ಮತದಾನ ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾಡಳಿತ ವಿನೂತನ ಪ್ರಯತ್ನ; ಬೀಚ್​ನಲ್ಲಿ ಮರಳು ಶಿಲ್ಪ ಕಲಾಕೃತಿ ರಚಿಸಿ ಜಾಗೃತಿ

|

Updated on: May 09, 2023 | 3:33 PM

ಮತದಾನ ಎಂದರೆ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ. ಹಾಗಾಗಿ ಈ ಹಬ್ಬದ ಅತಿ ಹೆಚ್ಚು ಜನ ಉತ್ಸುಕತೆಯಿಂದ ಪಾಲ್ಗೊಂಡು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಡುಗೆ ನೀಡಲು ಪ್ರೇರೇಪಿಸಲು ಉಡುಪಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮರಳು ಶಿಲ್ಪದ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯವನ್ನು ಜಿಲ್ಲಾಢಳಿತ ಮಾಡಿದೆ

ಮತದಾನ ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾಡಳಿತ ವಿನೂತನ ಪ್ರಯತ್ನ; ಬೀಚ್​ನಲ್ಲಿ ಮರಳು ಶಿಲ್ಪ ಕಲಾಕೃತಿ ರಚಿಸಿ ಜಾಗೃತಿ
ಮತದಾನ ಜಾಗೃತಿ ಕಲಾಕೃತಿ
Follow us on

ಉಡುಪಿ: ಜಿಲ್ಲೆಯಲ್ಲಿ ಸಂಪೂರ್ಣ ಮತದಾನವಾಗಬೇಕೆನ್ನುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಈಗಾಗಲೇ ಮತಗಟ್ಟೆಗಳನ್ನ ಮದುವೆ ಮನೆ ಅಂತ ಸಿಂಗರಿಸಿದ್ದು, ಮತದಾರರನ್ನು ಮತಗಟ್ಟೆ ಕಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಕಲಾವಿದರನ್ನು ಬಳಸಿಕೊಂಡು ಮತದಾನದ ಜಾಗೃತಿ ಮೂಡಿಸುವ ಕೆಲಸಕ್ಕೆ ಜಿಲ್ಲಾಡಳಿತ ಕೈ ಹಾಕಿದೆ. ಈ ನಿಟ್ಟಿನಲ್ಲಿ ಉಡುಪಿಯ ಪ್ರಸಿದ್ಧ ಸಮುದ್ರ ತೀರ ಮಲ್ಪೆ ಬೀಚಿನಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಮರಳು ಶಿಲ್ಪ ರಚಿಸುವ ಮೂಲಕ ಮತದಾರರನ್ನು ಸೆಳೆಯುವ ಕಾರ್ಯ ಮಾಡಿದೆ.

ಅಲ್ಲದೆ ಬಹಿರಂಗ ಪ್ರಚಾರ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳು ತಮ್ಮ ಮತದಾರರ ಗಮನ ಸೆಳೆಯುವ ಎಲ್ಲಾ ಸರ್ಕಸ್​ಗಳು ಮುಗಿದಿವೆ. ಇದೀಗ ಎಲ್ಲರ ಗಮನ ಮತಗಟ್ಟೆಗಳತ್ತ ನೆಟ್ಟಿದೆ. ಅತಿ ಹೆಚ್ಚು ಪ್ರಮಾಣದ ಮತದಾನವಾಗಬೇಕು ಅನ್ನೋದು ಜಿಲ್ಲಾಡಳಿತದ ಉದ್ದೇಶ. ಹಾಗಾಗಿ ಅನೇಕ ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಕಳೆದ ಒಂದು ತಿಂಗಳಿಂದ ನಡೆಸಲಾಗುತ್ತಿದೆ. ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ. ಮರಳು ಶಿಲ್ಪ ಕಲಾವಿದ ಹರೀಶ್ ಸಾಗರ್​ ಮತ್ತು ತಂಡದವರು ಮಲ್ಪೆ ಬೀಚ್ ನಲ್ಲಿ ಕರ್ನಾಟಕ ಚುನಾವಣೆ ಕುರಿತ ಅಪರೂಪದ ಮರಳು ಶಿಲ್ಪ ರಚಿಸಿದ್ದಾರೆ. ಕಡಲ ತೀರಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರನ್ನು ಈ ಶಿಲ್ಪ ಕಲಾ ಕೃತಿ ಗಮನ ಸೆಳೆಯುತ್ತಿದೆ. ನಾಲ್ಕಾರು ಗಂಟೆಗಳ ಪರಿಶ್ರಮದ ಬಳಿಕ ಕರ್ನಾಟಕದ ಚಿತ್ರವುಳ್ಳ ಶಿಲ್ಪವನ್ನು ಕಲಾವಿದರು ಪೂರ್ಣಗೊಳಿಸಿದ್ದಾರೆ. ಕಲಾವಿದರ ಪರಿಶ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ:ಚುನಾವಣೆ ಕರ್ತವ್ಯಕ್ಕೆ ನಿಯೋಜನೆ; ಮತದಾನದ ಹಕ್ಕಿನಿಂದ ವಂಚಿತರಾದ್ರಾ ಸಾರಿಗೆ ಸಿಬ್ಬಂದಿ?

ಒಟ್ಟಾರೆಯಾಗಿ ಬುದ್ಧಿವಂತರ ಜಿಲ್ಲೆಯ ಬುದ್ಧಿವಂತ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರಬೇಕು ಎನ್ನುವುದು. ಹೀಗಾಗಿ ಭಿನ್ನವಿನ್ನ ರುಚಿಯ ಮತದಾರರನ್ನು ಸೆಳೆಯುವ ಸಲುವಾಗಿ ಭಿನ್ನ ಭಿನ್ನ ಆಲೋಚನೆಗಳ ಮೂಲಕ ಮತದಾನದ ಅರಿವು ಮತ್ತು ಆಸಕ್ತಿ ಮೂಡಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ.

ವರದಿ: ಪ್ರಜ್ವಲ್ ಅಮಿನ್ ಟಿವಿ9 ಉಡುಪಿ

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ