ಲೋಕಸಭಾ ಚುನಾವಣೆ 2024: ಸಿಖ್ಖರ ಪೇಟ ಧರಿಸಿ ಗುರುದ್ವಾರದಲ್ಲಿ ಊಟ ಬಡಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು ಬಿಹಾರದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿ ಸಿಖ್ಖರ ಪೇಟ ತೊಟ್ಟು ಜನರಿಗೆ ಉಣಬಡಿಸಿರುವ ವಿಡಿಯೋ ವೈರಲ್ ಆಗಿದೆ. ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಆನಂದಪುರ ಸಾಹಿಬ್‌ಗೆ ಹೋಗುವ ಮೊದಲು ಅವರು ತಮ್ಮ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದರು ಎಂದು ಹೇಳಲಾಗುತ್ತದೆ.

Follow us
|

Updated on:May 13, 2024 | 11:54 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಬಿಹಾರದಲ್ಲಿರುವ ಪಾಟ್ನಾ​ ಸಾಹಿಬ್ ಗುರುದ್ವಾರದಲ್ಲಿ ಸಿಖ್ಖರ ಪೇಟ ಧರಿಸಿ ನೂರಾರು ಮಂದಿಗೆ ಊಟ ಬಡಿಸಿದ್ದಾರೆ. ನೆಲದ ಮೇಲೆ ಕುಳಿತಿರುವ ಸಿಖ್ಖರಿಗೆ ಊಟ ಬಡಿಸಿದ್ದಾರೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವಾಗಿ, ಈ ಗುರುದ್ವಾರವನ್ನು 18 ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ನಿರ್ಮಿಸಿದರು.

ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಆನಂದಪುರ ಸಾಹಿಬ್‌ಗೆ ಹೋಗುವ ಮೊದಲು ಅವರು ತಮ್ಮ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದರು.

ಬಿಹಾರದಲ್ಲಿ ಮೋದಿ ರೋಡ್​ ಶೋ ಕೂಡ ನಡೆಸಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಮತ್ತು ಸ್ಥಳೀಯ ಸಂಸದ ರವಿಶಂಕರ್ ಪ್ರಸಾದ್ ಜೊತೆಗಿದ್ದರು.

ಮತ್ತಷ್ಟು ಓದಿ: ಲೋಕಸಭಾ ಚುನಾವಣೆ 2024: ನಾಮಪತ್ರ ಸಲ್ಲಿಕೆಗೂ ಮುನ್ನ ಇಂದು ವಾರಾಣಸಿಯಲ್ಲಿ ಪ್ರಧಾನಿ ಮೋದಿ ರೋಡ್​ ಶೋ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯದ ಹಾಜಿಪುರ, ಮುಜಾಫರ್‌ಪುರ ಮತ್ತು ಸರನ್ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:50 am, Mon, 13 May 24