ನವದೆಹಲಿ: ಉತ್ತರ ಪ್ರದೇಶದ ಅಜಂಗಢದಲ್ಲಿ ಲೋಕಸಭೆ ಚುನಾವಣಾ (Lok Sabha Elections) ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಎಸ್‌ಪಿ ಮತ್ತು ಕಾಂಗ್ರೆಸ್ ಸಿಎಎ ಬಗ್ಗೆ ಸುಳ್ಳುಗಳನ್ನು ಹರಡುತ್ತಿವೆ. ದೇಶವನ್ನು ಗಲಭೆಯತ್ತ ತಳ್ಳಲು ಪ್ರಯತ್ನಿಸುತ್ತಿವೆ. ಆದರೆ, ಸಿಎಎ (CAA) ಮೋದಿಯವರ ಖಾತರಿಯ ಇತ್ತೀಚಿನ ಉದಾಹರಣೆಯಾಗಿದೆ. ನಿನ್ನೆ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡುವ ಕೆಲಸ ಪ್ರಾರಂಭವಾಗಿದೆ. ಇವರು ಧರ್ಮದ ಆಧಾರದ ಮೇಲೆ ಭಾರತದ ವಿಭಜನೆಗೆ ಬಲಿಯಾದ ಜನರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 16) ಉತ್ತರ ಪ್ರದೇಶದ ಅಜಂಗಢದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಸರಣಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ‘ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದವರು ಸಿಎಎ ಬಗ್ಗೆ ಸುಳ್ಳುಗಳನ್ನು ಹರಡುತ್ತಿವೆ’ ಎಂದು ಅಜಂಗಢದಲ್ಲಿ ಪ್ರಧಾನಿ ಮೋದಿ ಅಜಂಗಢದಲ್ಲಿ ಆರೋಪಿಸಿದ್ದಾರೆ
ಇದನ್ನೂ ಓದಿ: ಹೇಡಿತನದ ಕೃತ್ಯ; ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೋ ಕೊಲೆ ಪ್ರಯತ್ನಕ್ಕೆ ಪಿಎಂ ನರೇಂದ್ರ ಮೋದಿ ಖಂಡನೆ
ಸಂಸತ್ತಿಗೆ ಗರಿಷ್ಠ ಸಂಖ್ಯೆಯ 80 ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶವು ಎಲ್ಲಾ 7 ಹಂತಗಳಲ್ಲಿ ಜೂನ್ 1ರವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ಜೂನ್ 4ರಂದು ನಡೆಯಲಿದೆ.
उत्तर प्रदेश के लालगंज का ये उत्साह साफ बता रहा है कि जनता-जनार्दन का आशीर्वाद भाजपा-एनडीए के साथ है। https://t.co/yUT8p1lj3J
— Narendra Modi (@narendramodi) May 16, 2024
ಅಜಂಗಢಕ್ಕೂ ಮುನ್ನ ಲಾಲ್‌ಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾವು ನಿಮ್ಮ ಮುಖವಾಡವನ್ನು ಬಿಚ್ಚಿಟ್ಟಿದ್ದೇವೆ. ನೀವು ಕಪಟಿಗಳು, ಕೋಮುವಾದಿಗಳು ಎಂದು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದು ವಿರೋಧ ಪಕ್ಷದವರ ವಿರುದ್ಧ ಮೋದಿ ಕಿಡಿ ಕಾರಿದ್ದಾರೆ.
ಇದು ಮೋದಿಯವರ ಗ್ಯಾರಂಟಿ.. ನೀವು ಸಿಎಎ ಅಂತ್ಯಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ನವರು ಮಹಾತ್ಮ ಗಾಂಧಿಯವರ ಹೆಸರನ್ನು ಹಿಡಿದು ಅಧಿಕಾರದ ಮೆಟ್ಟಿಲುಗಳನ್ನು ಏರುತ್ತಾರೆ. ಆದರೆ ಅವರಿಗೆ ಮಹಾತ್ಮ ಗಾಂಧಿಯವರ ಮಾತುಗಳು ನೆನಪಿಲ್ಲ. ನಮ್ಮ ದೇಶದ ನೆರೆಹೊರೆಯ ದೇಶಗಳಲ್ಲಿ ವಾಸಿಸುವ ಅಲ್ಪಸಂಖ್ಯಾತರು ಭಾರತಕ್ಕೆ ಬರಬಹುದು ಎಂದು ಮಹಾತ್ಮ ಗಾಂಧಿ ಅವರೇ ಖಚಿತಪಡಿಸಿದ್ದರು. ಕಳೆದ 70 ವರ್ಷಗಳಲ್ಲಿ ಸಾವಿರಾರು ಕುಟುಂಬಗಳು ತಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಕಾಪಾಡಲು ಭಾರತದಲ್ಲಿ ಆಶ್ರಯ ಪಡೆದಿವೆ. ಆದರೆ ಕಾಂಗ್ರೆಸ್ ಅವರ ಮತಬ್ಯಾಂಕ್ ಅಲ್ಲದ ಕಾರಣ ಕಾಂಗ್ರೆಸ್ ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ ಎಂದು ಮೋದಿ ಟೀಕಿಸಿದ್ದಾರೆ.
#WATCH | In his address to a public meeting in Uttar Pradesh’s Azamgarh, PM Narendra Modi says, “…It’s Modi who has unmasked you. You are a hypocrite, communal. You left this nation to burn in communal fire for 60 years. I am saying it clearly, it’s Modi’s guarantee… pic.twitter.com/rNDcNqXzQf
— ANI (@ANI) May 16, 2024
ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಪ್ರಮುಖ ಉಲ್ಲೇಖಗಳು ಇಲ್ಲಿವೆ:
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Thu, 16 May 24