ಮತಗಟ್ಟೆಯಲ್ಲಿ ಮುಸ್ಲಿಂ ಮಹಿಳೆಯರ ನಿಖಾಬ್ ತೆಗೆಸಿ ಗುರುತಿನ ಚೀಟಿ ಪರಿಶೀಲಿಸಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ
ನಾನು ಅಭ್ಯರ್ಥಿ. ಕಾನೂನಿನ ಪ್ರಕಾರ ಅಭ್ಯರ್ಥಿಯು ಫೇಸ್ ಮಾಸ್ಕ್ ಇಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕನ್ನು ಹೊಂದಿರುತ್ತಾರೆ. ನಾನು ಪುರುಷ ಅಲ್ಲ, ನಾನು ಮಹಿಳೆ. ತುಂಬಾ ವಿನಮ್ರತೆಯಿಂದ, ನಾನು ಅವರಲ್ಲಿ ದಯವಿಟ್ಟು ಐಡಿ ಕಾರ್ಡ್‌ಗಳನ್ನು ತೋರಿಸುತ್ತೀರಾ, ನಾನು ಅದನ್ನು ಪರಿಶೀಲಿಸಬಹುದೇ? ಎಂದು ಕೇಳಿದೆ. ಯಾರಾದರೂ ಇದನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಲು ಬಯಸಿದರೆ, ಅವರು ಹೆದರುತ್ತಾರೆ ಎಂದರ್ಥ ಎಂದು ಮಾಧವಿ ಲತಾ ಪ್ರತಿಕ್ರಿಯಿಸಿದ್ದಾರೆ.
ಹೈದರಾಬಾದ್ ಮೇ 13: ಹೈದರಾಬಾದ್‌ನ ಬಿಜೆಪಿ (BJP) ಅಭ್ಯರ್ಥಿ ಕೆ ಮಾಧವಿ ಲತಾ (Madhavi Latha) ಅವರು ಸೋಮವಾರ ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ ಮುಸ್ಲಿಂ (Muslim) ಮಹಿಳೆಯರಲ್ಲಿ ನಿಖಾಬ್ (ಮುಖವನ್ನು ಮುಚ್ಚಿರುವ ಬಟ್ಟೆ) ತೆಗೆಯುವಂತೆ ಹೇಳಿ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದು ವಿವಾದವಾಗಿದೆ. ಇದೀಗ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲಾಗಿದೆ. ಅಮೃತ ವಿದ್ಯಾಲಯದಲ್ಲಿ ಮತದಾನ ಮಾಡಿದ ನಂತರ ಲತಾ ಅವರು ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದು, ಆಜಂಪುರದಲ್ಲಿ ಮತದಾನ ಮಾಡಲು ಕಾಯುತ್ತಿರುವ ಮಹಿಳೆಯರ ಗುರುತಿನ ಚೀಟಿ ಪರಿಶೀಲಿಸಿದ್ದಾರೆ. ಐಡಿಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ ಮತದಾನಕ್ಕೆ ಅವಕಾಶ ನೀಡುವಂತೆ ಅವರು ಮತಗಟ್ಟೆ ಅಧಿಕಾರಿಗಳನ್ನು ಕೇಳಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹಾಲಿ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಆಕೆಯ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ (ECI) ದೂರು ದಾಖಲಿಸಿದೆ. ಒವೈಸಿ ಅವರು ಹೈದರಾಬಾದ್‌ನಿಂದ ಸತತ ಐದನೇ ಬಾರಿ ಚುನಾವಣಾ ಕಣದಲ್ಲಿದ್ದಾರೆ.
ಮತಗಟ್ಟೆಯಲ್ಲಿ ಗುರುತಿನ ಚೀಟಿ ಪರಿಶೀಲಿಸಿದ ಮಾಧವಿ ಲತಾ
#WATCH | Telangana: BJP candidate from Hyderabad Lok Sabha constituency, Madhavi Latha visits a polling booth in the constituency. Voting for the fourth phase of #LokSabhaElections2024 is underway. pic.twitter.com/BlsQXRn80C
— ANI (@ANI) May 13, 2024
“ನಾನು ಅಭ್ಯರ್ಥಿ. ಕಾನೂನಿನ ಪ್ರಕಾರ ಅಭ್ಯರ್ಥಿಯು ಫೇಸ್ ಮಾಸ್ಕ್ ಇಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕನ್ನು ಹೊಂದಿರುತ್ತಾರೆ. ನಾನು ಪುರುಷ ಅಲ್ಲ, ನಾನು ಮಹಿಳೆ. ತುಂಬಾ ವಿನಮ್ರತೆಯಿಂದ, ನಾನು ಅವರಲ್ಲಿ ದಯವಿಟ್ಟು ಐಡಿ ಕಾರ್ಡ್‌ಗಳನ್ನು ತೋರಿಸುತ್ತೀರಾ, ನಾನು ಅದನ್ನು ಪರಿಶೀಲಿಸಬಹುದೇ? ಎಂದು ಕೇಳಿದೆ. ಯಾರಾದರೂ ಇದನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಲು ಬಯಸಿದರೆ, ಅವರು ಹೆದರುತ್ತಾರೆ ಎಂದರ್ಥ.
ಮತದಾರರ ಪಟ್ಟಿಗಳಲ್ಲಿ ವ್ಯತ್ಯಾಸಗಳಿದ್ದು ಮತ್ತು ಹಲವಾರು ಮತದಾರರ ಹೆಸರುಗಳು ಪತ್ತೆಯಾಗಿರುವುದರಿಂದ ತಾನು ಹಾಗೆ ಮಾಡಿದ್ದೇನೆ. ಪೊಲೀಸ್ ಸಿಬ್ಬಂದಿ ತುಂಬಾ ದಡ್ಡರಂತೆ ಕಾಣುತ್ತಾರೆ, ಅವರು ಸಕ್ರಿಯರಲ್ಲ. ಅವರು ಏನನ್ನೂ ಪರಿಶೀಲಿಸುತ್ತಿಲ್ಲ. ಹಿರಿಯ ನಾಗರಿಕ ಮತದಾರರು ಇಲ್ಲಿಗೆ ಬರುತ್ತಿದ್ದರೂ ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಗಿದೆ. ಅವರಲ್ಲಿ ಕೆಲವರು ಗೋಶಾಮಹಲ್ ನಿವಾಸಿಗಳು ಆದರೆ ಅವರ ಹೆಸರುಗಳು ರಂಗಾರೆಡ್ಡಿ ಪಟ್ಟಿಯಲ್ಲಿವೆ ಎಂದು ಎಎನ್‌ಐ ಜತೆ ಮಾತನಾಡಿದ ಮಾಧವಿ ಲತಾ ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಆಂಧ್ರಪ್ರದೇಶದ ಮತಗಟ್ಟೆಯಲ್ಲಿ ಮತದಾರನ ಕೆನ್ನೆಗೆ ಬಾರಿಸಿದ ವೈಎಸ್ಆರ್ ಕಾಂಗ್ರೆಸ್ನ ಶಾಸಕ
ಮಲಕ್‌ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೈದರಾಬಾದ್ ಕಲೆಕ್ಟರ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀಮತಿ ಮಾಧವಿ ಲತಾ ಅವರ ವಿರುದ್ಧ ಐಪಿಸಿ ಸೆಕ್ಷನ್ 171 ಸಿ, 186, 505 (1) (ಸಿ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 132 ರ ಅಡಿಯಲ್ಲಿ ಮಲಕ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.
ತೆಲಂಗಾಣದ 17 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ಸೋಮವಾರ ಬೆಳಗ್ಗೆ 7:00 ಗಂಟೆಗೆ ಮತದಾನ ಆರಂಭವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ