ಕಟ್ಟಡದ ಬೆಂಕಿ ನಂದಿಸುವಾಗ ಏಕಾಏಕಿ ನೀರು ಖಾಲಿ, ಅಗ್ನಿಯಲ್ಲಿ ಬೆಂದು ಹೋದ ಅಗ್ನಿಶಾಮಕ ಸಿಬ್ಬಂದಿ
ಬಿಹಾರದ ಸಿವಾನ್ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ನೋಡನೋಡುತ್ತಿದ್ದಂತೆಯೇ ಮನೆಯ ತುಂಬಾ ಬೆಂಕಿ ಆವರಿಸಿಕೊಂಡಿತ್ತು. ಬೆಂಕಿ ನಂದಿಸಲು ಬಂದಿದ್ದ ಅಧಿಕಾರಿಯೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಮನೆಯೊಂದರಲ್ಲಿ ಬೆಂಕಿ(Fire) ಕಾಣಿಸಿಕೊಂಡು ಕ್ಷಣ ಕ್ಷಣಕ್ಕೂ ಇಡೀ ಮನೆಯನ್ನು ವ್ಯಾಪಿಸುತ್ತಲೇ ಇತ್ತು. ಒಂದೆಡೆ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿತ್ತು. ಆಗ ಏಕಾಏಕಿ ಅಗ್ನಿ ಶಾಮಕ ವಾಹನದಲ್ಲಿದ್ದ ನೀರು ಖಾಲಿಯಾಗಿತ್ತು, ಬೆಂಕಿ ನಂದಿಸಲು ತೆರಳಿದ್ದ ಅಧಿಕಾರಿ ಬೆಂಕಿಯಲ್ಲಿ ಬೆಂದು ಹೋದ ಘಟನೆ ಬಿಹಾರದ ಸಿವಾನ್ನಲ್ಲಿ ನಡೆದಿದೆ. ಮನೆಯಲ್ಲಿದ್ದ ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸ್ವಲ್ಪ ಸಮಯದಲ್ಲೇ ಬೆಂಕಿ ಮನೆಯೆಲ್ಲ ವ್ಯಾಪಿಸಿತು. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಷ್ಟರಲ್ಲಿ ಹವಾಲ್ದಾರ್ ರವಿಕಾಂತ್ ಮಂಡಲ್ (40) ಮನೆಯ ಮೇಲ್ಛಾವಣಿಯ ಮೇಲೆ ಹತ್ತಿ ಬೆಂಕಿ ನಂದಿಸಲು ಆರಂಭಿಸಿದ್ದರು. ಭಾರೀ ಬೆಂಕಿಯಿಂದಾಗಿ ಛಾವಣಿ ಕುಸಿದಿದೆ. ರವಿಕಾಂತನಿಗೆ ಪ್ರಜ್ಞೆ ಬರುವಷ್ಟರಲ್ಲಿ ಅವರೂ ಉರಿಯುವ ಬೆಂಕಿಗೆ ಬಿದ್ದಿದ್ದರು. ಜ್ವಾಲೆಯು ಎಷ್ಟು ಪ್ರಬಲವಾಗಿದೆಯೆಂದರೆ ರವಿಕಾಂತ್ ತೀವ್ರವಾಗಿ ಸುಟ್ಟುಹೋದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರುವಷ್ಟರಲ್ಲಿ ರವಿಕಾಂತ್ ಸಾವನ್ನಪ್ಪಿದ್ದರು.
ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇದ್ದಕ್ಕಿದ್ದಂತೆ ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾಯಿತು. ಈ ವೇಳೆ ಈ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಲಕ್ಷಾಂತರ ಮೌಲ್ಯದ ಆಸ್ತಿ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮವಹಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಮೃತ ಅಗ್ನಿಶಾಮಕ ದಳದ ಪೇದೆಯನ್ನು ಭಾಗಲ್ಪುರ ನಿವಾಸಿ ರವಿಕಾಂತ್ ಮಂಡಲ್ ಎಂದು ಗುರುತಿಸಲಾಗಿದೆ.
ಮತ್ತಷ್ಟು ಓದಿ: ತೆಲಂಗಾಣ: ಬಸ್ ಹಾಗೂ ಲಾರಿ ನಡುವೆ ಅಪಘಾತ, ಹೊತ್ತಿ ಉರಿದ ಎರಡೂ ವಾಹನ, ಆರು ಮಂದಿ ಸಾವು
ಮನೆಗೆ ಬೆಂಕಿ ಬಿದ್ದಿದ್ದು ಹೇಗೆ? ವಿವೇಕ್ ಮಾದೇಶಿಯಾ ಎಂಬುವವರು ಮಾತನಾಡಿ, ಮೂರು ವರ್ಷಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದೆ. ನಮ್ಮ ಅಜ್ಜ ಹೊಸ ಮನೆ ಕಟ್ಟಿಸಿದ್ದಾರೆ. ಈ ಮನೆಯಲ್ಲೂ ಪಾಲು ಪಡೆಯಬೇಕೆಂದುಕೊಂಡರು. ಮುಂಜಾನೆ ಮೂರು ಗಂಟೆಗೆ ಎದ್ದಾಗ ಒಬ್ಬ ವ್ಯಕ್ತಿ ಓಡುತ್ತಿರುವುದನ್ನು ಕಂಡೆ ಎಂದು ಹೇಳಿದರು. ಆ ವೇಳೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ