AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಯ್ಡಾ: ಇತ್ತೀಚೆಗಷ್ಟೇ ಮಹಿಳೆ ಸಾವನ್ನಪ್ಪಿದ್ದ ಲಿಫ್ಟ್​ನಲ್ಲಿ ಮತ್ತೊಂದು ಅವಘಡ

ಲಿಫ್ಟ್​ ಅವಘಡಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಿಫ್ಟ್​ನ ಬ್ರೇಕ್​ ಫೇಲ್ ಆಗಿ 25ನೇ ಮಹಡಿಗೆ ಹೋಗಿ ಡಿಕ್ಕಿ ಹೊಡೆದಿರುವ ಘಟನೆ ನೋಯ್ಡಾದ ವಸತಿ ಸಮುಚ್ಚಯೊಂದರಲ್ಲಿ ನಡೆದಿದೆ.

ನೋಯ್ಡಾ: ಇತ್ತೀಚೆಗಷ್ಟೇ ಮಹಿಳೆ ಸಾವನ್ನಪ್ಪಿದ್ದ ಲಿಫ್ಟ್​ನಲ್ಲಿ ಮತ್ತೊಂದು ಅವಘಡ
ಲಿಫ್ಟ್​
ನಯನಾ ರಾಜೀವ್
|

Updated on: May 13, 2024 | 10:15 AM

Share

ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಲಿಫ್ಟ್​ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಲಿಫ್ಟ್​ನ ಬ್ರೇಕ್​ ಫೇಲ್ ಆಗಿ ಕೆಳಗಿನಿಂದ 25ನೇ ಮಹಡಿಗೆ ಹೋಗಿ ಡಿಕ್ಕಿ ಹೊಡೆದಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಸತಿ ಸಮುಚ್ಚಯದ ಲಿಫ್ಟ್​ ಇದಾಗಿದ್ದು, ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.

ಸೆಕ್ಟರ್ 137 ರಲ್ಲಿನ ಪಾರಸ್ ಟಿಯೆರಾ ಸೊಸೈಟಿಯಲ್ಲಿ ಲಿಫ್ಟ್​ನ ಬ್ರೇಕ್​ ಫೇಲ್ ಆಗಿ ಈ ಘಟನೆ ನಡೆದಿದೆ. ನೋಯ್ಡಾದಲ್ಲಿ ಕಳೆದ ವರ್ಷ ಇಂತಹ ಹಲವು ಘಟನೆಗಳು ನಡೆದಿವೆ. ಉತ್ತರ ಪ್ರದೇಶ ಸರ್ಕಾರವು ಲಿಫ್ಟ್‌ಗಳ ಸರಿಯಾದ ನಿರ್ವಹಣೆಗಾಗಿ ಕಾನೂನನ್ನು ಜಾರಿಗೆ ತರಬೇಕಿದೆ.

ನಾಲ್ಕನೇ ಮಹಡಿಯಲ್ಲಿದ್ದಾಗ ಲಿಫ್ಟ್​ ನಿಯಂತ್ರಣ ಕಳೆದುಕೊಂಡು ಏಕಾಏಕಿ 25ನೇ ಮಹಡಿಗೆ ಹೋಗಿ ಡಿಕ್ಕಿ ಹೊಡೆದಿದೆ. ಲಿಫ್ಟ್‌ನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಲಿಫ್ಟ್​ ಬದಲು ಮೆಟ್ಟಿಲು ಹತ್ತುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

ಟವರ್‌ನಲ್ಲಿರುವ ಎರಡು ಲಿಫ್ಟ್‌ಗಳನ್ನು ಮುಚ್ಚಲಾಗಿದೆ ಮತ್ತು ನಿವಾಸಿಗಳು ಮೆಟ್ಟಿಲುಗಳನ್ನು ಬಳಸಲು ಕೇಳಲಾಗಿದೆ. ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸರಿಯಾದ ನಿರ್ವಹಣೆ ಇಲ್ಲದೆ ಲಿಫ್ಟ್‌ ಕೆಟ್ಟು ಹೋಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ, ಲಿಫ್ಟ್‌ನ ಕೇಬಲ್ ತುಂಡಾದ ಕಾರಣ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ