Karnataka Elections: ಕಲಬುರಗಿ ಜಿಲ್ಲೆಯ 9 ಕ್ಷೇತ್ರಗಳಿಗೆ 123 ಫ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಕಟ್ಟುನಿಟಾಗಿ ಪಾಲನೆ ಮಾಡಲು ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 123 ಫ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.
ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಮಾದರಿ ನೀತಿ ಸಂಹಿತೆ ಕಟ್ಟುನಿಟಾಗಿ ಪಾಲನೆ ಮಾಡಲು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 123 ಫ್ಲೈಯಿಂಗ್ ಸ್ಕ್ವಾಡ್ (Flying squads) ತಂಡ ರಚಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ. ವಲಯವಾರು ನೇಮಿಸಲಾದ ಪ್ರತಿ ತಂಡದಲ್ಲಿ ಓರ್ವ ಅಧಿಕಾರಿಗಳ ಜೊತೆಗೆ ಸಹಾಯಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ವಿಡಿಯೋಗ್ರಾಫರ್ ಇರಲಿದ್ದಾರೆ. ತಂಡಗಳು ದಿನದ 24 ಗಂಟೆಗಳ ಕಾಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿವೆ. ವಿಧಾನಸಭಾ ಕ್ಷೇತ್ರವಾರು ನೇಮಿಸಲಾದ ಎಫ್ಎಸ್ಟಿ ತಂಡದ ಮುಖ್ಯಸ್ಥರ ವಿವರ ಹೀಗಿದೆ.
34-ಅಫಜಲಪೂರ ಕ್ಷೇತ್ರ: ಕರಜಗಿ ವಲಯಕ್ಕೆ ಸಣ್ಣ ನೀರಾವರಿ ಇಲಾಖೆಯ ಎಇಇ ಶಾಂತಪ್ಪ ಎಸ್. ಜಾಧವ, ತಾಲೂಕಾ ಬಿಸಿಎಂ ಅಧಿಕಾರಿ ಸಂಜೀವಕುಮಾರ ಪಟ್ಟಣಕರ್ ಹಾಗೂ ಕೆಎನ್ಎನ್ಎಲ್ ಇಇ ವಿಜಯಕುಮಾರ ಎಸ್.ಪಾಟೀಲ. ಅತನೂರ ವಲಯಕ್ಕೆ ಸಿಡಿಪಿಓ ಪ್ರೇಮಾ, ತೋಟಗಾರಿಕೆ ಇಲಾಖೆಯ ಎಡಿ ಸುರೇಂದ್ರನಾಥ ಹಾಗೂ ಬಿಇಓ ಮಾರುತಿ ಹುಜರಾತಿ, ಅಫಜಲಪೂರ ವಲಯಕ್ಕೆ ಪಿಡಬ್ಲ್ಯೂಡಿ ಎಇಇ ಹೊನ್ನೇಶ, ಆರ್ಡಬ್ಲ್ಯೂಎಸ್ ಎಇಇ ಶಂಕರ ಎ. ರುಬಿಕರ್ ಹಾಗೂ ಕೆಎನ್ಎನ್ಎಲ್ ಎಇಇ ನಿಜಲಿಂಗಪ್ಪ, ಫರತಾಬಾದ ವಲಯಕ್ಕೆ ಪಿಆರ್ಇ ಉಪ ವಿಭಾಗದ ಎಇಇ ಕೆ.ಬಾಲಕೃಷ್ಣ, ಕೆಎನ್ಎನ್ಎಲ್ ಎಇಇ ಸಂತೋಷ ಕುಮಾರ ಸಜ್ಜನಶೆಟ್ಟಿ ಹಾಗೂ ಕೆಎನ್ಎನ್ಎಲ್ ಎಇಇ ಸಂತೋಷಕುಮಾರ ಪಾಟೀಲ ಅವರನ್ನು ನೇಮಿಸಲಾಗಿದೆ.
35-ಜೇವರ್ಗಿ ಕ್ಷೇತ್ರ: ಯಡ್ರಾಮಿ ವಲಯಕ್ಕೆ ಕೆಬಿಜೆಎನ್ಎಲ್ ಎಂಬಿಸಿ ಉಪ ವಿಭಾಗದ ಎಇ ಗುರುಬಸಪ್ಪ ಸಾಹು, ಎಇಇ ಮಹ್ಮದ ಸಮಿವುಲ್ಲಾ ಹಾಗೂ ಮಲ್ಲಬಾದ್ ಉಪ ವಿಭಾಗದ ಎಇಇ ತಿಪ್ಪಣ್ಣಗೌಡ, ಜೇವರ್ಗಿ ವಲಯಕ್ಕೆ ಪಿಆರ್ಇ ಎಇಇ ಚಂದ್ರಕಾಂತ, ಎಡಿಎಲ್ಆರ್ ಸಿದ್ದಣ್ಣ ಹಾಗೂ ಕೆಬಿಜೆಎನ್ಎಲ್ ಎಇಇ ಉಮರ ಅಲಿ, ನೆಲೋಗಿ ವಲಯಕ್ಕೆ ಬಿಇಓ ರಿಷಿಕೇಶ್ ದಂತಕಾಳೆ, ಕೆಬಿಜೆಎನ್ಎಲ್ ಎಇಇ ಮಲ್ಲಿಕಾರ್ಜುನ ಜಿ. ಮದನಿ ಹಾಗೂ ಎಇಇ ವಿಜ್ನೇಶ ಚವ್ಹಾಣ, ಆಂದೋಲಾ ವಲಯಕ್ಕೆ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಸುರೇಶ ಪತ್ರೋಟಾ ಹಾಗೂ ಕೆಬಿಜೆಎನ್ಎಲ್ ಎಇ ಶರಣಪ್ಪ, ಇಜೇರಿ ವಲಯಕ್ಕೆ ಕೆಬಿಜೆಎನ್ಎಲ್ ಎಇ ಶರಣಪ್ಪ ಎಚ್. ಕಿರಣಗಿ, ಎಇ ಸಾಗರ ಎಸ್. ಹಾಗೂ ಎಇಇ ಶಿವಪುತ್ರಪ್ಪ ಜೋಗೂರ.
ಇದನ್ನೂ ಓದಿ: Karnataka Polls: ಕಾಂಗ್ರೆಸ್ ಬಳಿ ದೊಡ್ಡ ಪಟ್ಟಿ ಇರುವುದರಿಂದಲೇ ಚೇರ್ಗಳಲ್ಲಿ ಹೊಡೆದಾಡುತ್ತಿರುವುದು: ಸಚಿವ ಸುಧಾಕರ್
40-ಚಿತ್ತಾಪುರ ಕ್ಷೇತ್ರ: ಗುಂಡಗುರ್ತಿ ಮತ್ತು ಕಾಳಗಿ ವಲಯಕ್ಕೆ ಆರ್ಎಫ್ಓ ವಿಜಯಕುಮಾರ, ಸಮಾಜ ಕಲ್ಯಾಣ ಇಲಾಖೆಯ ಎಡಿ ಚೇತನ ಗುರಿಕರ್ ಹಾಗೂ ಆರ್ಎಫ್ಓ ಗುರುರಾಜ, ಚಿತ್ತಾಪೂರ ವಲಯಕ್ಕೆ ಹೆಬ್ಬಾಳ ಪಿಯು ಕಾಲೇಜಿನ ಪ್ರಾಂಶುಪಾಲ ಮಲ್ಲಣ್ಣಗೌಡ ಪಾಟೀಲ, ಟೆಂಗಳಿ ಪಿಯು ಕಾಲೇಜಿನ ಪ್ರಾಂಶುಪಾಲ ರವಿಕುಮಾರ ದೇಸಾಯಿ ಹಾಗೂ ರೇವಗ್ಗಿ ಪಿಯು ಕಾಲೇಜಿನ ಪ್ರಾಂಶುಪಾಲ ಗಂಗಾಧರ, ಚಿತ್ತಾಪುರ ಪಟ್ಟಣ ಮತ್ತು ಇತರೆ ಗ್ರಾಮಗಳ ವಲಯಕ್ಕೆ ಟೆಂಗಳಿ ಪಿಯು ಕಾಲೇಜಿನ ಪ್ರಾಂಶುಪಾಲ ಶ್ರೀಶೈಲಪ್ಪ, ನರೇಗಾ ಎಡಿ ಪಂಡಿತ್ ಶಿಂಧೆ ಹಾಗೂ ಕೃಷಿ ಸಹಾಯಕ ನಿರ್ದೇಶಕ ಕರಣಕುಮಾರ, ನಾಲವಾರ ವಲಯಕ್ಕೆ ತೋಟಗಾರಿಕೆ ಅಧಿಕಾರಿ ಸಿದ್ಧಣ್ಣ, ಪಶುಸಂಗೋಪನೆ ಎಡಿ ಡಾ.ಶಂಕರ ಕಣ್ಣಿ ಹಾಗೂ ಸಿಡಿಪಿಓ ಮಲ್ಲಣ್ಣ ದೇಸಾಯಿ, ಪುರಸಭೆ ವಾಡಿ ಮತ್ತು ಇತರೆ ಗ್ರಾಮಗಳ ವಲಯಕ್ಕೆ ರಾವೂರ ಐಟಿಐ ಪ್ರಾಂಶುಪಾಲ ವಿಠ್ಠಲ್, ರಾವೂರ ಪಿಯು ಕಾಲೇಜಿನ ಪ್ರಾಂಶುಪಾಲ ಕೆ.ಐ.ಬಡಿಗೇರ್ ಹಾಗೂ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ್ ಹಾದಿಮನಿ, ಶಹಾಬಾದ ಮತ್ತು ಇತರೆ ಗ್ರಾಮಗಳ ವಲಯಕ್ಕೆ ಮಿಡ್ ಡೇ ಮೀಲ್ಸ್ ಎಡಿ ಪ್ರಕಾಶ ನಾಯ್ಕೋಡಿ, ತಾಲೂಕಾ ವಿಸ್ತರಣಾಧಿಕಾರಿ ತೇಜರಾಜ ಹಾಗೂ ಪಿಇಆರ್ಡಿ ಸಾಯಬಣ್ಣ.
41-ಸೇಡಂ ಕ್ಷೇತ್ರ: ಸುಲೆಪೇಟ್ ವಲಯಕ್ಕೆ ಬಿಸಿಎಂ ಅಧಿಕಾರಿ ಅನುಸೂಯಾ ಚವ್ಹಾಣ, ಕೃಷಿ ಎಡಿ ವೈ.ಎಲ್.ಹಂಪಣ್ಣ ಹಾಗೂ ಪಿಡಬ್ಲ್ಯೂಡಿ ಎಇ ಶೇಖಪ್ಪ ತಾಮದೊಡ್ಡಿ, ಸೇಡಂ ವಲಯಕ್ಕೆ ತೋಟಗಾರಿಕೆ ಎಡಿ ರಾಘವೇಂದ್ರ, ಪಿಆರ್ಇ ಎಇಇ ಹನುಮಪ್ಪ ಅವಧಾನಿ ಹಾಗೂ ಪಿಆರ್ಇಡಿ ಎಇ ಶ್ಯಾಮರಾವ ಸಂಗ್ರಾಮ, ಅಡಕಿ ವಲಯಕ್ಕೆ ಪುರಸಭೆ ಸಮುದಾಯ ಅಧಿಕಾರಿ ಗ್ವಾಲೇಶ ಅಣ್ಣಾರಾವ, ಖಜಾನೆ ಎಡಿ ನಾಗರಾಜ ಹಾಗೂ ಎಎಚ್ ಅಧಿಕಾರಿ ಚಂದ್ರಶೇಖರ ಆರ್. ಪಾಟೀಲ, ಮುಧೋಳ ವಲಯಕ್ಕೆ ಎ.ಎಚ್.ಅಧಿಕಾರಿ ನರಸಿಂಗ್ ಕಾಂಬಳೆ, ಎಂಐ ಜೆ.ಇ. ಯುವರಾಜ ಹಾಗೂ ಜೆಇ ಶಿವಕುಮಾರ, ಕೋಡ್ಲಾ ವಲಯಕ್ಕೆ ಬಿಇಓ ವಿಜಯಕುಮಾರ ಜಮಖಂಡಿ, ಸೇಡಂ ಪದವಿ ಕಾಲೇಜಿನ ಬಸವರಾಜ ಎಂ.ಕೊನ್ನೇರಿ ಹಾಗೂ ಎಂಐ ಎಇಇ ಎಂ.ಬಾಲರೆಡ್ಡಿ ಅವರನ್ನು ನೇಮಿಸಿದೆ.
42-ಚಿಂಚೋಳಿ ಕ್ಷೇತ್ರ: ಐನಾಪುರ ವಲಯಕ್ಕೆ ಜಿ.ಪಂ.ಇಂ ಎ.ಇ.ಇ. ಕೆ.ರಾಜೇಶ, ಪಶುಸಂಗೋಪನೆ ಎ.ಡಿ. ಧನರಾಜ ಬೊಮ್ಮಾ ಹಾಗೂ ಎ.ಎಚ್.ಓ. ರಮೇಶ. ಚಿಂಚೋಳಿ ವಲಯಕ್ಕೆ ಚಿಂಚೊಳಿ ಪುರಸಭೆ ಸಿ.ಓ. ಕಾಶಿನಾಥ ಧನ್ನಿ, ಪುರಸಭೆ ಜೆ.ಇ. ದೇವಿಂದ್ರಪ್ಪ ಹಾಗೂ ಎ.ಎಚ್.ಓ. ಶಿವಾನಂದ. ಕೋಡ್ಲಿ ವಲಯಕ್ಕೆ ತೋಟಗಾರಿಕೆ ಎ.ಡಿ. ಮೆಹತಾಬ ರಸೂಲ್, ಪಿ.ಡಬ್ಲ್ಯೂ.ಡಿ. ಎ.ಇ.ಇ. ಸಿದ್ಧರಾಮ ದಂಡಗುಲಕರ್ ಹಾಗೂ ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ. ಕಾಳಗಿ ವಲಯಕ್ಕೆ ಸಿ.ಡಿ.ಪಿ.ಓ ಶರಣಬಸಪ್ಪ, ತಾಲೂಕ ಪಂಚಾಯತ ಇ.ಓ ರೇವಣಸಿದ್ದಪ್ಪ ಹಾಗೂ ಪಿ.ಆರ್.ಇ. ಎ.ಇ.ಇ. ವೀರೇಂದ್ರ ಕುಮಾರ ಅವರನ್ನು ನೇಮಿಸಲಾಗಿದೆ.
43-ಗುಲಬರ್ಗಾ ಗ್ರಾಮೀಣ ಕ್ಷೇತ್ರ: ಅವರಾದ(ಬಿ) ಮತ್ತು ಮಹಾಗಾಂವ ವಲಯಕ್ಕೆ ಮಿಡ್ ಡೇ ಮೀಲ್ಸ್ ಬಿ.ಇ.ಓ. ರಾಜಕುಮಾರ ರೆಡ್ಡಿ, ಡಯಟ್ ಬೋಧಕರಾದ ಗುರುಶಾಂತಯ್ಯ ಹಿರೇಮಠ ಹಾಗೂ ಹನುಮಂತ ಭಜಂತ್ರಿ. ಕಲಬುರಗಿ ಮತ್ತು ಶಹಾಬಾದ ವಲಯಕ್ಕೆ ಡಯಟ್ ಬೋಧಕ ಶಶಿಧರ ಬಿರಾದರ, ವಿಶ್ವನಾಥ ಎಂ.ವೈ. ಹಾಗೂ ಸಿ.ಡಿ.ಪಿ.ಓ. ಪ್ರವೀಣ ಹೇರೂರ. ಕಮಲಾಪೂರ ಮತ್ತು ನರೋಣಾ ವಲಯಕ್ಕೆ ಎ.ಪಿ.ಎಂ.ಸಿ. ಎ.ಇ. ಎಸ್.ಎಚ್.ಜಾಗಿರದಾರ್, ಕೃಷಿ ಇಲಾಖೆಯ ಎ.ಎ.ಓ ಶಿವಪುತ್ರ ಜೈಕಾರ್ ಹಾಗೂ ಎ.ಎ.ಓ. ಸೈಯದ್ ಗೌಸ್ ಅವರನ್ನು ನೇಮಿಸಲಾಗಿದೆ.
44-ಗುಲಬರ್ಗಾ ದಕ್ಷಿಣ ಕ್ಷೇತ್ರ: ಗುಲಬರ್ಗಾ ದಕ್ಷಿಣ ಕ್ಷೇತ್ರದ ತಂಡ-1ಕ್ಕೆ ಜಿ.ಪಂ. ಡಿ.ಆರ್.ಡಿ.ಎ ವ್ಯವಸ್ಥಾಪಕ ಮಲ್ಲಿಕಾರ್ಜುನ, ರೇಷ್ಮೆ ಇಲಾಖೆಯ ಎ.ಡಿ. ಅಬ್ದುಲ್ ನಯೀಮ್ ಹಾಗೂ ಹಿರಿಯ ಭೂ ವಿಜ್ಞಾನಿ ಎಸ್.ರೋಹಿತ್. ತಂಡ-2ಕ್ಕೆ ನಗರ ಕೇಂದ್ರ ಗ್ರಂಥಾಲಯದ ಡಿ.ಡಿ. ಅಜಯಕುಮಾರ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಭಕ್ತ ಮಾರ್ಕಂಡೇಯ ಹಾಗೂ ತೋಟಗಾರಿಕೆ ಇಲಾಖೆಯ ಎ.ಡಿ. ಪರಮೇಶ್ವರ. ತಂಡ-3ಕ್ಕೆ ಸಿ.ಡಿ.ಪಿ.ಓ. ಭೀಮರಾಯ, ತೋಟಗಾರಿಕೆ ಇಲಾಖೆಯ ಎಸ್.ಎ.ಡಿ. ಶಿವಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಡಿ.ಡಿ. ಬಿ.ರಾಜು. ತಂಡ-4ಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜೆ.ಡಿ. ವಸಂತಕುಮಾರ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಜೆ.ಡಿ. ಕೆ.ಎಚ್.ಚೆನ್ನೂರ ಹಾಗೂ ಕೆ.ಆರ್.ಐ.ಡಿ.ಎಲ್ ಇ.ಇ. ಅನೀಲಕುಮಾರ ಅವರನ್ನು ನೇಮಿಸಿದೆ.
ಇದನ್ನೂ ಓದಿ: ಟಿಕೆಟ್ ಕೊಡಿಸಿದ್ದು ನಾನು, ಕುತ್ತಿಗೆ ಕೊಯ್ದು ಹೋದವನು ನೀನು: ಸಚಿವ ನಾರಾಯಣಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
45-ಗುಲಬರ್ಗಾ ಉತ್ತರ ಕ್ಷೇತ್ರ: ಗುಲಬರ್ಗಾ ಉತ್ತರ ಕ್ಷೇತ್ರದ ತಂಡ-1ಕ್ಕೆ ಡಿ.ಡಿ.ಪಿ.ಐ. ಕಚೇರಿಯ ಇ.ಓ ಶಿವಗೊಂಡಪ್ಪ, ಸಹಾಯಕ ಅಂಕಿ-ಸಂಖ್ಯಾ ಅಧಿಕಾರಿ ಅಂಬಾದಾಸ ಡಿ. ಸಗರ್ ಹಾಗೂ ಎ.ಡಿ. ವಿನೋದ ರಾಜೋಳೆ. ತಂಡ-2ಕ್ಕೆ ಸಹಕಾರ ಸಂಘ(ಅಡಿಟ್) ಡಿ.ಡಿ. ಸುಭಾಶ್ಚಂದ್ರ, ಮೀನುಗಾರಿಕೆ ಇಲಾಖೆಯ ಎ.ಡಿ. ಶಂಕರ ಗೊಂದಳಿ ಹಾಗೂ ತೋಟಗಾರಿಕೆ ಇಲಾಖೆಯ ಎ.ಡಿ. ಸಂದೀಪ ಪಾಟೀಲ. ತಂಡ-3ಕ್ಕೆ ಮೀನುಗಾರಿಕೆ ಇಲಾಖೆಯ ಎಸ್.ಎ.ಡಿ. ಆನಂದ ಪುರಾಣಿಕ್, ಜಿ.ಪಂ. ಕಚೇರಿಯ ವಿಠ್ಠಲ್ ಭಟ್ಟ್ ಜೋಷಿ ಹಾಗೂ ತೋಟಗಾರಿಕೆ ಕಚೇರಿಯ ವ್ಯವಸ್ಥಾಪಕ ಸುಭಾಷ ಅವರನ್ನು ನೇಮಿಸಲಾಗಿದೆ.
46-ಆಳಂದ ಕ್ಷೇತ್ರ: ಆಳಂದ ವಲಯಕ್ಕೆ ಪಿ.ಆರ್.ಇ. ಎ.ಇ.ಇ. ನಾಗಮೂರ್ತಿ ಶೀಲವಂತ ವಾಡೆಕರ್, ಗ್ರಾ.ಕು.ನೀ&ನೈ. ಇಲಾಖೆಯ ಎ.ಇ.ಇ. ಚಂದ್ರಮೌಳಿ ಹಾಗೂ ಪಿ.ಡಬ್ಲ್ಯೂ.ಡಿ. ಎ.ಇ.ಇ. ಶಶಿಧರ ಪಾಟೀಲ. ಮಾದನಹಿಪ್ಪರಗಾ ವಲಯಕ್ಕೆ ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಸಿ.ಡಿ.ಪಿ.ಓ. ಶಿವಮೂರ್ತಿ ಹಾಗೂ ಅಮರ್ಜಾ ಯೋಜನೆಯ ಎ.ಇ.ಇ. ಗೌತಮ ಕಾಂಬ್ಳೆ. ಖಜೂರಿ ವಲಯಕ್ಕೆ ಸಹಾಯಕ ಕೃಷಿ ಅಧಿಕಾರಿ ಬಸವರಾಜ ಅಟ್ಟೂರ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಸುಧಾಕರ ತಿಪ್ಪಣ್ಣ ಮತ್ತು ಶಿವಣ್ಣ ಬಿರಾದಾರ. ನಿಂಬರ್ಗಾ ವಲಯಕ್ಕೆ ಕೃಷಿ ಅಧಿಕಾರಿ ರಮೇಶ ತೆಲ್ಲೂರ, ತೋಟಗಾರಿಕೆ ಅಧಿಕಾರಿಗಳಾದ ಜಗನ್ನಾಥರೆಡ್ಡಿ ಮತ್ತು ಸಕಲೇಶ ಪಾಟೀಲ ಅವರನ್ನು ನೇಮಿಸಲಾಗಿದೆ.
ತಂಡದ ಜವಾಬ್ದಾರಿಗಳು: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ದೂರುಗಳಿಗೆ ಸ್ಪಂದಿಸುವುದು, ಮತದಾರರಿಗೆ ಬೆದರಿಕೆ ನೀಡುವ, ಸಮಾಜ ಘಾತುಕ ಶಕ್ತಿಗಳ ಚಲವಲನ ಮೇಲೆ ನಿಗಾ ವಹಿಸುವುದು. ಮತದಾರರಿಗೆ ಆಮಿಷ ಒಡ್ಡಲು ಅಕ್ರಮವಾಗಿ ಸಾಗುವ ಹಣ, ವಸ್ತುಗಳನ್ನು ವಶಕ್ಕೆ ಪಡೆಯುವುದು. ಚುನಾವಣಾ ಖರ್ಚು ದೂರಿಗೆ ಸ್ಪಂದಿಸುವುದು ಮತ್ತು ಚುನಾವಣಾ ರ್ಯಾಲಿ, ಸಭೆ, ಸಮಾರಂಭಗಳನ್ನು ವಿ.ವಿ.ಟಿ ತಂಡದ ಸಹಾಯದೊಂದಿಗೆ ವಿಡಿಯೋಗ್ರಾಪಿ ಮಾಡುವುದು. ಕಾಲಕಾಲಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾಧಿಕಾರಿಗಳು, ಚುನಾವಣಾ ವೀಕ್ಷಕರ ಸೂಚನೆಗಳನ್ನು ಪಾಲಿಸುವುದರ ಜೊತೆಗೆ ದೈನಂದಿನ ವರದಿ ಸಲ್ಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಧಾನಸಭೆ ಚುನಾವಣೆಯ ತಾಜಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ