AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​​​, ಬ್ಯಾಂಕ್​​ ಅಧಿಕಾರಿಗಳೆಂದು ಕಾಲ್​​​ ಮಾಡಿ ನಿಮ್ಮ ಹಣ ದೋಚಬಹುದು ಎಚ್ಚರ ಎಂದ ಗೃಹ ಸಚಿವಾಲಯ

ಕೇಂದ್ರ ಗೃಹ ಸಚಿವಾಲಯಕ್ಕೆ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ವರದಿಯೊಂದನ್ನು ನೀಡಿದೆ. ಈ ವರದಿ ಆಧಾರದ ಮೇಲೆ ರಾಜ್ಯ ಅಥವಾ ಯುಟಿ ಪೊಲೀಸ್, ಎನ್‌ಸಿಬಿ, ಸಿಬಿಐ, ಆರ್‌ಬಿಐ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳ ಎಂದು ಹೇಳಿಕೊಂಡು ವಂಚನೆ ಮಾಡುವ 'ಬ್ಲ್ಯಾಕ್‌ಮೇಲ್​​​ ಮತ್ತು ಡಿಜಿಟಲ್ ಹ್ಯಾಕರ್ಸ್​​​ಗಳ ಬಗ್ಗೆ ಎಚ್ಚರ ವಹಿಸುವಂತೆ ಹೇಳಿದೆ.

ಪೊಲೀಸ್​​​, ಬ್ಯಾಂಕ್​​ ಅಧಿಕಾರಿಗಳೆಂದು ಕಾಲ್​​​ ಮಾಡಿ ನಿಮ್ಮ ಹಣ ದೋಚಬಹುದು ಎಚ್ಚರ ಎಂದ ಗೃಹ ಸಚಿವಾಲಯ
ಅಕ್ಷಯ್​ ಪಲ್ಲಮಜಲು​​
|

Updated on: May 15, 2024 | 1:07 PM

Share

ರಾಜ್ಯ ಅಥವಾ ಯುಟಿ ಪೊಲೀಸ್, ಎನ್‌ಸಿಬಿ, ಸಿಬಿಐ, ಆರ್‌ಬಿಐ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳ ಎಂದು ಹೇಳಿಕೊಂಡು ವಂಚನೆ ಮಾಡುವ ‘ಬ್ಲ್ಯಾಕ್‌ಮೇಲ್​​​ ಮತ್ತು ಡಿಜಿಟಲ್ ಹ್ಯಾಕರ್ಸ್’ ​​​ಗಳ ಬಗ್ಗೆ ಎಚ್ಚರ ವಹಿಸುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ಯಾದಿ ಬ್ಯಾಂಕ್​​​ಗಳ ಅಧಿಕಾರಿಗಳು ಎಂದು ಹೇಳಿ ಗ್ರಾಹಕರಲ್ಲಿ ಭಯಪಡಿಸುವ ಕೆಲಸವನ್ನು ಈ ಹ್ಯಾಕರ್ಸ್​​​​ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಮೈಕ್ರೋಸಾಫ್ಟ್ ಸಹಯೋಗದೊಂದಿಗೆ I4C (ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್) ಈಗಾಗಲೇ ಇಂತಹ ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದೆ. ವಂಚಕರು ಬಳಸುವ ಸಿಮ್ ಕಾರ್ಡ್‌ಗಳು, ಮೊಬೈಲ್​​ಗಳು ಈ ಹ್ಯಾಕ್​​ಗಳಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿರುವ ಪ್ರಕಾರ, I4C ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಸೈಬರ್‌ಡೋಸ್ಟ್’ ನಲ್ಲಿ ಇನ್ಫೋಗ್ರಾಫಿಕ್ಸ್ ಮತ್ತು ವೀಡಿಯೊಗಳ ಮೂಲಕ ವಿವಿಧ ಎಚ್ಚರಿಕೆಗಳನ್ನು ನೀಡಿದೆ ಎಂದು ಹೇಳಲಾಗಿದೆ.

ಇನ್ನು ಕೆಲವು ವಸ್ತುಗಳ ಮೇಲೆ ಆಫರ್​​ನ್ನು ನೀಡಿದೆ. ಆನ್​ಲೈನ್​​ಗಳಲ್ಲಿ ವಂಚನೆ ಮಾಡಿದ್ದಾರೆ ಎಂದು ಸಚಿವಾಲಯ ಹೇಳಿದೆ. ಕೆಲವೊಂದು ನಿಷೇಧಿತ ವಸ್ತುಗಳನ್ನು ನೀಡಿ, ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿ ಹಾಕಿದ ಘಟನೆಗಳು ಕೂಡ ಇದೆ. ಇನ್ನು ಕೆಲವೊಂದು ಕಡೆ ಈ ವಂಚಕರು ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳು ಕೂಡ ಪತ್ತೆ ಮಾಡಲಾಗಿದೆ. ದೇಶಾದ್ಯಂತ ಇಂತಹ ಅಪರಾಧಿಗಳಿಂದ ಹಲವಾರು ಜನರು ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 30ರವರೆಗೆ ವಿಸ್ತರಣೆ

ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ. ದೇಶದಲ್ಲಿ ಸೈಬರ್ ಅಪರಾಧವನ್ನು ಎದುರಿಸಲು ಸಂಬಂಧಿಸಿದ ಚಟುವಟಿಕೆಗಳಲ್ಲಿ ಇದು ಕೆಲಸ ಮಾಡುತ್ತದೆ. ಈವರೆಗೆ ಇದು 600 ಕೋಟಿಯಷ್ಟು ವಂಚನೆ ಆಗುತ್ತಿದ್ದ ಹಣವನ್ನು ರಕ್ಷಣೆ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ