‘ಅಂಜನಿಪುತ್ರ’, ‘ಪವರ್’ ಒಂದೇ ದಿನ ಮರು ಬಿಡುಗಡೆ ಆಗಿದ್ದಕ್ಕೆ ಅಪ್ಪು ಫ್ಯಾನ್ಸ್ ಬೇಸರ
‘ಅಪ್ಪು ಬಾಸ್ ನಟನೆಯ ಎರಡು, ಮೂರು ಸಿನಿಮಾಗಳನ್ನು ಒಂದೇ ದಿನ ರಿಲೀಸ್ ಮಾಡಬೇಡಿ ಅಂತ ನಾವು ನಿರ್ಮಾಪಕರ ಬಳಿ ಮನವಿ ಮಾಡಿಕೊಳ್ಳುತ್ತೇವೆ. ಪ್ರತಿಯೊಂದು ಸಿನಿಮಾವನ್ನು ಸೂಕ್ತ ಸಂದರ್ಭದಲ್ಲಿ ಮರು ಬಿಡುಗಡೆ ಮಾಡಿ’ ಎಂದು ಫ್ಯಾನ್ಸ್ ಹೇಳಿದ್ದಾರೆ. ‘ಅಂಜನಿಪುತ್ರ’ ಹಾಗೂ ‘ಪವರ್’ ಚಿತ್ರಗಳು ಒಂದೇ ದಿನ ಮರು ಬಿಡುಗಡೆ ಆಗಿದ್ದಕ್ಕೆ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಬೇಸರವಾಗಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಅಂಜನಿಪುತ್ರ’ ಹಾಗೂ ‘ಪವರ್’ ಸಿನಿಮಾಗಳು ಇಂದು (ಮೇ 10) ಮರು ಬಿಡುಗಡೆ ಆಗಿವೆ. ಒಂದೇ ದಿನ ಎರಡೂ ಸಿನಿಮಾಗಳು ಮರು ಬಿಡುಗಡೆ ಆಗಿದ್ದಕ್ಕೆ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ದಿನಾಂಕದಲ್ಲಿ ಈ ಸಿನಿಮಾಗಳನ್ನು ರೀ-ರಿಲೀಸ್ ಮಾಡಿದ್ದರೆ ಸೂಕ್ತವಾಗಿ ಇರುತ್ತಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ. ಈ ಕುರಿತು ‘ಟಿವಿ 9 ಕನ್ನಡ’ಕ್ಕೆ ಅಭಿಮಾನಿಗಳು (Puneeth Rajkumar Fans) ಪ್ರತಿಕ್ರಿಯೆ ನೀಡಿದ್ದಾರೆ. ‘ಒಂದೇ ದಿನ ಎರಡು ಸಿನಿಮಾದ ಮರು ಬಿಡುಗಡೆ ಬೇಕಿರಲಿಲ್ಲ. ಇದು ಪುನೀತ್ ರಾಜ್ಕುಮಾರ್ ಅವರ ಹೆಸರಿಗೆ ಮಾಡಿದ ಅವಮಾನ. ಜನ್ಮದಿನ, ಪುಣ್ಯಸ್ಮರಣೆ ರೀತಿಯ ವಿಶೇಷ ದಿನದಲ್ಲಿ ಮರು ಬಿಡುಗಡೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆಗ ಹಬ್ಬದ ರೀತಿ ಸೆಲೆಬ್ರೇಟ್ ಮಾಡುತ್ತಿದ್ದೆವು. ಈಗ ಹೆಚ್ಚು ಜನರು ಸಿನಿಮಾ ನೋಡಲು ಬರುತ್ತಿಲ್ಲ. ಇದನ್ನು ನೋಡಿದಾಗ ಬೇಸರ ಆಗುತ್ತದೆ. ಎಷ್ಟೋ ಜನರಿಗೆ ಮರು ಬಿಡುಗಡೆ ಆಗಿರುವುದು ಗೊತ್ತಿಲ್ಲ. ಇದರಿಂದ ಫ್ಯಾನ್ಸ್ಗೆ ತುಂಬ ಬೇಸರ ಆಗುತ್ತಿದೆ. ಪುನೀತ್ ರಾಜ್ಕುಮಾರ್ ಅವರು ಇಲ್ಲ ಅಂತ ನಾವು ಅಂದುಕೊಂಡಿಲ್ಲ. ಅವರ ಸಿನಿಮಾಗಳನ್ನು ನೋಡುವ ಮೂಲಕ ಈಗಲೂ ಅವರು ಇದ್ದಾರೆ ಅಂತ ನಾವು ಅಂದುಕೊಂಡಿದ್ದೇವೆ’ ಎಂದು ಅಪ್ಪು ಅಭಿಮಾನಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.