ತಬೀ ತೋ ಸಬ್ ಮೋದಿ ಕೋ ಚುನ್ತೇ ಹೈ; ಲೋಕಸಭಾ ಚುನಾವಣಾ ಪ್ರಚಾರ ಗೀತೆ ಬಿಡುಗಡೆ ಮಾಡಿದ ಬಿಜೆಪಿ
ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ, ಗುರುವಾರ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ. "ಸಪ್ನೆ ನಹೀ ಹಕೀಕತ್ ಬುನ್ತೇ ಹೈ, ತಬೀ ತೋ ಸಬ್ ಮೋದಿ ಕೋ ಚುನ್ತೇ ಹೈ (ಕನಸುಗಳಲ್ಲ, ವಾಸ್ತವವನ್ನು ಹೆಣೆಯುತ್ತೇವೆ, ಅದಕ್ಕಾಗಿಯೇ ಎಲ್ಲರೂ ಮೋದಿಯನ್ನು ಆಯ್ಕೆ ಮಾಡುತ್ತಾರೆ) ಎಂಬ ಸಾಲಿನೊಂದಿಗೆ ಪ್ರಚಾರ ಗೀತೆ ಆರಂಭವಾಗುತ್ತದೆ.
ದೆಹಲಿ ಜನವರಿ 25: 2024 ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮತ್ತೊಮ್ಮೆ ನರೇಂದ್ರ ಮೋದಿಯನ್ನು (Narendra Modi) ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಲು ಬಿಜೆಪಿ ಗುರುವಾರ ತನ್ನ ಹೊಸ ಅಭಿಯಾನ ಮೋದಿ ಕೋ ಚುನ್ತೇ ಹೈ (ಮೋದಿಯನ್ನು ಆಯ್ಕೆ ಮಾಡೋಣ) ಪ್ರಾರಂಭಿಸಿದೆ. “ಸಪ್ನೆ ನಹೀ ಹಕೀಕತ್ ಬುನ್ತೇ ಹೈ, ತಬೀ ತೋ ಸಬ್ ಮೋದಿ ಕೋ ಚುನ್ತೇ ಹೈ (ಕನಸುಗಳಲ್ಲ, ವಾಸ್ತವವನ್ನು ಹೆಣೆಯುತ್ತೇವೆ, ಅದಕ್ಕಾಗಿಯೇ ಎಲ್ಲರೂ ಮೋದಿಯನ್ನು ಆಯ್ಕೆ ಮಾಡುತ್ತಾರೆ) ಎಂಬ ಸಾಲಿನೊಂದಿಗೆ ಪ್ರಚಾರ ಗೀತೆ ಆರಂಭವಾಗುತ್ತದೆ.
ಭಾರತದ ಪರಿಸ್ಥಿತಿ ಶೋಚನೀಯವಾಗಿತ್ತು. ನಂತರ ದೇಶ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದೆ. ಮೋದಿ ತನ್ನ ಭರವಸೆಯನ್ನು ಈಡೇರಿಸಿದರು, ಅಭಿವೃದ್ಧಿ ಹೊಂದಿದ ದೇಶದ ಕನಸು ಕೇವಲ ಕನಸಾಗಿ ಉಳಿಯಲಿಲ್ಲ .ಮೋದಿ ಸರಿಯಾದ ಮಾರ್ಗಗಳನ್ನು ಆರಿಸಿಕೊಂಡರು. ಅವರು ವಾಸ್ತವವನ್ನು ಹೆಣೆದರೇ ಹೊರತು, ಕನಸಲ್ಲ. ಆದ್ದರಿಂದಲೇ ಎಲ್ಲರೂ ಮೋದಿಯನ್ನು ಆಯ್ಕೆ ಮಾಡುತ್ತಾರೆ ಎಂಬುದು ಹಾಡಿನ ಸಾಲು.
#WATCH | BJP launches new campaign for the upcoming Lok Sabha elections 2024 – ‘Modi ko chunte hain’ pic.twitter.com/bblzdEMDDY
— ANI (@ANI) January 25, 2024
ಅವರು ಭಾರತವನ್ನು ತನ್ನ ತಾಯಿ ಮತ್ತು ದೇಶವಾಸಿಗಳನ್ನು ದೇವರೆಂದು ಪರಿಗಣಿಸುತ್ತಾರೆ. ಅವರು ಖ್ಯಾತಿಗಾಗಿ ಹಂಬಲಿಸದೆ ಕೆಲಸವನ್ನು ಆಯ್ಕೆ ಮಾಡುತ್ತಾರೆ. ಅದಕ್ಕಾಗಿಯೇ ಎಲ್ಲರೂ (ಪ್ರತಿ ದೇಶ) ಅವರ ಮಾತನ್ನು ಕೇಳುತ್ತಾರೆ. ಭ್ರಷ್ಟರು ಭಯಭೀತರಾಗಿರುವಾಗ ಭಾರತೀಯ ಮಹಿಳೆಯರು ನಾಯಕರಾಗಿ ಹೊರಹೊಮ್ಮಿದರು. ಅವರು ವಿನೀತರಾಗಿದ್ದುಕೊಂಡೇ ಆಕಾಶವನ್ನು ತಲುಪಿದರು (ಚಂದ್ರಯಾನದ ಉಲ್ಲೇಖ) ಎಂದು ಹಾಡು ಮೋದಿ ಅಧಿಕಾರವಧಿಯ ಸಾಧನೆಗಳನ್ನು ವಿವರಿಸುತ್ತದೆ.
ಇದನ್ನೂ ಓದಿ:ರಾಮಲಲ್ಲಾ ಇನ್ಮುಂದೆ ಟೆಂಟ್ನಲ್ಲಿ ಅಲ್ಲ, ದಿವ್ಯ ಮಂದಿರದಲ್ಲಿ ಇರುತ್ತಾನೆ: ನರೇಂದ್ರ ಮೋದಿ
ಮೋದಿ ಸರ್ಕಾರದ ವಿದೇಶಾಂಗ ನೀತಿಯ ಯಶಸ್ಸು ಸೇರಿದಂತೆ ಪ್ರಚಾರದ ಹಾಡಿನಲ್ಲಿ ವಿವಿಧ ವರ್ಗಗಳ ಜನರಿಗೆ ಪ್ರಧಾನಿ ಮೋದಿಯವರ ಯೋಜನೆಗಳನ್ನು ಉಲ್ಲೇಖಿಸಲಾಗಿದೆ.
2024 ರ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಅಧಿಕೃತ ಪ್ರಚಾರವನ್ನು ನಡ್ಡಾ ಅವರು ಪ್ರಧಾನಿ ಮೋದಿಯವರ ವರ್ಚುವಲ್ ಉಪಸ್ಥಿತಿಯಲ್ಲಿ ಪ್ರಾರಂಭಿಸಿದರು ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ. ಗುರುವಾರ ಬುಲಂದ್‌ಶಹರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯೊಂದಿಗೆ ಉತ್ತರ ಪ್ರದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಧಾನಿ ಪ್ರಾರಂಭಿಸಲಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ 50 ಲಕ್ಷ ಮೊದಲ ಬಾರಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಅವರು ‘ಪರಿವಾರವಾದಿ’ (ಕುಟುಂಬ ರಾಜಕಾರಣ) ಪಕ್ಷಗಳನ್ನು ತಮ್ಮ ಮತದ “ಶಕ್ತಿ” ಯಿಂದ ಸೋಲಿಸಲು ಯುವಕರನ್ನು ಉತ್ತೇಜಿಸಿದರು. “ಕುಟುಂಬ ನಡೆಸುವ ಪಕ್ಷಗಳು ಇತರ ಯುವಕರನ್ನು ಮುನ್ನಡೆಯಲು ಎಂದಿಗೂ ಅನುಮತಿಸುವುದಿಲ್ಲ, ನೀವು ಅವರನ್ನು ನಿಮ್ಮ ಮತಗಳಿಂದ ಸೋಲಿಸಬೇಕು” ಎಂದು ಪ್ರಧಾನಿ ಹೇಳಿದರು.
ಬಿಜೆಪಿ ಶೀಘ್ರದಲ್ಲೇ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ತನ್ನ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಹೆಚ್ಚಿಸುತ್ತಾ, ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ತನ್ನ ಮತಗಳ ಪ್ರಮಾಣವನ್ನು ಶೇಕಡಾ 37.36 ರಿಂದ ಶೇಕಡಾ 50 ಕ್ಕೆ ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Thu, 25 January 24