ತೆಲಂಗಾಣದ ನಾರಾಯಣಪೇಟ್ ನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಕಲಬುರಗಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ತೆಲಂಗಾಣದ ನಾರಾಯಣಪೇಟ್ ನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಕಲಬುರಗಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 10, 2024 | 5:09 PM

ನಾರಾಯಣಪೇಟ್ ತೆಲಂಗಾಣದ ರಾಜಧಾನಿ ಹೈದರಾಬಾದ್ ನಿಂದ ಸುಮಾರು 160 ಕಿಮೀ ದೂರವಿರುವ ಜಿಲ್ಲಾ ಕೇಂದ್ರವಾಗಿದ್ದು, ರೇಶ್ಮೆ ಮತ್ತು ಕಾಟನ್ ಸೀರೆಗಳಿಗೆ ಪ್ರಸಿದ್ಧಿ ಹೊಂದಿರುವ ನಗರವಾಗಿದೆ. ರಾಜ್ಯದ ಗುರುಮಠಕಲ ವಿಧಾನಸಭಾ ಕ್ಷೇತ್ರದಿಂದ ನಾರಾಯಣಪೇಟ್ ಕೇವಲ 22 ಕಿಮೀ ದೂರದಲ್ಲಿದೆ.

ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಕಲಬುರಗಿ (Kalaburagi) ನಂಟು ಹೆಚ್ಚುತ್ತಿದೆ, ನಗರದಲ್ಲಿ ವಿಮಾನ ನಿಲ್ದಾಣವಿರುವ ಕಾರಣ ಅವರು ಇಲ್ಲಿಗೆ ಆಗಮಿಸಿ ಹೆಲಿಕಾಪ್ಟರ್ ನಲ್ಲಿ ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಿದ್ದಾರೆ. ಇವತ್ತು ತೆಲಂಗಾಣದ ನಾರಾಯಣಪೇಟ್ ನಲ್ಲಿ (Narayanpet) ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಭಾರತೀಯ ವಾಯುಸೇನೆಯ ವಿಮಾನವೊಂದರಲ್ಲಿ ಕಲಬುರಗಿಗೆ ಆಗಮಿಸಿದರು. ಪ್ರಧಾನಿ ಮೋದಿ ವಿಮಾನದಿಂದ ಕೆಳಗಿಳಿಯುತ್ತಿರುವುದನ್ನು ದೂರದಿಂದ ಸೆರೆಹಿಡಿದಿರುವ ದೃಶ್ಯಗಳಲ್ಲಿ ನೋಡಬಹುದು. ಅಂದಹಾಗೆ, ನಾರಾಯಣಪೇಟ್ ತೆಲಂಗಾಣದ ರಾಜಧಾನಿ ಹೈದರಾಬಾದ್ ನಿಂದ ಸುಮಾರು 160 ಕಿಮೀ ದೂರವಿರುವ ಜಿಲ್ಲಾ ಕೇಂದ್ರವಾಗಿದ್ದು, ರೇಶ್ಮೆ ಮತ್ತು ಕಾಟನ್ ಸೀರೆಗಳಿಗೆ ಪ್ರಸಿದ್ಧಿ ಹೊಂದಿರುವ ನಗರವಾಗಿದೆ. ರಾಜ್ಯದ ಗುರುಮಠಕಲ ವಿಧಾನಸಭಾ ಕ್ಷೇತ್ರದಿಂದ ನಾರಾಯಣಪೇಟ್ ಕೇವಲ 22 ಕಿಮೀ ದೂರದಲ್ಲಿದೆ. ಪ್ರಧಾನಿ ಮೋದಿ ನಾರಾಯಪೇಟ್ ನಿಂದ ಹೈದರಾಬಾದ್ ತೆರಳಿ ಅಲ್ಲಿನ ಲಾಲ್ ಬಹಾದ್ದೂರ್ ಸ್ಟೇಡಿಯಂ ಬೃಹತ್ ಬಿಜೆಪಿ ಸಮಾವೇಶದಲ್ಲಿ ಮಾತಾಡಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಲಾಲು ಪ್ರಸಾದ್ ಯಾದವ್ ನೀಡಿದ ಮುಸ್ಲಿಂ ಮೀಸಲಾತಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು