Winter Special Recipes: ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನದ ಭೋಜನಕ್ಕೆ ಈ 5 ರೀತಿಯ ಪರೋಟ ಉತ್ತಮ

ಮಧ್ಯಾಹ್ನದ ಊಟಕ್ಕೆ ಪರೋಟ ಸೂಕ್ತ ಆಯ್ಕೆಯಾಗಿದ್ದು ಅವು ರುಚಿಕರ ಮತ್ತು ಹೆಚ್ಚು ಪೌಷ್ಟಿಕವಾಗಿರುತ್ತದೆ. ಆದರೆ ಹೊರಗಡೆ ತಿನ್ನುವ ಬದಲು ಅವುಗಳನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಯಾವ ಯಾವ ರೀತಿಯ ಪರೋಟ ಮಾಡಬಹುದು ಇಲ್ಲಿದೆ ನೋಡಿ ಮಾಹಿತಿ.

Winter Special Recipes: ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನದ ಭೋಜನಕ್ಕೆ ಈ 5 ರೀತಿಯ ಪರೋಟ ಉತ್ತಮ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 11, 2023 | 6:20 PM

ಚಳಿಗಾಲದಲ್ಲಿ ಪ್ರತಿದಿನ ಎಲ್ಲರಿಗೂ ಕಾಡುವುದೇನೆಂದರೆ ಕುರುಕಲು ಅಥವಾ ಬಾಯಿಗೆ ರುಚಿ ನೀಡುವ ಆಹಾರಗಳನ್ನು ತಿನ್ನಬೇಕು ಎಂದು, ಇದು ಸಹಜ. ಆದರೆ ತಾಜಾ ತರಕಾರಿಗಳು ತಿನ್ನುವುದೇ ಇಲ್ಲ ಎಂಬುದು ಇದರ ಅರ್ಥವಲ್ಲ. ಕರಿದ ತಿಂಡಿಯ ಆಯ್ಕೆ ಹೆಚ್ಚು ಎನ್ನುವುದು ತಜ್ಞರ ಅಭಿಪ್ರಾಯ. ಅವರು ಹೇಳುವ ಪ್ರಕಾರ ವರ್ಷದ ಈ ಸಮಯದಲ್ಲಿ, ಮನೆಯ ತರಕಾರಿ ಬುಟ್ಟಿಗಳಲ್ಲಿ ಆದಷ್ಟು ಕ್ಯಾರೆಟ್, ಮೂಲಂಗಿ, ಸೊಪ್ಪು ಮತ್ತು ಹೆಚ್ಚಿನ ವಿವಿಧ ಕಾಲೋಚಿತ ತರಕಾರಿಗಳು ಹಾಗೂ ಹಣ್ಣುಗಳಿಂದ ತುಂಬಿರಬೇಕು. ಇವುಗಳಿಂದ ಕ್ಯಾರೆಟ್ ಹಲ್ವಾ, ಪಾಲಕ್ ಪನೀರ್ ಮತ್ತು ಇತರ ಸಿಹಿ ಭಕ್ಷ್ಯಗಳನ್ನು ಮಾಡಿಕೊಳ್ಳಬಹುದು. ಇದೆಲ್ಲದರ ಜೊತೆಗೆ, ನಿಮ್ಮನ್ನು ಬೆಚ್ಚಗಿಡಲು, ಚಳಿಗಾಲದಲ್ಲಿ ಮಾಡಬಹುದಾದ ಪರೋಟಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇವು ಮಧ್ಯಾಹ್ನದ ಊಟಕ್ಕೆ ಸೂಕ್ತ ಆಯ್ಕೆಯಾಗಿದ್ದು ಅವು ರುಚಿಕರ ಮತ್ತು ಹೆಚ್ಚು ಪೌಷ್ಟಿಕವಾಗಿರುತ್ತದೆ. ಪರೋಟವನ್ನು ಹೊರಗಡೆ ತಿನ್ನುವ ಬದಲು ಅವುಗಳನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಯಾವ ರೀತಿಯ ಪರೋಟ ಮಾಡಿ ತಿನ್ನಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಈ ಚಳಿಗಾಲದಲ್ಲಿ ನೀವು ಪ್ರಯತ್ನಿಸಲೇಬೇಕಾದ 5 ಕ್ಲಾಸಿಕ್ ಪರೋಟಗಳ ಬಗ್ಗೆ ಇಲ್ಲಿದೆ ಮಾಹಿತಿ

1. ಮೆಂತೆ (ಮೆಥಿ) ಪರೋಟ (ಪರಾಥಾ) – ಅನೇಕ ಭಾರತೀಯ ಮನೆಗಳಲ್ಲಿ, ಈ ಪರೋಟ ಚಳಿಗಾಲದಲ್ಲಿ ಮಾಡುವ ಪ್ರಧಾನ ಖಾದ್ಯವಾಗಿದೆ. ಇದು ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಮೆಂತ್ಯ (ಮೆಂತೆ) ಎಲೆಗಳಲ್ಲಿ ಆರೋಗ್ಯಕಾರಿ ಪ್ರಯೋಜನಗಳಿಂದ ತುಂಬಿದೆ. ಇದನ್ನು ತಿನ್ನಲು ಮೊಸರು ಮತ್ತು ಚಟ್ನಿಯನ್ನು ಬಳಸಬಹುದು. ಇದು ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮಗೆ ಬೇಕಾದಲ್ಲಿ ಸ್ವಲ್ಪ ಚೀಸ್ ಅನ್ನು ಸ್ಟಫಿಂಗ್ ಆಗಿ ಸೇರಿಸುವ ಮೂಲಕ ಇನ್ನಷ್ಟು ರುಚಿ ನೀಡಬಹುದು.

2. ಬೀಟ್ರೂಟ್ ಪರೋಟ – ಬೀಟ್ರೂಟ್ ನಮ್ಮ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾದ ಪೋಷಕಾಂಶಗಳಿಂದ ತುಂಬಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನೀವು ಬೀಟ್ರೂಟ್ ಪರೋಟ ಮಾಡಿಕೊಳ್ಳಬಹುದು. ನೀವು ಬೇರೆ ಪರೋಟಗಳನ್ನು ಮಾಡಿದ ಹಾಗೆಯೇ ಮಾಡಬಹುದು ಆದರೆ ಇದ್ಕಕೆ ಬಿಟ್ರೋಟ್ ಸೇರಿಸಿದರೆ ರುಚಿ ರುಚಿಯಾದ ಬೀಟ್ರೂಟ್ ಪರೋಟ ಸವಿಯಲು ಸಿದ್ದವಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ರಕ್ತ ಶುದ್ದೀಕರಣಕ್ಕೂ ತುಂಬಾ ಉಪಯೋಗಕಾರಿಯಾಗಿದೆ.

3. ಪಾಲಕ್ ಪರೋಟ- ತುಪ್ಪ ಹಾಕಿ, ಬಿಸಿ ಬಿಸಿಯಾಗಿ, ಗರಿಗರಿಯಾದ ಪರೋಟ ಬಗ್ಗೆ ಯೋಚಿಸಿದಾಗ ನಮಗೆ ಹಸಿವಾಗುವುದು ಸಹಜ. ಹೀಗೆ ಅನಿಸಿದಾಗೆಲ್ಲ ಪಾಲಕ್ ಪರೋಟ ತಿನ್ನುವುದು ಉತ್ತಮ ಆಯ್ಕೆಯಾಗಿದೆ. ಇದರ ಜೊತೆಗೆ ಬೆಣ್ಣೆ, ಉಪ್ಪಿನಕಾಯಿ ಅಥವಾ ಮೊಸರಿನೊಂದಿಗೆ ಸವಿದರೇ ಅದರ ರುಚಿ ಮತಷ್ಟು ಹೆಚ್ಚುತ್ತದೆ.

ಇದನ್ನೂ ಓದಿ: ಮನೆಯಲ್ಲಿಯೇ ಗರಿ ಗರಿಯಾಗಿ ಅಕ್ಕಿ ಪಕೋಡ ತಯಾರಿಸಿ

4. ಮೂಲಂಗಿ ಪರೋಟ ಅಥವಾ ಮೂಲಿ ಕಾ ಪರೋಟ – ಇದರ ವಿಶಿಷ್ಟತೆ ಮತ್ತು ಕಟುವಾದ ಪರಿಮಳದಿಂದ ಮೂಲಂಗಿ (ಅಥವಾ ಮೂಲಿ) ಎಲ್ಲರ ಮನೆಮಾತಾಗಿದೆ. ಜೊತೆಗೆ ಕಡಿಮೆ ಕ್ಯಾಲೊರಿ ಅಂಶದಿಂದಾಗಿ ಈ ತರಕಾರಿ ಇನ್ನೂ ಹೆಚ್ಚು ಜನರಿಗೆ ಇಷ್ಟವಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಮಲಬದ್ಧತೆ ಇರುವವರಿಗೆ ಸಹಾಯವಾಗಲಿದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

5. ಸಾಸಿವೆ ಸೊಪ್ಪಿನ ಪರೋಟ- ನೀವು ಆಯಾಸಗೊಂಡಿದ್ದರೆ, ಸಾಸಿವೆ ಸೊಪ್ಪಿನ ಪರೋಟ ನಿಮ್ಮ ಆಹಾರದಲ್ಲಿ ತಾಜಾತನ ನೀಡಲು ಸಹಾಯ ಮಾಡುತ್ತದೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾ ಒಳ್ಳೆಯದು.

ಮಧ್ಯಾಹ್ನಕ್ಕೆ ಅಥವಾ ಬೇಗ ಊಟಕ್ಕೆ ಸಿದ್ಧತೆ ಮಾಡಿಕೊಳ್ಳಲು ಜೊತೆಗೆ ಮಳೆಗಾಲದಲ್ಲಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಈ ಎಲ್ಲ ಪರೋಟ ಪ್ರಯತ್ನಿಸಿ ಮತ್ತು ಅಭಿಪ್ರಾಯವನ್ನು ತಿಳಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’