Yadgir Assembly Election Result: ಮನೆಯಲ್ಲಿ ಸಾವಾದರೂ ಮತ ಎಣಿಕೆ ಕೇಂದ್ರಕ್ಕೆ ಬಂದ ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ

|

Updated on: May 13, 2023 | 8:39 AM

ಯಾದಗಿರಿ ಜಿಲ್ಲೆಯ ಸುರಪುರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮನಸ್ಸಿನಲ್ಲಿ ಸಾಗರದಷ್ಟು ದುಃಖ ಇಟ್ಟುಕೊಂಡಿದ್ದರೂ ಮತ ಕೇಂದ್ರದಲ್ಲಿ ಬಂದು ಕುಳಿತಿದ್ದಾರೆ.

Yadgir Assembly Election Result: ಮನೆಯಲ್ಲಿ ಸಾವಾದರೂ ಮತ ಎಣಿಕೆ ಕೇಂದ್ರಕ್ಕೆ ಬಂದ ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ
ರಾಜಾ ವೆಂಕಟಪ್ಪ ನಾಯಕ
Follow us on

ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆದಿದ್ದು ಇಂದು ರಾಜಕೀಯ ನಾಯಕರ ಭವಿಷ್ಯ ಹೊರ ಬೀಳಲಿದೆ. ರಾಜಕೀಯ ನಾಯಕರಿಗೆ ಇಂದು ಅತಿ ಮುಖ್ಯವಾದ ದಿನ. ಈ ದಿನ ಅವರ ಭವಿಷ್ಯವೇ ನಿರ್ಣಯವಾಗುತ್ತೆ. ಆದ್ರೆ ಸುರಪುರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಸಹೋದರನ ಮಗನ ಶವ ಮನೆಯಲ್ಲಿದ್ದರೂ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿರುವ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ಸುರಪುರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮನಸ್ಸಿನಲ್ಲಿ ಸಾಗರದಷ್ಟು ದುಃಖ ಇಟ್ಟುಕೊಂಡಿದ್ದರೂ ಮತ ಕೇಂದ್ರದಲ್ಲಿ ಬಂದು ಕುಳಿತಿದ್ದಾರೆ. ನಿನ್ನೆ ಅನಾರೋಗ್ಯ ಹಿನ್ನೆಲೆ ವೆಂಕಟಪ್ಪ ನಾಯಕ ಸಹೋದರನ ಮಗ ರೂಪ್ ಕುಮಾರ್ ನಾಯಕ ಮೃತಪಟ್ಟಿದ್ದರು. ಇವತ್ತು ಸುರಪುರದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ಮನೆಯಲ್ಲಿ ಸೂತಕದ ಛಾಯೇ ಆವರಿಸಿದೆ. ಮನೆಯಲ್ಲಿ ಸಾವಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 8:37 am, Sat, 13 May 23