ಲೋಕಸಭಾ ಚುನಾವಣೆ 2024: ಆಂಧ್ರಪ್ರದೇಶದ ಮತಗಟ್ಟೆಯಲ್ಲಿ ಮತದಾರನ ಕೆನ್ನೆಗೆ ಬಾರಿಸಿದ ವೈಎಸ್ಆರ್ ಕಾಂಗ್ರೆಸ್ನ ಶಾಸಕ
ವೈಎಸ್ಆರ್ ಕಾಂಗ್ರೆಸ್ ಶಾಸಕ ಮತಗಟ್ಟೆಯೊಂದರಲ್ಲಿ ಮತದಾರನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ. ಉಳಿದ ಮತದಾರರು ಇಬ್ಬರ ಘರ್ಷಣೆ ತಡೆಯಲು ಪ್ರಯತ್ನಿಸಿದರೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮತದಾರನ ರಕ್ಷಣೆಗೆ ಬರಲಿಲ್ಲ.
ಭಾರತದಲ್ಲಿ ಎಲ್ಲಾ ಕಡೆ ಶಾಂತಿಯುತ ಮತದಾನಗಳು ನಡೆಯುವುದಿಲ್ಲ, ಘರ್ಷಣೆಗಳೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಹಾಗೆಯೇ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ(Lok Sabha Election)ಯ ಸಮಯದಲ್ಲಿ ವೈಎಸ್ಆರ್ ಕಾಂಗ್ರೆಸ್ನ ಶಾಸಕ ಎ ಶಿವಕುಮಾರ್(A Shivakumar) ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬಳಿಕ ಮತದಾರ ಕೂಡ ಶಾಸಕರ ಕೆನ್ನೆಗೆ ಬಾರಿಸಿದ್ದು, ಬಳಿಕ ಏಕಾಏಕಿ ಶಿವಕುಮಾರ್ ಬೆಂಬಲಿಗರು ಮತದಾರನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಉಳಿದ ಮತದಾರರು ಇಬ್ಬರ ಘರ್ಷಣೆ ತಡೆಯಲು ಪ್ರಯತ್ನಿಸಿದರೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮತದಾರನ ರಕ್ಷಣೆಗೆ ಬರಲಿಲ್ಲ. ಮತದಾರನಿಂದಲೇ ಚುನಾಯಿತರಾದ ರಾಜಕಾರಣಿಗಳು ಮತದಾರರ ಬಳಿ ಇಷ್ಟು ಕೆಟ್ಟದಾಗಿ ನಡೆದುಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮತಗಟ್ಟೆಯ ವೀಡಿಯೊದಲ್ಲಿ ಗುಂಟೂರು, ಶಿವಕುಮಾರ್ ಮತ್ತು ಮತದಾರ ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳುವುದನ್ನು ಕಾಣಬಹುದು. ಆಂಧ್ರಪ್ರದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಪ್ರಸ್ತುತ ಮತದಾನವು ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಜೊತೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮತದಾನ ನಡೆಯುತ್ತಿದೆ.
ಮತ್ತಷ್ಟು ಓದಿ: ರಾಜಕೀಯ ಕುರುಕ್ಷೇತ್ರದಲ್ಲಿ ಜನರೇ ಕೃಷ್ಣ, ನಾನೇ ಅರ್ಜುನ ಎಂದ ಜಗನ್ ರೆಡ್ಡಿ
ಹಿಂದಿನ ದಿನ ಆಂಧ್ರಪ್ರದೇಶದಿಂದ ಚುನಾವಣಾ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ವಿರೋಧ ಪಕ್ಷವಾದ ಟಿಡಿಪಿಯು ಆಡಳಿತಾರೂಢ YSRCP ತನ್ನ ಪೋಲ್ ಏಜೆಂಟರನ್ನು ಅಪಹರಿಸಿದೆ ಎಂದು ಆರೋಪಿಸಿತು.\
ವಿಡಿಯೋ:
VVIP arrogance & goondagardi on full display
YSRCP MLA A Sivakumar slaps voter in Andhra Pradesh’s Guntur
Telangana Congress neta kicks voter
Congress’ Randeep Surjewala once said Janta is Rakshas !
If this is how they are treating voters at the polling booth imagine what… pic.twitter.com/w3RU0TLlL1
— Shehzad Jai Hind (Modi Ka Parivar) (@Shehzad_Ind) May 13, 2024
ಟಿಡಿಪಿ ತನ್ನ ಪ್ರತಿಸ್ಪರ್ಧಿ ಪಕ್ಷವು ತನ್ನ ಕೆಲವು ಪೋಲಿಂಗ್ ಏಜೆಂಟರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿದೆ. ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳಿಗೆ 23.1 ರಷ್ಟು ಮತದಾನವಾಗಿದ್ದರೆ, ರಾಜ್ಯದಲ್ಲಿ ಬೆಳಿಗ್ಗೆ 11 ಗಂಟೆಗೆ 175 ಸ್ಥಾನಗಳ ವಿಧಾನಸಭೆಗೆ 23 ಶೇಕಡಾ ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಪ್ಲಿಕೇಶನ್ನಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ