AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fire Accident: ಆದಾಯ ತೆರಿಗೆ ಇಲಾಖೆಯಲ್ಲಿ ಬೆಂಕಿ ಅವಘಡ; ಉಸಿರುಗಟ್ಟಿ ಅಧಿಕಾರಿ ಸಾವು

ದೆಹಲಿಯ ಆದಾಯ ತೆರಿಗೆ ಕಚೇರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಆದಾಯ ತೆರಿಗೆ ಇಲಾಖೆಯ ಪ್ರದೇಶದ ಕೇಂದ್ರ ಕಂದಾಯ ಕಟ್ಟಡದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಬ್ಬರು ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Fire Accident: ಆದಾಯ ತೆರಿಗೆ ಇಲಾಖೆಯಲ್ಲಿ ಬೆಂಕಿ ಅವಘಡ; ಉಸಿರುಗಟ್ಟಿ ಅಧಿಕಾರಿ ಸಾವು
ಆದಾಯ ತೆರಿಗೆ ಇಲಾಖೆಯಲ್ಲಿ ಬೆಂಕಿ ಅವಘಡ
ಸುಷ್ಮಾ ಚಕ್ರೆ
|

Updated on: May 14, 2024 | 6:53 PM

Share

ನವದೆಹಲಿ: ದೆಹಲಿಯ ಆದಾಯ ತೆರಿಗೆ ಇಲಾಖೆಯಲ್ಲಿ (Income Tax Department) ದಿಢೀರನೆ ಬೆಂಕಿ (Fire Accident) ಕಾಣಿಸಿಕೊಂಡಿದೆ. ಈ ಅವಢದಲ್ಲಿ ಆದಾಯ ತೆರಿಗೆ ಕಚೇರಿಯ ಸೂಪರಿಂಟೆಂಡೆಂಟ್ ಆಗಿದ್ದ ವ್ಯಕ್ತಿ ಉಸಿರುಗಟ್ಟಿ ಸ್ಥಳದಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ದೆಹಲಿಯ ಆದಾಯ ತೆರಿಗೆ ಕಚೇರಿ ಕಟ್ಟಡದ ಮೂರನೇ ಮಹಡಿಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕಚೇರಿಯ ಸೂಪರಿಂಟೆಂಡೆಂಟ್ ಆಗಿದ್ದ 46 ವರ್ಷದ ವ್ಯಕ್ತಿ ಘಟನಾ ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. ನಂತರ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಇಂದು ಮಧ್ಯಾಹ್ನ 2.38ಕ್ಕೆ ಬೆಂಕಿ ದುರಂತದ ಬಗ್ಗೆ ಫೋನ್ ಬಂದ ನಂತರ 21 ಅಗ್ನಿಶಾಮಕ ವಾಹನಗಳು ದುರಂತ ನಡೆದ ಸ್ಥಳಕ್ಕೆ ಧಾವಿಸಿವೆ. ಶೀಘ್ರದಲ್ಲೇ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಈಗಾಗಲೇ 7 ಮಂದಿಯನ್ನು ಘಟನಾ ಸ್ಥಳದಿಂದ ರಕ್ಷಿಸಲಾಗಿದೆ.

ಇದನ್ನೂ ಓದಿ: Delhi Fire Accident: ದೆಹಲಿಯ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಬೆಂಕಿ ಅವಘಡ

ಕಚೇರಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ 46 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಬೆಂಕಿ ಹೊತ್ತಿಕೊಂಡ ಕಟ್ಟಡದಿಂದ 7 ಜನರನ್ನು ರಕ್ಷಿಸಲಾಗಿದೆ. ಈ ಕಟ್ಟಡವು ಹಳೆಯ ಪೊಲೀಸ್ ಪ್ರಧಾನ ಕಛೇರಿಯ ಎದುರು ಇದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

“ಕಟ್ಟಡದ ಮೂರನೇ ಮಹಡಿಯಿಂದ ಒಟ್ಟು ಏಳು ಮಂದಿಯನ್ನು ರಕ್ಷಿಸಲಾಗಿದೆ. ಐವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಡಿಎಫ್‌ಎಸ್‌ನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ನನಗೆ ಸಂಜೆ 4 ಗಂಟೆಗೆ ಮಾಹಿತಿ ಸಿಕ್ಕಿತು. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ” ಎಂದು ಡಿಎಫ್‌ಎಸ್ ಮುಖ್ಯಸ್ಥ ಅತುಲ್ ಗಾರ್ಗ್ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರ ಪತನ: ಶಿಂಧೆ ಹೇಳಿಕೆ ಬೆನ್ನಲ್ಲೇ ಶಾಸಕರಲ್ಲಿ ಅಸಮಾಧಾನ ಸಹಜ ಎಂದು ಒಪ್ಪಿಕೊಂಡ ಸತೀಶ್ ಜಾರಕಿಹೊಳಿ

“ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುತ್ತಿದ್ದಂತೆ, ಅವರು ಕಟ್ಟಡವನ್ನು ತೆರವು ಮಾಡಿದರು. ವಿಷಕಾರಿ ಹೊಗೆಯಿಂದಾಗಿ ನಾವು ಗ್ಯಾಸ್ ಮಾಸ್ಕ್ ಬಳಸಬೇಕಾಯಿತು, ಆದರೆ, ಕಟ್ಟಡದಲ್ಲಿದ್ದ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ನಾವು ಪ್ರದೇಶದ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದೇವೆ. ಬೆಂಕಿಯ ನಿಜವಾದ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ” ಎಂದು ಗಾರ್ಗ್ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ