಿಯ ಶಾಸಕರಾಗಿದ್ದಿದ್ದು ವಿಶೇಷವಾಗಿದೆ.

ಈ ಬಾರಿ ಕಣದಲ್ಲಿ ಆರಗ ಜ್ಞಾನೇಂದ್ರ ಹಾಗೂ ಕಿಮ್ಮನೆ ರತ್ನಾಕರ ಜತೆಗೆ ಎಎಪಿಯಿಂದ ಶಿವಕುಮಾರ್, ಜೆಡಿಎಸ್​ನಿಂದ ರಾಜಾರಾಮ್ ಕಣದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ 40 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದ ಮಂಜುನಾಥ ಗೌಡ ಈ ಬಾರಿ ಕಾಂಗ್ರೆಸ್ ಸೇರಿದ್ದಾರೆ.

ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ