Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಲಕ್ಷ್ಮಿ ಹಣದಿಂದ ಅಕ್ಷಯ ತೃತೀಯದಂದು ಬಂಗಾರ ಕೊಳ್ಳಲು ಮುಗಿಬಿದ್ದ ಮಹಿಳೆಯರು

ಗೃಹ ಲಕ್ಷ್ಮಿ ಹಣದಿಂದ ಅಕ್ಷಯ ತೃತೀಯದಂದು ಬಂಗಾರ ಕೊಳ್ಳಲು ಮುಗಿಬಿದ್ದ ಮಹಿಳೆಯರು

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: May 10, 2024 | 6:31 PM

ಅಕ್ಷಯ ತೃತಿಯ ದಿನ ಚಿನ್ನ ಬೆಳ್ಳಿ ಬಂಗಾರ ಕೊಂಡರೆ ಶ್ರೇಷ್ಠ ಎನ್ನುವ ನಂಬಿಕೆ ಹಿನ್ನಲೆ ಇಂದು ಅಕ್ಷಯ ತೃತಿಯ ಅಂತ ಮಹಿಳೆಯರು ಚಿಕ್ಕಬಳ್ಳಾಫುರದಲ್ಲಿ ಬಂಗಾರ ಕೊಳ್ಳಲು ಮುಗಿಬಿದ್ದ ದೃಶ್ಯಗಳು ಕಂಡು ಬಂತು. ನಗರದ ಗಂಗಮ್ಮ ಗುಡಿ ಗೋಲ್ಡ್ ಬಜಾರ್ ನಲ್ಲಿರುವ ಬಂಗಾರದ ಅಂಗಡಿಗಳಲ್ಲಿ ಜನ ಜಂಗುಳಿಯಾಗಿತ್ತು. ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರು, ಕೂಡಿಟ್ಟ ಹಣದಿಂದ ಬಂಗಾರ ಖರೀದಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ, ಮೇ 10: ಅಕ್ಷಯ ತೃತಿಯ (Akshaya Tritiya) ದಿನ ಚಿನ್ನ ಬೆಳ್ಳಿ ಬಂಗಾರ ಕೊಂಡರೆ ಶ್ರೇಷ್ಠ ಎನ್ನುವ ನಂಬಿಕೆ ಹಿನ್ನಲೆ ಇಂದು ಅಕ್ಷಯ ತೃತಿಯ ಅಂತ ಮಹಿಳೆಯರು ಚಿಕ್ಕಬಳ್ಳಾಫುರದಲ್ಲಿ ಬಂಗಾರ ಕೊಳ್ಳಲು ಮುಗಿಬಿದ್ದ ದೃಶ್ಯಗಳು ಕಂಡು ಬಂತು. ನಗರದ ಗಂಗಮ್ಮ ಗುಡಿ ಗೋಲ್ಡ್ ಬಜಾರ್ ನಲ್ಲಿರುವ ಬಂಗಾರದ ಅಂಗಡಿಗಳಲ್ಲಿ ಜನ ಜಂಗುಳಿಯಾಗಿತ್ತು. ಇದ್ರಿಂದ ಗಂಗಮ್ಮಗುಡಿ ರಸ್ತೆಯಲ್ಲಿ ವಾಹನ ಸಂದಣಿ ಹೆಚ್ಚಾಗಿತ್ತು. ಬಂಗಾರದ ಅಂಗಡಿಗಳಲ್ಲಿ ಗ್ರಾಮಿಣ ಮಹಿಳೆಯರೆ ಹೆಚ್ಚಾಗಿದ್ರು, ಇನ್ನೂ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರು, ಕೂಡಿಟ್ಟ ಹಣವನ್ನು ತಂದಿದ್ದು ಕಂಡು ಬಂತು. ಒಂದೆಡೆ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಯ ಹಣ ಮತ್ತೊಂದೆಡೆ ಲೋಕಸಭಾ ಚುನಾವಣೆಯಲ್ಲಿ ವಿತರಿಸಿದ ಹಣ, ಎರಡು ಹಣ ಹಾಗೂ ತಮ್ಮ ಗಂಡಂದಿರು ಹಾಗೂ ತವರು ಮನೆಯ ಹಣವನ್ನು ಜಮೆ ಮಾಡಿಕೊಂಡಿದ್ದ ಮಹಿಳೆಯರು ಮುಗಿಬಿದ್ದು ಬಂಗಾರ ಖರೀದಿ ಮಾಡಿದರು. ಇನ್ನೂ ಇಂದು ಅಕ್ಷಯ ತೃತಿಯ ದಿನ ಚಿನ್ನ ಬೆಳ್ಳಿ ಬಂಗಾರ ಕೊಳ್ಳಲು ಗ್ರಾಹಕರನ್ನು ಸೆಳೆಯಲು ಅಂಗಡಿಗಳ ಮಾಲಿಕರು ಅಂಗಡಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ಕಂಡು ಬಂತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.