ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ ಅಂದ್ರೆ ನಾವು ತೊಡಿಸ್ತೇವೆ: ಬಿಹಾರದಲ್ಲಿ ಪ್ರಧಾನಿ ಮೋದಿ

ಪಾಕಿಸ್ತಾನ ಬಳೆಗಳನ್ನು ತೊಟ್ಟಿಲ್ಲ ಅಂದ್ರೆ ನಾವು ಅವರಿಗೆ ಬಳೆ ತೊಡಿಸುತ್ತೇವೆ. ಅವರಿಗೆ ಈಗ ಗೋಧಿಯೂ ಬೇಕಿದೆ. ಅವರಿಗೆ ವಿದ್ಯುತ್ ಇಲ್ಲ. ಈಗ ಅವರಿಗೆ ಬಳೆಗಳ ಕೊರತೆಯಿದೆ ಎಂದು ನನಗೆ ತಿಳಿಯಿತು ಎಂದು ಬಿಹಾರದ ಮುಜಾಫರ್‌ಪುರದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಫಾರೂಕ್ ಅಬ್ದುಲ್ಲಾ ಅಥವಾ ಮಣಿ ಶಂಕರ್ ಅಯ್ಯರ್ ಹೆಸರನ್ನು ಉಲ್ಲೇಖಿಸದೆ ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ ಅಂದ್ರೆ ನಾವು ತೊಡಿಸ್ತೇವೆ: ಬಿಹಾರದಲ್ಲಿ ಪ್ರಧಾನಿ ಮೋದಿ
ನರೇಂದ್ರ ಮೋದಿ

Updated on: May 13, 2024 | 2:30 PM

ಪಾಟ್ನಾ ಮೇ 13: ಫಾರೂಕ್ ಅಬ್ದುಲ್ಲಾ ಮತ್ತು ಮಣಿಶಂಕರ್ ಅಯ್ಯರ್ ಹೇಳಿಕೆ ಬಗ್ಗೆ ಇಂಡಿಯಾ ಬಣ (INDIA bloc)ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಣದ ಕೊರತೆಯಿರುವ ಪಾಕಿಸ್ತಾನ ಬಳೆ ತೊಟ್ಟಿಲ್ಲ ಅಂದರೆ ಭಾರತ ಅವರಿಗೆ ಬಳೆ ತೊಡಿಸುತ್ತದೆ ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (PoK) ಹಿಂಪಡೆಯುವ ರಾಜನಾಥ್ ಸಿಂಗ್ ಅವರ ಪ್ರತಿಜ್ಞೆಗೆ ಪ್ರತಿಕ್ರಿಯಿಸಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ನೆರೆಯ ದೇಶವು ಬಳೆ ತೊಟ್ಟುಕೊಂಡಿಲ್ಲ, ಭಾರತಕ್ಕೆ ಹಾನಿ ಮಾಡುವ ಪರಮಾಣು ಬಾಂಬ್‌ಗಳನ್ನು ಹೊಂದಿದೆ ಎಂದು ಹೇಳಿದ್ದರು.

“ಪಾಕಿಸ್ತಾನ್ ನೆ ಚೂಡಿಯಾಂ ನಹೀ ಪೆಹನಿ ಹೈ, ಅರೆ ಭಾಯಿ ಪೆಹನಾ ದೇಂಗೆ. ಅಬ್ ಉನ್ಕೋ ಆಟಾ ಭಿ ಚಾಹಿಯೇ, ಉನ್ಕೇ ಪಾಸ್ ಬಿಜ್ಲಿ ಭಿ ನಹೀ ಹೈ, ಅಬ್ ಹಮೇನ್ ಮಾಲೂಮ್ ಪಡಾ ಉನ್ಕೇ ಪಾಸ್ ಚೂಡಿಯನ್ ಭೀ ನಹೀ ಹೈ (ಪಾಕಿಸ್ತಾನ ಬಳೆಗಳನ್ನು ತೊಟ್ಟಿಲ್ಲ ಅಂದ್ರೆ ನಾವು ಅವರಿಗೆ ಬಳೆ ತೊಡಿಸುತ್ತೇವೆ. ಅವರಿಗೆ ಈಗ ಗೋಧಿಯೂ ಬೇಕಿದೆ. ಅವರಿಗೆ ವಿದ್ಯುತ್ ಇಲ್ಲ. ಈಗ ಅವರಿಗೆ ಬಳೆಗಳ ಕೊರತೆಯಿದೆ ಎಂದು ನನಗೆ ಗೊತ್ತಾಯಿತು)”ಎಂದು ಬಿಹಾರದ ಮುಜಾಫರ್‌ಪುರದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಫಾರೂಕ್ ಅಬ್ದುಲ್ಲಾ ಅಥವಾ ಅಯ್ಯರ್ ಹೆಸರನ್ನು ಉಲ್ಲೇಖಿಸದೆ ವ್ಯಂಗ್ಯವಾಡಿದ್ದಾರೆ.

ಮೋದಿ ಭಾಷಣದ ವಿಡಿಯೊ

ಮಣಿಶಂಕರ್ ಅಯ್ಯರ್ ಅವರ ಹಳೆಯ ವಿಡಿಯೊ ಕಳೆದ ವಾರ ವೈರಲ್ ಆಗಿತ್ತು, ಇದರಲ್ಲಿ ಕಾಂಗ್ರೆಸ್ ಹಿರಿಯರ ನಾಯಕ, ಭಾರತ ಸರ್ಕಾರ ಪಾಕಿಸ್ತಾನವನ್ನು ಗೌರವಿಸಬೇಕು, ಅವರಲ್ಲಿ ಪರಮಾಣು ಬಾಂಬ್ ಇದೆ ಎಂದು ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ದೇಶದ ಜನರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಕಳೆದ ವಾರ ಹೇಳಿದ್ದರು. ಇಂತಹ ದುರ್ಬಲ ಧೋರಣೆ ಈ ಹಿಂದೆ ಗಡಿಯಾಚೆಗಿನ ಭಯೋತ್ಪಾದನೆಗೆ ಉತ್ತೇಜನ ನೀಡಿತ್ತು ಎಂದರು. ನೆರೆಯ ದೇಶವು ತನ್ನ ಬಾಂಬ್‌ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಆದರೆ ಅವುಗಳ ಕಳಪೆ ಗುಣಮಟ್ಟದ ಕಾರಣ ಅದನ್ನು ಖರೀದಿಸಲು ಯಾರೂ ಆಸಕ್ತಿ ವಹಿಸಲಿಲ್ಲ ಎಂದು ಹೇಳಿದ್ದಾರೆ.

ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ₹ 2200 ಕೋಟಿ ಅಕ್ರಮ ಹಣವನ್ನು ವಶಪಡಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಇಂದು(ಸೋಮವಾರ) ಹೇಳಿದ್ದಾರೆ.

ಆರ್‌ಜೆಡಿ ಮತ್ತು ಕಾಂಗ್ರೆಸ್ ಬಿಹಾರದ ಜನರ ಕಲ್ಯಾಣಕ್ಕಿಂತ ತಮ್ಮ ಮತ ಬ್ಯಾಂಕ್‌ಗೆ ಆದ್ಯತೆ ನೀಡುತ್ತವೆ ಎಂದು ಹಾಜಿಪುರದಲ್ಲಿ ಪಿಎಂ ಮೋದಿ ಹೇಳಿದ್ದಾರೆ. ಆರ್‌ಜೆಡಿ ರಾಜ್ಯಕ್ಕೆ ಜಂಗಲ್ ರಾಜ್ ತಂದಿದೆ ಎಂದು ಪ್ರಧಾನಿ ಆರೋಪಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಆಂಧ್ರಪ್ರದೇಶದ ಮತಗಟ್ಟೆಯಲ್ಲಿ ಮತದಾರನ ಕೆನ್ನೆಗೆ ಬಾರಿಸಿದ ವೈಎಸ್​ಆರ್ ಕಾಂಗ್ರೆಸ್​ನ ಶಾಸಕ

ಲಾಲು ಪ್ರಸಾದ್ ಯಾದವ್ ಅವರ “ಮುಸ್ಲಿಮರು ಮೀಸಲಾತಿ ಪಡೆಯಬೇಕು” ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮತ್ತು ಆರ್‌ಜೆಡಿ ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರಿಗೆ ಸಂವಿಧಾನದಿಂದ ಒದಗಿಸಿದ ಮೀಸಲಾತಿಯನ್ನು ಕಿತ್ತುಕೊಳ್ಳುತ್ತವೆ ಎಂದು ಹೇಳಿದ್ದು, ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ತಮ್ಮ ಸ್ವಂತ ಮಕ್ಕಳ ವಿಷಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ