AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fire Accident: ದೆಹಲಿ ಬಿಜೆಪಿ ಕಚೇರಿಯಲ್ಲಿ ಅಗ್ನಿ ಅವಘಡ; ಬೆಂಕಿ ನಂದಿಸಲು ಹರಸಾಹಸ

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ದುರಂತ ಸಂಭವಿಸಿದೆ. ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಅವಘಡಕ್ಕೆ ಕಾರಣವೇನೆಂಬುದರ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಹೊರಬಿದ್ದಿಲ್ಲ.

Fire Accident: ದೆಹಲಿ ಬಿಜೆಪಿ ಕಚೇರಿಯಲ್ಲಿ ಅಗ್ನಿ ಅವಘಡ; ಬೆಂಕಿ ನಂದಿಸಲು ಹರಸಾಹಸ
ಬೆಂಕಿ ದುರಂತ
ಸುಷ್ಮಾ ಚಕ್ರೆ
|

Updated on: May 16, 2024 | 5:31 PM

Share

ನವದೆಹಲಿ: ದೆಹಲಿಯ ಪಂತ್ ಮಾರ್ಗ್‌ನಲ್ಲಿರುವ ದೆಹಲಿ ಬಿಜೆಪಿ ಕಚೇರಿಯಲ್ಲಿ (Delhi BJP Office) ಇಂದು (ಗುರುವಾರ) ಸಂಜೆ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳನ್ನು ಕಳುಹಿಸಿದ್ದಾರೆ. ವರದಿಗಳ ಪ್ರಕಾರ, ಬೆಂಕಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಈಗಾಗಲೇ ಅಗ್ನಿಶಾಮಕ ವಾಹನಗಳು (Fire Engine) ಬಂದಿವೆ.

ಕಳೆದ ತಿಂಗಳ ಆರಂಭದಲ್ಲಿ ಮುಂಬೈನ ಬಿಜೆಪಿ ಕಚೇರಿಯಲ್ಲಿಯೂ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ ಅಧಿಕಾರಿಯ ಪ್ರಕಾರ, ಸಂಜೆ 4:35ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಆದರೆ 10 ನಿಮಿಷಗಳ ನಂತರ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲಾಗಿತ್ತು.

ಇದನ್ನೂ ಓದಿ: ಕಟ್ಟಡದ ಬೆಂಕಿ ನಂದಿಸುವಾಗ ಏಕಾಏಕಿ ನೀರು ಖಾಲಿ, ಅಗ್ನಿಯಲ್ಲಿ ಬೆಂದು ಹೋದ ಅಗ್ನಿಶಾಮಕ ಸಿಬ್ಬಂದಿ

ದೆಹಲಿಯಲ್ಲಿ ನಡೆದಿರುವ ಬೆಂಕಿ ಅವಘಡಕ್ಕೆ ಶಾರ್ಟ್​ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆ. ವಿದ್ಯುತ್ ವೈರಿಂಗ್‌ ಸಮಸ್ಯೆಯಿಂದ ಬೆಂಕಿ ಹೊತ್ತಿಕೊಂಡಿದೆ. ಸದ್ಯಕ್ಕೆ ಯಾರಿಗೂ ಗಾಯಗಳಾಗಿಲ್ಲ. ನಾವು ನೀರಿನ ಟ್ಯಾಂಕರ್ ಮತ್ತು ಅಗ್ನಿಶಾಮಕ ಇಂಜಿನ್ ಅನ್ನು ನಿಯೋಜಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

ಬೆಂಕಿ ಹೊತ್ತಿಕೊಂಡ ನಂತರ ಅಗ್ನಿಶಾಮಕ ದಳದವರು 15 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ದೆಹಲಿ ಬಿಜೆಪಿ ಕಚೇರಿಯಲ್ಲಿ ಇಂದು ಸಂಜೆ 4.15 ರ ಸುಮಾರಿಗೆ ವಿದ್ಯುತ್ ಮೀಟರ್ ಬಾಕ್ಸ್‌ನಲ್ಲಿ ಸಣ್ಣ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದು ಇಡೀ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು ಎಂದು ದೆಹಲಿ ಬಿಜೆಪಿಯ ಮಾಧ್ಯಮ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಉತ್ತರಾಖಂಡ ಕಾಡ್ಗಿಚ್ಚು; ಬೆಂಕಿ ನಂದಿಸಬೇಕಾಗಿದ್ದ ಅರಣ್ಯ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ಏಕೆ ಹಾಕಿದ್ದೀರಿ?: ಸುಪ್ರೀಂ ಗರಂ

ಅಗ್ನಿಶಾಮಕ ಟೆಂಡರ್‌ಗಳ ಜೊತೆಗೆ ಎನ್‌ಡಿಎಂಸಿ ಎಲೆಕ್ಟ್ರಿಕ್ ಸಿಬ್ಬಂದಿ ಕೂಡ ಬೆಂಕಿಯನ್ನು ನಿಯಂತ್ರಿಸಲು ಕಚೇರಿಗೆ ಆಗಮಿಸಿದರು. ಸಂಜೆ 4.30ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಿಸಲಾಯಿತು. ಕಚೇರಿ ಸಂಕೀರ್ಣದ ವಿದ್ಯುತ್‌ಗೆ ಮಾತ್ರ ಹಾನಿಯಾಗಿದೆ. ಇದು ಪುನಃಸ್ಥಾಪಿಸಲು ಕೆಲವು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ