ಡಿಕೆ ಶಿವಕುಮಾರ್​ ನಿವಾಸದಲ್ಲಿ ಬಿಜೆಪಿ ಶಾಸಕರಾದ ಹೆಬ್ಬಾರ್, ಸೋಮಶೇಖರ್!

ಡಿಕೆ ಶಿವಕುಮಾರ್​ ನಿವಾಸದಲ್ಲಿ ಬಿಜೆಪಿ ಶಾಸಕರಾದ ಹೆಬ್ಬಾರ್, ಸೋಮಶೇಖರ್!

ವಿವೇಕ ಬಿರಾದಾರ
|

Updated on: May 13, 2024 | 11:25 AM

ನೀಡುವಂತೆ ಶಾಸಕರಾದ ಶಿವರಾಮ ಹೆಬ್ಬಾರ್​ ಮತ್ತು ಎಸ್​ಟಿ ಸೋಮಶೇಖರ ಇಂದು (ಮೇ 13) ಉಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮೆನೆಗೆ ಭೇಟಿ ನೀಡಿದ್ದು, ಕುತೂಹಲ ಕೆರಳಿಸಿದೆ. ಈ ಇಬ್ಬರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ವಿಧಾನಸಭೆ ಚುನಾವಣೆಯಾದ ಬಳಿಕ ಬಿಜೆಪಿ ಶಾಸಕರಾದ ಎಸ್​​ಟಿ ಸೋಮಶೇಖರ್ (ST Somashekar) ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar)​ ಪಕ್ಷದ ಕಾರ್ಯ ಚಟುವಟಿಕೆಯಿಂದ ದೂರವೇ ಉಳಿದಿದ್ದಾರೆ. ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ಈ ಇಬ್ಬರು ನಾಯಕರು ಕಾಂಗ್ರೆಸ್​ಗೆ ಸೇರಲು ತುದಿಗಾಲಿನ ಮೇಲೆ ನಿಂತಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್​ ಕಾಂಗ್ರೆಸ್​ಗೆ ಮತ ಹಾಕುವ ಮೂಲಕ ಅಡ್ಡ ಮತದಾನ ಮಾಡಿದ್ದರು. ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಮತದಾನ ಮಾಡದೇ ಬಿಜೆಪಿ ಆಘಾತ ನೀಡಿದ್ದರು. ಮತ್ತು ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳ ಪರ ಈ ಇಬ್ಬರು ನಾಯಕರು ಪ್ರಚಾರ ಮಾಡದೆ, ಹಿಂದೆ ಸರೆದಿದ್ದಾರೆ.

ಈ ಇಬ್ಬರು ಶಾಸಕರು ಹಲವು ದಿನಗಳಿಂದ ಕಾಂಗ್ರೆಸ್ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನು ಶಾಸಕ ಎಸ್​ಟಿ ಸೋಮಶೇಖರ ಕಾಂಗ್ರೆಸ್​ ನಾಯಕರ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಈ ಇಬ್ಬರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಶಾಸಕರಾದ ಶಿವರಾಮ ಹೆಬ್ಬಾರ್​ ಮತ್ತು ಎಸ್​ಟಿ ಸೋಮಶೇಖರ ಇಂದು (ಮೇ 13) ಉಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮೆನೆಗೆ ಭೇಟಿ ನೀಡಿದರು.