ಮೈಸೂರಿನಲ್ಲಿ ಐಟಿ ಅಧಿಕಾರಿಗಳ ದಾಳಿ, ಮನೆಯಾಂಗಳದ ಗಿಡದಲ್ಲಿಟ್ಟಿದ್ದ 1 ಕೋಟಿ ರೂ. ಹಣ ಪತ್ತೆ

|

Updated on: May 03, 2023 | 1:19 PM

ಕಾಂಗ್ರೆಸ್​ ಅಭ್ಯರ್ಥಿಯ ಸಹೋದರ ನಿವಾಸದಲ್ಲಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಗಿಡದಲ್ಲಿ ನೇತಾಡುತ್ತಿದ್ದ 1 ಕೋಟಿ ರೂ ಹಣದ ಬ್ಯಾಗ್​ ಅನ್ನು ಪತ್ತೆ ಮಾಡಿದ್ದಾರೆ.

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly elections 2023) ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೆಚ್ಚಿನ ಕಣ್ಗಾವಲು ಇರಿಸಿದೆ. ಅಕ್ರಮಗಳನ್ನು ತಡೆಗಟ್ಟಲು ಆದಾಯ ತೆರೆಗೆ ಅಧಿಕಾರಿಗಳು ಸಹ ಭರ್ಜರಿ ಕಾರ್ಯಚರಣೆ ನಡೆಸಿದ್ದು, ಕಳ್ಳರು ಚಾಪೆ ಕೆಳಗೆ ನುಗ್ಗಿದ್ದರೆ, ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿ ಇದುವರೆಗೆ ಕೋಟ್ಯಾಂತರ ರೂ. ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಂತೆ ಮೈಸೂರಿನಲ್ಲಿ ದಾಳಿ ಮಾಡಿರುವ ಐಟಿ ಅಧಿಕಾರಿಗಳು ಬಚ್ಚಿಟ್ಟಿದ್ದ ಕಂತೆ ಕಂತೆ ಹಣವನ್ನು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಹೆಲಿಕಾಪ್ಟರ್ ಅವಘಡದಿಂದ ಪಾರಾದ ಬೆನ್ನಲ್ಲೇ ಅಜ್ಜಯ್ಯನ ಮೊರೆ ಹೋದ ಡಿಕೆ ಶಿವಕುಮಾರ್, ​ಜ್ಯೋತಿಷಿ ಹೇಳಿದ್ದೇನು?

ಹೌದು….ಮೈಸೂರಿನಲ್ಲಿ ಕೆ.ಸುಬ್ರಹ್ಮಣ್ಯ ರೈ ಎಂಬುವವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದು, ಈ ವೇಳೆ ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ಮಾವಿನ ಹಣ್ಣಿನ ಬಾಕ್ಸ್ ನಲ್ಲಿ ಬಚ್ಚಿಟ್ಟಿದ್ದ ಹಣವನ್ನು ಪತ್ತೆ ಹಚ್ಚಿದ್ದಾರೆ. ಗಿಡದಲ್ಲಿ ಬಚ್ಚಿಟ್ಟಿದ್ದ ಮಾವಿನ ಹಣ್ಣಿನ ಬಾಕ್ಸ್​ ಅದನ್ನು ತೆಗೆದು ಪರಿಶೀಲಿಸಿದ ಅಧಿಕಾರಿಗಳಿಗೆ ಕಂತೆ  ಕಂತೆ ಹಣ ನೋಡಿ ಶಾಕ್​ ಆಗಿದೆ. ಬಳಿಕ ಹಣ ಎಣಿಕೆ ಮಾಡಿದಾಗ ಬರೋಬ್ಬರಿ ಒಂದು ಕೋಟಿ ರೂಪಾಯಿ ಪತ್ತೆಯಾಗಿದ್ದು,  ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸಹೋದರ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅಶೋಕ್ ರೈ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.ಈ ಮೊದಲು ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದ್ರೆ, ಟಿಕೆಟ್​ ಕೈತಪ್ಪಿದ್ದರಿಂದ ಅಶೋಕ್​ ರೈ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಹಣವನ್ನು ಮನೆಯಲ್ಲಿಟ್ಟರೆ ಚುನಾವಣಾ ಅಧಿಕಾರಿಗಳು ದಾಳಿ  ಮಾಡಿದಾಗ ಸಿಗಬಹುದೆಂದು  ಮನೆಯಾಂಗಳದ ಗಿಡದಲ್ಲಿ ಇಟ್ಟಿದ್ದಾರೆ .  ಮೊದಲೇ ಅರಿತು ಯಾರಿಗೂ ಈ ಪ್ಲಾನ್ ಮಾಡಿ ಚಾಪೆ ಕೆಳಗೆ ತೂರಿದ್ದರು. ಆದ್ರೆ, ಐಟಿ ಅಧಿಕಾರಿಗಳು ರಂಗೋಲಿ ಕೆಳಗೆ ತೂರಿ ಬಚ್ಚಿಟ್ಟಿದ್ದ ಹಣವನ್ನು ವಶಕ್ಕೆ ಪಡೆದುಕೊಮಡಿದ್ದಾರೆ.  ಇನ್ನು ಮನೆಯಾಂಗಳದ ಗಿಡದಲ್ಲಿ ಬಚ್ಚಿಟ್ಟಿದ್ದ ಹಣ ಬ್ಯಾಗ್​ಅನ್ನು ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದು, ಹಣ ಎಣಿಕೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಬಾಕ್ಸ್​​ನಿಂದ ಅಧಿಕಾರಿಗಳು ಹಣ ತೆಗೆಯುತ್ತಿರುವ ವಿಡಿಯೋ ನೋಡಿ