AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಕ್ಕೆ ಬರುವ ಕೇಂದ್ರದ ಹಣ ಕಡಿಮೆ ಎಂಬ ಆರೋಪಕ್ಕೆ ಅಂಕಿ-ಸಂಖ್ಯೆಯೊಂದಿಗೆ ತಿರುಗೇಟು ಕೊಟ್ಟ ಸಚಿವ ಜೋಶಿ

ಅಧಿಕಾರ ಸ್ವೀಕರ ಬೆನ್ನಲ್ಲೇ ಮೊದಲ ಸುದ್ದಿಗೋಷ್ಠಿಯಲ್ಲಿ ಅನುದಾನದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಗಂಭೋರ ಆರೋಪಗಳನ್ನ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಪ್ರಲ್ಹಾದ್ ಜೋಶಿ ತಿರುಗೇಟು ಕೊಟ್ಟಿದ್ದಾರೆ.

ರಾಜ್ಯಕ್ಕೆ ಬರುವ ಕೇಂದ್ರದ ಹಣ ಕಡಿಮೆ ಎಂಬ ಆರೋಪಕ್ಕೆ ಅಂಕಿ-ಸಂಖ್ಯೆಯೊಂದಿಗೆ ತಿರುಗೇಟು ಕೊಟ್ಟ ಸಚಿವ ಜೋಶಿ
ರಮೇಶ್ ಬಿ. ಜವಳಗೇರಾ
|

Updated on:May 21, 2023 | 12:23 PM

Share

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ ಸುದ್ದಿಗೋಷ್ಠಿಯಲ್ಲಿ ರಾಜ್ಯಕ್ಕೆ ಬರಬೇಕಿರುವ ಅನುದಾನದ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಕಿಡಿಕಾರಿದ್ದರು. ಇದಕ್ಕೆ ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳಿಗೆ ಪ್ರಿತಿಕ್ರಿಯಿಸಿದ್ದು, ರಾಜ್ಯಕ್ಕೆ ಹಣ ಕಮ್ಮಿ ಬಂದಿದೆ ಅಂತಾರೆ. 2009 ರಿಂದ 2014ರ ಡೆವಲ್ಯೂಷನ್ ಫಂಡ್ ನಲ್ಲಿ ಶೇಖಡಾ 148 ರಷ್ಟು ಜಾಸ್ತಿ ಆಗಿದೆ ಎಂದು ತಿರುಗೇಟು ನೀಡಿದರು.

2014 ರಿಂದ 2019ರ ಅವಧಿಯಲ್ಲಿ ಶೇಖಡಾ 129 ರಷ್ಟು ಜಾಸ್ತಿ ಆಗಿದೆ. ಯಾವ ಯಾವ ವರ್ಷದಲ್ಲಿ ಎಷ್ಡು ಹಣ ಬಂದಿದೆ ಎನ್ನುವುದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಮೊದಲು 700-800 ಕೋಟಿ ರೂ. ಡೆವಲ್ಯೂಷನ್ ಫಂಡ್ ಬರುತ್ತಿತ್ತು. ನಮ್ಮ ಕಾಲದಲ್ಲಿ 5000-7000 ಕೋಟಿ ರೂ, ಹಣ ಬಂದಿದೆ. 2009-10 ರಲ್ಲಿ 2476 ಕೋಟಿ ರೂ. ಹಣ ಬರುತ್ತಿತ್ತು. ಇದ್ರೆ 2019-20 ರಲ್ಲಿ 7578 ಕೋಟಿ ರೂ. ಬಂದಿದೆ. 2021-22 ರಲ್ಲಿ 7862 ಕೋಟಿ ರೂ. ಬಂದಿದೆ. ಪ್ರತಿ ವರ್ಷ ಡೆವಲ್ಯೂಷನ್ ಫಂಡ್ ನಲ್ಲಿ ಜಾಸ್ತಿ ಆಗುತ್ತಿದೆ ಎಂದು ಅಂಕಿ-ಅಂಶಗಳ ಮೂಲಕ ಸಿದ್ದರಾಮಯ್ಯ ಆರೋಪಗಳಿಗೆ ಉತ್ತರಿಸಿದರು.

ತಾವು ಕೊಟ್ಟ ಭರವಸೆಗಳನ್ನು ಈಡೇರಿಸುವುದರ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಚುನಾವಣೆ ಕಾರಣಕ್ಕಾಗಿ ಭರವಸೆಯನ್ನು ಕೊಟ್ಟಿದ್ದರು. ಮೊದಲನೇ ಕ್ಯಾಬಿನೆಟ್​ನಲ್ಲಿ ಜಾರಿಗೆ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಮೊದಲ ಕ್ಯಾಬಿನೆಟ್ ಸಭೆ ಆಗಿದ್ದು, ಈಗೇನು ಹೇಳುತ್ತಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸುಳ್ಳು ಹೇಳುವುದರಲ್ಲಿ ಪ್ರಸಿದ್ದಿ, ಪರಿಣಿತಿ ಪಾರ್ಟಿಯಾಗಿ ಸಿದ್ದಗೊಂಡಿದೆ. ಬೊಮ್ಮಾಯಿ ಸರ್ಕಾರದ ಎಲ್ಲಾ ಹಗರಣದ ಬಗ್ಗೆ ತನಿಖೆ ನಡೆಸುತೇವೆ ಎಂದು ಹೇಳಿದ್ದಾರೆ. ತನಿಖೆ ಮಾಡಲಿ ನಮ್ಮ ಸಮಯದಲ್ಲಿ ಏನು ಹಗರಣ ಆಗಿಯೇ ಇಲ್ಲ. ನಮ್ಮದೇನು ಅಭ್ಯಂತರ ಇಲ್ಲ ತನಿಖೆ ಮಾಡಿಸಲಿ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಆರೋಪಿಸಿದ್ದೇನು?

ತಮ್ಮ ಮೊದಲ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಸಿದ್ದರಾಮಯ್ಯ, ಜಿಎಸ್‌ಟಿ ಸೇರಿ ವಾರ್ಷಿಕ 4 ಲಕ್ಷ ಕೋಟಿ ರೂ. ತೆರಿಗೆಯನ್ನು ನಾವು (ಕರ್ನಾಟಕ ) ಕಟ್ಟುತ್ತೇವೆ. ಆದರೆ ಹದಿನೈದನೇ ಹಣಕಾಸು ಆಯೋಗ ನಿಗದಿ ಮಾಡಿದ್ದ 5,495 ಕೋಟಿ ರೂ. ಅನುದಾನವನ್ನೂ ನಿರ್ಮಲಾ ಸೀತಾರಾಮನ್‌ ತೆಗೆದು ಬಿಟ್ಟರು. ರಾಜ್ಯಕ್ಕೆ ಇದಕ್ಕಿಂತ ಹೆಚ್ಚು ಅನ್ಯಾಯ ಮಾಡಿದ ಸರಕಾರ ಬೇಕಾ? ಎಂದು ಕೇಂದ್ರ ಸರಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದರು.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕರ್ನಾಟಕದಿಂದಲೇ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ಆದರೂ ಕೇಂದ್ರದ ತೆರಿಗೆಯಲ್ಲಿ ರಾಜ್ಯ ನ್ಯಾಯಯುತ ಪಾಲು ಪಡೆಯುವುದಕ್ಕೆ ಅಡ್ಡಿಯನ್ನುಂಟು ಮಾಡಿದ್ದಾರೆ. ಆ ಯಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದ ರಾಜ್ಯ ಅತಿ ಹೆಚ್ಚು ತೊಂದರೆ ಅನುಭವಿಸಿದೆ. ಬೊಮ್ಮಾಯಿ ಜಿಎಸ್‌ಟಿ ಕೌನ್ಸಿಲ್‌ ಸದಸ್ಯರಾಗಿದ್ದರೂ ರಾಜ್ಯದ ಪರ ಧ್ವನಿ ಎತ್ತಿಲ್ಲ. ಇನ್ನು 25 ಸಂಸದರೂ ಈ ಬಗ್ಗೆ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Published On - 12:15 pm, Sun, 21 May 23