ಲಿಫ್ಟ್ನಲ್ಲಿ ಬಾಲಕಿಯ ಮೇಲೆ ದಾಳಿ ಮಾಡಿದ ನಾಯಿ, ನಿಮಗೆ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ ಸಾಕಬೇಡಿ
ನೋಯ್ಡಾದಲ್ಲಿ ಬಾಲಕಿಯ ಮೇಲೆ ಸಾಕು ಶ್ವಾನವೊಂದು ದಾಳಿ ಮಾಡಿದೆ. ಈ ದಾಳಿಯಿಂದ ಬಾಲಕಿಗೆ ಆಘಾತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಜತೆಗೆ ಅಕ್ಕ-ಪಕ್ಕದ ಜನರು ಕೂಡ ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ, ಸಾಕಬೇಡಿ ಎಂದು ಹೇಳಿದ್ದಾರೆ
ಸಾಕು ನಾಯಿಗಳ ದಾಳಿ ಮಾಡುವ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ, ಅದರಲ್ಲೂ ಅಪಾರ್ಟ್ಮೆಂಟ್ಗಳಲ್ಲಿ ಇಂತಹ ಘಟನೆ ಹೆಚ್ಚು ಕಂಡು ಬರುತ್ತಿದೆ. ಇದೀಗ ನೋಯ್ಡಾದ ಲೋಟಸ್ 300 ರೆಸಿಡಿನ್ಶಿಯಲ್ ಸೊಸೈಟ್ನಲ್ಲಿ ಆಘತಕಾರಿ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಫ್ಟ್ನಲ್ಲಿ ಬಾಲಕಿಯೊಬ್ಬಳ ಮೇಲೆ ಅನೀರಿಕ್ಷಿತವಾಗಿ ನಾಯಿಯೊಂದು ದಾಳಿ ಮಾಡಿದೆ. ಇದೀಗ ಈ ವಿಡಿಯೋ ಎಕ್ಸ್ನಲ್ಲಿ ವೈರಲ್ ಆಗುತ್ತಿದೆ. ಮೇ 3ರಂದು ಈ ಘಟನೆ ನಡೆದಿದೆ. ಬಾಲಕಿಯೊಬ್ಬಳು ಲಿಫ್ಟ್ನ ಒಳಗೆ ಇರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಲಿಫ್ಟ್ ಓಪನ್ ಆಗುತ್ತಿದ್ದಂತೆ ಶ್ವಾನ ಲಿಫ್ಟ್ನ ಒಳಗೆ ಬಂದು ಬಾಲಕಿಯ ಮೇಲೆ ದಾಳಿ ಮಾಡಿದೆ.
ಶ್ವಾನ ದಾಳಿ ಮಾಡಿದಾಗ ಬಾಲಕಿ ಮೇಲಕ್ಕೆ ನೆಗೆದಿದ್ದಾಳೆ. ಈ ವೇಳೆ ನಾಯಿ ಕಚ್ಚಿದೆ ಎಂದು ಹೇಳಲಾಗಿದೆ. ಇದೇ ವೇಳೆ ವ್ಯಕ್ತಿಯೊಬ್ಬರು ಬಂದು ಬಾಲಕಿಯನ್ನು ನಾಯಿಯಿಂದ ಕಾಪಾಡಿದ್ದಾರೆ. ಇನ್ನು ಕಾಪಾಡಲು ಬಂದ ವ್ಯಕ್ತಿಯನ್ನು ನಾಯಿಯ ಮಾಲೀಕ ಎಂದು ಹೇಳಲಾಗಿದೆ. ನಾಯಿ ಬಾಲಕಿಯ ಮೇಲೆ ದಾಳಿ ಮಾಡಿದಾಗ ಈ ವ್ಯಕ್ತಿ ನಾಯಿಯನ್ನು ಒದ್ದು ಹೊರಗೆ ಕಳುಹಿಸಿದ್ದಾರೆ. ಆದರೆ ಬಾಲಕಿ ಇದೀಗ ನಾಯಿ ದಾಳಿಯಿಂದ ತುಂಬಾ ಭಯಗೊಂಡಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಐವರಿಗೆ ವೆಸ್ಟ್ ನೈಲ್ ಜ್ವರ ಪತ್ತೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Dog attack a teenager in Noida sector-107 society . #Noida #dogattack pic.twitter.com/Il594emIv1
— Jyoti Karki (@Jyoti_karki_) May 7, 2024
ಇನ್ನು ಈ ಘಟನೆಯಿಂದ ಅಕ್ಕ ಪಕ್ಕದ ಜನರು ಅಕ್ರೋಶಗೊಂಡಿದ್ದು. ಸಾಕು ನಾಯಿಗಳನ್ನು ಹೀಗೆ ಸಾರ್ವಜನಿಕ ಪ್ರದೇಶದಲ್ಲಿ ಬಿಡುವುದು ಸರಿಯಲ್ಲ, ಇದನ್ನು ನಿಮಗೆ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ. ಯಾಕೆ ಸಾಕಬೇಕು ಎಂದು ಕೇಳಿದ್ದಾರೆ. ಇದೀಗ ಬಾಲಕಿಯ ಪೋಷಕರು ಈ ಘಟನೆ ಬಗ್ಗೆ ನೋಯ್ಡಾ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ