ಪರೋಟ ಮೇಲೆ ಬರೋಬ್ಬರಿ 18% ಜಿಎಸ್‌ಟಿ! ಸೋಷಿಯಲ್ ಮೀಡಿಯಾದಲ್ಲಿ ಫುಲ್ ಜಟಾಪಟಿ
ದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಜಗಳ, ಕಿತ್ತಾಟವನ್ನು ನೋಡಿದ್ದೀವೆ. ಆದ್ರೆ ನಿನ್ನೆಯಿಂದ ಪರೋಟಾಗಾಗಿ ಯುದ್ಧ ಶುರುವಾಗಿದೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಸರ್ಕಾರದ ಅದೊಂದು ನಿರ್ಧಾರ. ಅರೆ ಸರ್ಕಾರದ ನಿರ್ಧಾರಕ್ಕೂ. ಸೋಷಿಯಲ್ ಮೀಡಿಯಾಗೂ, ಪರೋಟಾಗೂ ಏನ್ ಸಂಬಂಧ ಇದೆ ಅಂದ್ರಾ? ಸಂಬಂಧ ಖಂಡಿತಾ ಇದೆ. ಉತ್ತರ ಭಾರತೀಯರೇ ಇರಲಿ ಅಥವಾ ದಕ್ಷಿಣ ಭಾರತೀಯರೇ ಇರಲಿ ‘ಪರೋಟಾ’ ಎಲ್ಲರಿಗೂ ಫೇವರಿಟ್ ಫುಡ್. ಕೇರಳದ ಮಲಬಾರ್ ಪರೋಟಾ ಕೂಡ ದಕ್ಷಿಣದಲ್ಲಿ ಬಾರಿ ಫೇಮಸ್ಸು. ಬಡವರು, ಶ್ರೀಮಂತರು ಎಲ್ಲರಿಗೂ ಪರೋಟಾ ಸಖತ್ ಇಷ್ಟವಾಗೋ […]
ದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಜಗಳ, ಕಿತ್ತಾಟವನ್ನು ನೋಡಿದ್ದೀವೆ. ಆದ್ರೆ ನಿನ್ನೆಯಿಂದ ಪರೋಟಾಗಾಗಿ ಯುದ್ಧ ಶುರುವಾಗಿದೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಸರ್ಕಾರದ ಅದೊಂದು ನಿರ್ಧಾರ. ಅರೆ ಸರ್ಕಾರದ ನಿರ್ಧಾರಕ್ಕೂ. ಸೋಷಿಯಲ್ ಮೀಡಿಯಾಗೂ, ಪರೋಟಾಗೂ ಏನ್ ಸಂಬಂಧ ಇದೆ ಅಂದ್ರಾ? ಸಂಬಂಧ ಖಂಡಿತಾ ಇದೆ.
ಉತ್ತರ ಭಾರತೀಯರೇ ಇರಲಿ ಅಥವಾ ದಕ್ಷಿಣ ಭಾರತೀಯರೇ ಇರಲಿ ‘ಪರೋಟಾ’ ಎಲ್ಲರಿಗೂ ಫೇವರಿಟ್ ಫುಡ್. ಕೇರಳದ ಮಲಬಾರ್ ಪರೋಟಾ ಕೂಡ ದಕ್ಷಿಣದಲ್ಲಿ ಬಾರಿ ಫೇಮಸ್ಸು. ಬಡವರು, ಶ್ರೀಮಂತರು ಎಲ್ಲರಿಗೂ ಪರೋಟಾ ಸಖತ್ ಇಷ್ಟವಾಗೋ ಆಹಾರ. ಆದರೆ ಇಂತಹ ಪರೋಟಾ ಮೇಲೆ ಈಗ ಶೇಕಡಾ 18ರಷ್ಟು ಜಿಎಸ್‌ಟಿ ವಿಧಿಸಲು ಆದೇಶಿಸಲಾಗಿದೆ. ಕೇಂದ್ರದ ನಿರ್ಧಾರ ಸೋಷಿಯಲ್ ಮೀಡಿಯಾದಲ್ಲಿ ಜಟಾಪಟಿಗೆ ಕಾರಣವಾಗಿಬಿಟ್ಟಿದೆ.
ಪರೋಟ ಮೇಲೆ ಬರೋಬ್ಬರಿ ಶೇ. 18ರಷ್ಟು ಜಿಎಸ್‌ಟಿ! ದೇಶದಲ್ಲಿ ಜಿಎಸ್‌ಟಿ ಜಾರಿಗೆ ತಂದು 3 ವರ್ಷಗಳಾಗುತ್ತಿವೆ. ಆದರೆ ಈಗ ಬಡವರು, ಶ್ರೀಮಂತರು ಸೇರಿದಂತೆ ಎಲ್ಲರೂ ಸೇವಿಸುವ ಪರೋಟ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಈ ನಿರ್ಧಾರವನ್ನು ‘ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್’ ಕೈಗೊಂಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಬಹುದೊಡ್ಡ ಚರ್ಚೆ ಹುಟ್ಟುಹಾಕಿದೆ.
ಅಂದಹಾಗೆ ರೋಟಿ, ಚಪಾತಿ ಮೇಲೆ ಶೇಕಡಾ 5 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಚಪಾತಿ ತಯಾರಿಸೋಕೆ ಬಳಸುವ ಪದಾರ್ಥವನ್ನೇ ಪರೋಟಾಗೂ ಬಳಸಲಾಗುತ್ತೆ. ಈ ಎರಡರ ಮಧ್ಯೆ ಅಷ್ಟು ವ್ಯತ್ಯಾಸವೇನಿಲ್ಲ. ಬಡವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಆಹಾರವಾಗಿ ಪರೋಟಾ ಸೇವಿಸ್ತಾರೆ. ಪರೋಟಾ ಶ್ರೀಮಂತರು ಮಾತ್ರ ಸೇವಿಸುವ ಆಹಾರವಲ್ಲ. ಆದರೂ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸಿದ್ದು ಏಕೆ, ಇದು ಸರಿಯಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದಕ್ಕೆ ಉತ್ತರಿಸಿರುವ ‘ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್’, ಪರೋಟಾ ರೆಡಿ ಟು ಈಟ್ ಆಹಾರವಲ್ಲ ಅಂತಾ ಹೇಳಿದೆ.
ಅಲ್ಲದೆ ತಯಾರು ಮಾಡಿದ ಮೇಲೆ 3ರಿಂದ 5 ದಿನಗಳವರೆಗೆ ಇಟ್ಟು ಸೇವಿಸಬಹುದು. ಪರೋಟವನ್ನು ಸೇವಿಸೋಕು ಮುನ್ನ ಬಿಸಿ ಮಾಡಬೇಕು. ಹೀಗಾಗಿ ಪರೋಟಾ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿದ್ದೇವೆ ಎಂದು ಸಮಜಾಯಿಷಿ ನೀಡಿದೆ. ಕೇಂದ್ರ ಸರ್ಕಾರ ಕೂಡ ಈ ನಿರ್ಧಾರವನ್ನ ಸ್ವಾಗತಿಸಿದೆ. ಹಾಗೇ ರೋಟಿ, ಚಪಾತಿ ತಯಾರಿಸಿದ ತಕ್ಷಣ ಸೇವಿಸುವ ಆಹಾರವೆಂದು ಶೇಕಡಾ 5ರಷ್ಟು ಜಿಎಸ್‌ಟಿ ವಿಧಿಸಲಾಗಿದೆಯಂತೆ. ಆದ್ರೆ ಹೋಟೆಲ್ಗಳಲ್ಲಿ ಫ್ರೆಷ್ ಆಗಿ ನೀಡೋ ಪರೋಟಾ ಮೇಲೆ ಶೇಕಡಾ 5 ರಷ್ಟು ಮಾತ್ರ ತೆರಿಗೆ ಬೀಳಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಪರೋಟಾ ಬಗ್ಗೆ ಜೋರಾದ ಚರ್ಚೆ ನಡೆಯುವಾಗ ಪ್ರತಿಕ್ರಿಯಿಸಿದ ಉದ್ಯಮಿ ಆನಂದ್ ಮಹೀಂದ್ರಾ. ದೇಶದ ಸಮಸ್ಯೆಗಳ ಜೊತೆ ಪರೋಟ ಆಸ್ತಿತ್ವದ ಬಿಕ್ಕಟ್ಟಿನ ಬಗ್ಗೆಯೂ ಚಿಂತೆ ಮಾಡಬೇಕಾಗಿದೆ ಅಂತಾ ಕಾಲೆಳೆದಿದ್ದಾರೆ. ತರಹೇವಾರಿ ಟ್ವೀಟ್, ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ರಾರಾಜಿಸಿದ್ದವು. ಇದು ಕೆಲವರಿಗೆ ಮನರಂಜನೆ ನೀಡಿದ್ರೆ, ಪರೋಟಾ ಪ್ರಿಯರು ಮಾತ್ರ ನಿನ್ನೆ ತುಸು ಮುನಿಸಿಕೊಂಡಿದ್ದು ಸುಳ್ಳಲ್ಲ.
Published On - 7:26 am, Sat, 13 June 20