ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ: ಎಂಬಿ ಪಾಟೀಲ್​​

|

Updated on: May 21, 2023 | 11:38 AM

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ. ಎಲ್ಲ ಇಲಾಖೆಗಳ ಹಗರಣದ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಬಳಿ ಹೇಳಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್​ ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ: ಎಂಬಿ ಪಾಟೀಲ್​​
ಎಂ ಬಿ ಪಾಟೀಲ್​​
Follow us on

ಬೆಂಗಳೂರು: ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ. ಎಲ್ಲ ಇಲಾಖೆಗಳ ಹಗರಣದ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನನ್ನ ಬಳಿ ಹೇಳಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil)​ ಹೇಳಿದ್ದಾರೆ. ಪಿಎಸ್​​ಐ ಹಗರಣ, ನೀರಾವರಿ ಇಲಾಖೆ, ಗುತ್ತಿಗೆದಾರರ ಕೇಸ್​, ಎಲ್ಲ ಕೇಸ್​ಗಳ ತನಿಖೆ ಮಾಡಿಸುತ್ತೇವೆ. ಅಧಿಕಾರಿಗಳು, ಸಚಿವರೇ ಇರಲಿ ತನಿಖೆ ನಡೆಸಿ ಶಿಕ್ಷೆ ಕೊಡಿಸುತ್ತೇವೆ ಎಂದು ಖಡಕ್​ ಸೂಚನೆ ನೀಡಿದರು.

ಈ ಕುರಿತು ಟಿವಿ9ನೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಮುಂದೆ ಖಾಸಗಿಯಾಗಿ ಮಾತನಾಡುತ್ತಾ ಹೇಳಿದ್ದಾರೆ, ಎಲ್ಲೆಲ್ಲಿ ಭ್ರಷ್ಟಚಾರ ಆಗಿದೆಯೋ, ಎಲ್ಲೆಲ್ಲಿ ಅಕ್ರಮಗಳು ಆಗಿದೆಯೋ, ನೀರಾವರಿ ಇರಬಹುದು, ಪಿಎಸ್​ಐ ಸ್ಕ್ಯಾಮ್​ ಇರಬಹುದು ಮತ್ತೊಂದು ಇರಬಹುದು ಎಲ್ಲವನ್ನು ತನಿಖೆ ಮಾಡಿಸುತ್ತೇನೆ. ಯಾರು ತಪ್ಪಿತಸ್ಥರಿದ್ದಾರೆ ಅವರು ಅಧಿಕಾರಿಗಳಾಗಿರಲಿ, ಸಚಿವರಾಗಿರಲಿ ಯಾರೇ ಇರಲಿ ಅವರನ್ನು ಶಿಕ್ಷೆಗೆ ಒಳಪಡಿಸಿ, ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂದು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ನೂತನ ಸರ್ಕಾರದಿಂದ ಸೋಮವಾರದಿಂದ ಮೂರು ದಿನ ವಿಧಾನಸಭಾ ಅಧಿವೇಶನ

ಎಸ್ಟಿಮೇಟ್​​ನ ಹ್ಯಾಕ್ಅಪ್​, ಜಾಕಅಪ್​ ಮಾಡುತ್ತಾರೆ, ಎಂ ಬಿ ಪಾಟೀಲ್ ಅವರೆ ಇದು ನಿಮಗೆ ತಳಿದಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಇದನ್ನ ಯಾವ ರೀತಿ ನಿಲ್ಲಿಸಬೇಕು ಅಂತ ಎಕ್ಸ್​ಪರ್ಟ್​ ಜೊತೆ ಮಾಡಿಕೊಂಡು ಈ ಎಸ್ಟಿಮೇಟ್​ನಲ್ಲಿ ಅವ್ಯವಹಾರ ಮಾಡುವಂತದ್ದು, ಜಾಸ್ತಿ ಮಾಡುವಂತದ್ದು ಆಗಬಾರದು ಎಂದರು.

ಸಿದ್ದರಾಮಯ್ಯನವರ ಬದ್ಧತೆ ಮತ್ತು ಅವರ ಕಾಳಜಿ ರಾಜ್ಯದ ಬಗ್ಗೆ ಇದೆ. ತಮ್ಮ ಮನೆಯನ್ನ ಹೇಗೆ ನಡೆಸುತ್ತಾರೆ ಹಾಗೇ ರಾಜ್ಯವನ್ನು ನಡೆಸುತ್ತಾರೆ. 40% ಕಮಿಷನ್​ ಆರೋಪ ನಾವು ಮಾಡಿದ್ದಲ್ಲ, ಕಾಂಟ್ರಾಕ್ಟರ್​ ಅಸೋಷನ್ ಮಾಡಿದ್ದು. ಪ್ರಧಾನಿಯವರಿಗೆ 40% ಕಮಿಷನ್ ಪತ್ರ ಬರೆದಿದ್ದರು, ಎರಡು ವರ್ಷವಾದರೂ ಏನು ಮಾಡಲಿಲ್ಲ. ಕಾಂಟ್ರಾಕ್ಟರ್​ ಆತ್ಮಹತ್ಯೆ ಆಯಿತು, ಮುಖ್ಯಮಂತ್ರಿಗಳು ಸೇರಿದಂತೆ ಸಾಕ್ಷಿ ಏನಿದೆ ಅಂತ ಕೇಳುತ್ತಿದ್ದರು. ಮಾಡಾಳು ಕೇಸ್​ನಲ್ಲಿ ಸಾಕ್ಷಿ ಸಿಕ್ಕಿದೆಯಲ್ಲ, ಹೀಗಾಗಿ ಇದನ್ನ ನಾವು ಲಾಜಿಕ್​ ಎಂಡ್​​ಗೆ​ ಒಯ್ಯುತ್ತೇವೆ ಎಂದು ತಿಳಿಸಿದ್ದಾರೆ.

ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು

ಕಳೆದ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿರುವುದು ಸತ್ಯ. ಎಲ್ಲ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ ತನಿಖೆ ಆಗಬೇಕಿದೆ. ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಬೇಕು. ತನಿಖಾ ಆಯೋಗ ರಚನೆ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್​ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಇನ್ನು ಬಿಜೆಪಿ ಸರ್ಕಾರ ಅವದಿಯಲ್ಲಿನ 40% ಕಮಿಷನ್​​, ಪಿಎಸ್​​ಐ ಸ್ಕ್ಯಾಮ್​​ ಅನ್ನು ತನಿಖೆ ಮಾಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Sun, 21 May 23