ಈ ಢಾಬಾದಲ್ಲಿ ಮಾಡ್ತಿದ್ರಾ ಡೀಸೆಲ್ ಪರೋಟ?, ಇದನ್ನು ತಿಂದವರು ಬದ್ಕೋದುಂಟಾ!
ಇತ್ತೀಚೆಗೆ ಫುಡ್ ಬ್ಲಾಗರ್ಗಳ ಸಂಖ್ಯೆ ಹೆಚ್ಚಾಗಿದೆ. ಟ್ವಿಟ್ಟರ್, ಫೇಸ್ಬುಕ್ ಎಲ್ಲೇ ನೋಡಿದರೂ ಇವರ ಹಾವಳಿಯೇ ಹೆಚ್ಚು. ಇವರಿಂದ ಕೆಲವು ಹೋಟೆಲ್, ಢಾಬಾಗಳು ಹೆಚ್ಚೆಚ್ಚು ಪ್ರಾಮುಖ್ಯತೆ ಪಡೆದರೆ ಕೆಲವರು ಮಾಡುವ ತಪ್ಪುಗಳಿಂದ ಬಾಗಿಲು ಮುಚ್ಚುವ ಪರಿಸ್ಥಿತಿಯೂ ಬರುತ್ತದೆ. ಅಂಥದ್ದೇ ಒಂದು ಘಟನೆ ಬಗ್ಗೆ ಮಾಹಿತಿ ಇಲ್ಲಿದೆ.
ಚಂಡೀಗಢದಲ್ಲಿ ಡೀಸೆಲ್ ಪರೋಟ(Diesel Paratha) ಮಾಡುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಅದನ್ನು ತಿಂದ್ರೆ ಬದುಕುವುದುಂಟೇ ಎಂದು ಜನರು ಬಾಯಿ ಮೇಲೆ ಬೆರಳಿಟ್ಟಿದ್ದರು. ಆದರೆ ಫುಡ್ ಬ್ಲಾಗರ್ ಅಚಾತುರ್ಯದಿಂದ ಈ ಢಾಬಾ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗಿದೆ. ಚಂಡೀಗಢದಲ್ಲಿ ರಸ್ತೆ ಬದಿ ಇರುವ ಢಾಬಾವೊಂದರಲ್ಲಿ ಡೀಸೆಲ್ ಪರೋಟ ಮಾಡುತ್ತಾರೆ ಎಂದು ವಿಡಿಯೋಹಾಕಿ ಫುಡ್ ಬ್ಲಾಗರ್ ಅಮನ್‌ಪ್ರೀತ್ ಎಂಬುವವರು ಬರೆದುಕೊಂಡಿದ್ದರು. ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ ಎಂದಿದ್ದರು.
ಢಾಬಾ ಮಾಲೀಕ ಬಬ್ಲು ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ತಾನು ಡೀಸೆಲ್ ಪರಾಠವನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿದ್ದಾನೆ. ಅವನು ಒಂದು ಕ್ಯಾನ್‌ನಿಂದ ದ್ರವವನ್ನು ಸಿಜ್ಲಿಂಗ್ ಪ್ಯಾನ್‌ನ ಮೇಲೆ ಪರೋಟದ ಮೇಲೆ ಸುರಿಯುತ್ತಾನೆ. ವೀಡಿಯೋದಲ್ಲಿ ಹೊಗೆ ಉಕ್ಕುವುದು ಮತ್ತು ಪರೋಟವು ಸುಟ್ಟುಹೋಗುತ್ತಿರುವುದನ್ನು ತೋರಿಸುತ್ತದೆ.
#WATCH | In a viral video, a man in a Chandigarh dhaba was seen claiming that the oil he uses to make parathas is diesel. Owner of the dhaba refutes such claims.
Channi Singh, owner of the dhaba says, “We neither make any such thing as ‘diesel paratha’ nor serve any such thing… pic.twitter.com/15BJ7lMSR3
— ANI (@ANI) May 15, 2024
ಈ ವಿಡಿಯೋ ನೋಡಿದ ಸಾಕಷ್ಟು ಜನ ಆಶ್ಚರ್ಯಗೊಂಡಿದ್ದರು, ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಡೀಸೆಲ್ ಸೇವಿಸುವುದರಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಎಚ್ಚರಿಕೆಯನ್ನು ವ್ಯಕ್ತಪಡಿಸಿದ್ದಾರೆ, ಇದು ಮಾರಕವಾಗಬಹುದು ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: Winter Special Recipes: ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನದ ಭೋಜನಕ್ಕೆ ಈ 5 ರೀತಿಯ ಪರೋಟ ಉತ್ತಮ
ಆಹಾರ ಸುರಕ್ಷತಾ ಅಧಿಕಾರಿಗಳು ಢಾಬಾದ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೆಲವರು ವಿಡಿಯೋದ ಸತ್ಯಾಸತ್ಯತೆಯನ್ನೂ ಪ್ರಶ್ನಿಸಿದ್ದಾರೆ. ವೀಡಿಯೊ ವೈರಲ್ ಆದ ಕೆಲವೇ ದಿನಗಳಲ್ಲಿ, ಅಮನ್‌ಪ್ರೀತ್ ಸಿಂಗ್ ಅದನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.
True recipe for cancer (petrol diesel wala paratha)
Where r we heading? 🤦#AlluArjun #Pithapuram #MondayVibes #MorningVibes #MadhaviLatha #ViralVideo #ElectionDay pic.twitter.com/GyxC1xhQeb
— K.P.Brinda Reddy (@kpbrindareddy) May 13, 2024
ಈ ವಿಡಿಯೋವನ್ನು ಮನರಂಜನಾ ಉದ್ದೇಶಕ್ಕಾಗಿ ಚಿತ್ರಿಸಿಲಾಗಿದೆ ಎಂದು ಢಾಬಾ ಮಾಲೀಕ ಚನ್ನಿ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಅಡುಗೆಗೆ ಬೇಕಾದ ತೈಲವನ್ನು ಮಾತ್ರ ಬಳಕೆ ಮಾಡಲಾಗುತ್ತದೆ, ಡೀಸೆಲ್ನಲ್ಲಿ ಬೇಯಿಸಿದ ಪರೋಟವನ್ನು ಯಾರೂ ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Wed, 15 May 24