ಅಮೇಠಿ ಆಯ್ತು, ರಾಯ್ ಬರೇಲಿ ಜನರು ಕೂಡ ರಾಹುಲ್ ಗಾಂಧಿಯನ್ನು ವಾಪಸ್ ಕಳಿಸುತ್ತಾರೆ: ಮೋದಿ
"ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ 'ಶೆಹಜಾದಾ'ಗಳಿಗೆ, ದೇಶದ ಅಭಿವೃದ್ಧಿಯು 'ಗಿಲ್ಲಿ ಡಂಡ' (ಚಿನ್ನಿ ದಾಂಡು) ಆಟದಂತೆ. ಅರಮನೆಯಲ್ಲಿ ಜನಿಸಿದ 'ಶೆಹಜಾದಾ'ಗಳು ಕಠಿಣ ಪರಿಶ್ರಮ ಪಡುವುದಿಲ್ಲ, ಅವರು ಫಲಿತಾಂಶವನ್ನು ತರುವುದಿಲ್ಲ. ದೇಶ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ಭಾವಿಸುತ್ತಾರೆ.
ಪ್ರತಾಪಗಢ ಮೇ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ರಾಹುಲ್ ಗಾಂಧಿ(Rahul Gandhi) ಅವರ ‘ಖಟಾ ಖಟ್’ ಹೇಳಿಕೆಯನ್ನು ಲೇವಡಿ ಮಾಡಿದ್ದು, ರಾಯ್ ಬರೇಲಿ (Raebareli) ಜನರು ಕೂಡ ಅವರನ್ನು ವಾಪಸ್ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ‘ಶೆಹಜಾದಾ’ಗಳಿಗೆ, ದೇಶದ ಅಭಿವೃದ್ಧಿಯು ‘ಗಿಲ್ಲಿ ಡಂಡಾ’ (ಚಿನ್ನಿ ದಾಂಡು) ಆಟದಂತೆ. ಅರಮನೆಯಲ್ಲಿ ಜನಿಸಿದ ‘ಶೆಹಜಾದಾ’ಗಳು ಕಠಿಣ ಪರಿಶ್ರಮ ಪಡುವುದಿಲ್ಲ, ಅವರು ಫಲಿತಾಂಶವನ್ನು ತರುವುದಿಲ್ಲ. ದೇಶ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ಭಾವಿಸುತ್ತಾರೆ. ಅದು ‘ಖಟಾಖಟ್, ಖಟಾಖಟ್’ ಆಗಿ ಆಗುತ್ತದೆ ಎಂದು ಹೇಳುತ್ತಾರೆ ಎಂದು ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದ ರ‍್ಯಾಲಿಯಲ್ಲಿ ಮೋದಿ ಹೇಳಿದ್ದಾರೆ.
“ಭಾರತದಿಂದ ಬಡತನವನ್ನು ‘ಖಟಾ ಖಟ್’ ತೊಲಗಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ. ರಾಯ್ ಬರೇಲಿ ಜನರು ಅವರನ್ನು ಮನೆಗೆ ‘ಖಟಾ ಖಟ್’ ಕಳುಹಿಸುತ್ತಾರೆ ಎಂದು ಅವರು ತಿಳಿದಿರಬೇಕು ಎಂದಿದ್ದಾರೆ ಮೋದಿ.
ಮೋದಿ ಭಾಷಣ
VIDEO | “Congress ruled the country for 60 years, Samajwadi Party remained in power (in UP) for several years, and the condition was that 85% of the houses did not receive tap water; we provided drinking water to 14 crore families,” says PM Modi while addressing a public rally in… pic.twitter.com/sKRMvLtnfP
— Press Trust of India (@PTI_News) May 16, 2024
ಚುನಾವಣೆಯಲ್ಲಿ ಗೆದ್ದರೆ ದೇಶದ ಪ್ರತಿ ಬಡ ಮನೆಯ ಒಬ್ಬ ಮಹಿಳೆಯ ಖಾತೆಗೆ ಕಾಂಗ್ರೆಸ್ ಪಕ್ಷವು ₹1 ಲಕ್ಷವನ್ನು ವರ್ಗಾಯಿಸುತ್ತದೆ ಎಂದು ಚುನಾವಣಾ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ಭರವಸೆ ನೀಡಿದ ನಂತರ ರಾಹುಲ್ ಗಾಂಧಿಯನ್ನು ಮೋದಿ ಗೇಲಿ ಮಾಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚುನಾವಣಾ ಭರವಸೆಯ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಯೋಜನೆಗಳು ಆರ್ಥಿಕವಾಗಿ ಹೇಗೆ ವೆಚ್ಚವಾಗುತ್ತವೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ.
‘ಖಟಾ ಖಾಟ್’ ಯೋಜನೆಗಳಿಗೆ ಆರ್ಥಿಕವಾಗಿ ಎಷ್ಟು ವೆಚ್ಚವಾಗುತ್ತದೆ ಎಂದು ಅವರು ಲೆಕ್ಕ ಹಾಕಿದ್ದಾರೆಯೇ? ಅವರು ಗಣನೀಯವಾಗಿ ಸಾಲ ಮಾಡುತ್ತಾರೆಯೇ?. ಅಥವಾ ಅವರಿಗೆ ಹಣ ನೀಡಲು ತೆರಿಗೆಯನ್ನು ಹೆಚ್ಚಿಸುತ್ತಾರೆಯೇ? ” ಎಂದು ನಿರ್ಮಲಾ ಸೀತಾರಾಮನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ನೈಜ ಪ್ರಶ್ನೆಗಳಿಗೆ ಉತ್ತರಿಸಲು ರಾಹುಲ್‌ಗಾಂಧಿ ಕಾಳಜಿ ವಹಿಸುತ್ತಾರೆಯೇ ಮತ್ತು ತೆರಿಗೆಗಳನ್ನು ಹೆಚ್ಚಿಸದೆ ಅಥವಾ ಹೆಚ್ಚು ಸಾಲ ಮಾಡದೆ ಮತ್ತು ಆರ್ಥಿಕತೆಯನ್ನು ಕುಗ್ಗಿಸದೆಯೇ ಅವರ ಹಣಕಾಸಿನ ಚೆಲ್ಲಾಟದ ದೈತ್ಯ ಯೋಜನೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸುತ್ತಾರೆಯೇ? ಭಾರತದ ಜನರಿಗೆ ಈ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಒಂದು ಸವಾಲು ಇಲ್ಲಿದೆ ”ಎಂದಿದ್ದಾರೆ ನಿರ್ಮಲಾ ಸೀತಾರಾಮನ್.
ಇದನ್ನೂ ಓದಿ: ಬಿಕ್ಕಟ್ಟಿನಲ್ಲಿ ನಾನು ಮೋದಿಯವರಿಗೆ ಸಹಾಯ ಮಾಡಿದ್ದೆ: ಶರದ್ ಪವಾರ್
ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ, “ಕಾಂಗ್ರೆಸ್ 60 ವರ್ಷಗಳ ಕಾಲ ದೇಶವನ್ನು ಆಳಿತು, ಸಮಾಜವಾದಿ ಪಕ್ಷವು ಹಲವಾರು ವರ್ಷಗಳ ಕಾಲ (ಯುಪಿಯಲ್ಲಿ) ಅಧಿಕಾರದಲ್ಲಿತ್ತು, ಮತ್ತು 85% ಮನೆಗಳಿಗೆ ನಲ್ಲಿ ನೀರು ಸಿಗದ ಸ್ಥಿತಿಯಾಗಿದೆ. ನಾವು 14 ಕೋಟಿ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಿದ್ದೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Thu, 16 May 24