AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶಾಖಪಟ್ಟಣದ ಬೀಚ್​​ನಲ್ಲಿ ಚಿನ್ನದ ಮನುಷ್ಯ! ಈt ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದಾನೆ

ಈ ವಿನೂತನ ಪ್ರದರ್ಶನವು ಕೇವಲ ಮನರಂಜನೆಯ ರೂಪವಲ್ಲ ಆದರೆ ಪ್ರದೀಪ್ ಅವರ ಜೀವನೋಪಾಯವೂ ಆಗಿದೆ. ಅದಕ್ಕೆ ತಕ್ಕಂತೆ ದಿನಕ್ಕೆ ಒಂದು ಸಾವಿರದಿಂದ ಮೂರು ಸಾವಿರ ರೂಪಾಯಿಗಳವರೆಗೆ ಗಳಿಸುತ್ತಾರಂತೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪ್ರದರ್ಶನಗಳ ನೋಡಿದ ನಂತರ ಅವರು ಈ ಉದ್ಯೋಗಕ್ಕೆ ನಿಂತುಬಿಟ್ಟಿದ್ದಾರೆ. ಪ್ರದೀಪ್ ಇತರೆ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಭಾಗವಹಿಸಲು ಮುಕ್ತವಾಗಿದ್ದಾರಂತೆ.

ವಿಶಾಖಪಟ್ಟಣದ ಬೀಚ್​​ನಲ್ಲಿ ಚಿನ್ನದ ಮನುಷ್ಯ! ಈt ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದಾನೆ
ವಿಶಾಖಪಟ್ಟದ ಬೀಚ್​​ನಲ್ಲಿ ಚಿನ್ನದ ಮನುಷ್ಯ!
ಸಾಧು ಶ್ರೀನಾಥ್​
|

Updated on:May 15, 2024 | 2:41 PM

Share

ಈ ವಿನೂತನ ಪ್ರದರ್ಶನವು ಕೇವಲ ಮನರಂಜನೆಯ ರೂಪವಲ್ಲ. ಇದು ಪ್ರದೀಪ್ ಜೀವನೋಪಾಯವೂ ಆಗಿದೆ. ಅದಕ್ಕೆ ತಕ್ಕಂತೆ ದಿನಕ್ಕೆ ಸಾವಿರಾರು ರೂಪಾಯಿ ಗಳಿಸುತ್ತಾರಂತೆ. ಅಂದಹಾಗೆ, ಸಾರ್ವಜನಿಕರಿಂದ ಅವರು ಪಡೆಯುವ ಬೆಂಬಲ ಮತ್ತು ಮೆಚ್ಚುಗೆಗಳು ಅವರ ವಿಶಿಷ್ಟ ವೃತ್ತಿಯನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕವಾಗಿವೆ.

ಮುಂದಿನ ಬಾರಿ ನೀವು ವಿಶಾಖಪಟ್ಟಣದ ಪ್ರಸಿದ್ಧ ಬೀಚ್ ರಸ್ತೆಯಲ್ಲಿ (Visakhapatnam Beach) ಅಡ್ಡಾಡುತ್ತಿರುವಾಗ, ರಸ್ತೆಯ ಮಧ್ಯದಲ್ಲಿ ಎಲ್ಲೋ ನಿಂತಿರುವ ಚಿನ್ನದ ಪ್ರತಿಮೆಯನ್ನು ಕಂಡು ಆಶ್ಚರ್ಯಪಡಬೇಡಿ. ಹಾಗಂತ ಅದು ಪ್ರತಿಮೆಯಲ್ಲ, ಆದರೆ ಚಿನ್ನದ ಬಣ್ಣಗಳಲ್ಲಿ ಚಿತ್ರಿಸಿದ ವ್ಯಕ್ತಿ, ಆತ ದಾರಿಹೋಕರ (Tourism) ಮನರಂಜನೆ ಮತ್ತು ವಿನೋದಕ್ಕಾಗಿ ಚಲನರಹಿತವಾಗಿ ನಿಂತಿದ್ದಾನೆ. ಇಂದಿನ ಯುವಕರು ಜೀವನೋಪಾಯಕ್ಕಾಗಿ ಬಳಸಿಕೊಳ್ಳಲು ನಾನಾ ಕೌಶಲ್ಯಗಳಿವೆ. ಇಲ್ಲಿನ ಕಥಾನಾಯಕ ಪ್ರದೀಪ್ ಘೋಷ್ ಎಂಬ ಯುವಕ ನಿರಂತರವಾಗಿ ದೀರ್ಘ ಕಾಲ ಚಲನರಹಿತವಾಗಿ ಉಳಿಯುವ ತನ್ನ ಕೌಶಲ್ಯಗಳನ್ನು ಬಳಸಿಕೊಳ್ಳುತ್ತಿದ್ದಾನೆ.

ಈ ಯುವಕ ವಿಶಾಖಪಟ್ಟಣದ ಬೀಚ್ ರಸ್ತೆಯಲ್ಲಿರುವ ಜಲಾಂತರ್ಗಾಮಿ (submarine) ಬಳಿ ನಿಂತನಿಲುವಿನಲ್ಲಿ ಅಚಲವಾಗಿ ನಿಂತಿದ್ದು ಸಂಚಲನ ಮೂಡಿಸಿದ್ದಾನೆ! “ಸ್ಟ್ಯಾಂಡಿಂಗ್ ಗೋಲ್ಡ್ ಮ್ಯಾನ್” ಎಂದು (Standing Gold Man) ಕರೆಯಲ್ಪಡುವ ಈ ಯುವಕ ಸಂಪೂರ್ಣವಾಗಿ ನಿಶ್ಚಲವಾಗಿ ನಿಂತುಬಿಡುತ್ತಾನೆ. ಚಿನ್ನದಲ್ಲಿ ಕಂಗೊಳಿಸುವ ಈತನನ್ನು ಕಣ್ಣಾರೆಕಂಡು ಸ್ಥಳೀಯರು ಮತ್ತು ಪ್ರವಾಸಿಗರು ಸಂತೋಷಪಡುತ್ತಾರೆ. ಜೀವಂತ ಪ್ರತಿಮೆಯಾಗಿ ನಿಲ್ಲುವ ಪರಿಕಲ್ಪನೆಯು ಸಾಮಾನ್ಯವಾಗಿ ಇತರ ದೇಶಗಳಲ್ಲಿ ಕಂಡುಬರುತ್ತದೆ. ಆದರೆ ಪ್ರದೀಪ್ ಈ ವಿಶಿಷ್ಟವಾದ ಬೀದಿ ಪ್ರದರ್ಶನವನ್ನು ವಿಶಾಖಪಟ್ಟಣಕ್ಕೆ ತಂದಿದ್ದಾರೆ. ಜನರೂ ಅದನ್ನ ಮೆಚ್ಚಿಕೊಂಡಿದ್ದಾರೆ.

ಪ್ರವಾಸಿಗರು ಪ್ರದೀಪ್ ಅವರ ಈ ‘ನಡೆಗೆ’ ಆಕರ್ಷಿತರಾಗುತ್ತಾರೆ. ಅನೇಕರು ಆತನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗುತ್ತಾರೆ. ಬೀಚ್ ರಸ್ತೆಯಲ್ಲಿ ಆತನ ಉಪಸ್ಥಿತಿಯು ಒಂದು ಪ್ರಮುಖ ಅಂಶವಾಗಿದೆ ಮತ್ತು ಜನರು ಆಗಾಗ್ಗೆ ಕೈಕುಲುಕಲು ಮತ್ತು ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾರೆ. ಪ್ರದೀಪ್ ಅವರು ಕೋಲ್ಕತ್ತಾ ಮೂಲದವರಾಗಿದ್ದು, ಎಂಟು ತಿಂಗಳ ಹಿಂದೆ ವಿಶಾಖಪಟ್ಟಣಕ್ಕೆ ಬಂದವರು. ಪ್ರತಿ ಸಂಜೆ 5 ರಿಂದ ರಾತ್ರಿ 9 ರವರೆಗೆ ಸಮುದ್ರತೀರದಲ್ಲಿ ಆತನದು ಇದು ನಿತ್ಯಕಾಯಕ. ಆತ ನಿರಂತರವಾಗಿ 15 ರಿಂದ 20 ನಿಮಿಷಗಳ ಕಾಲ ಸ್ಥಿರವಾಗಿ ನಿಲ್ಲುತ್ತಾನೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಭಕ್ತರ ಹಣೆಗೆ ತಿಲಕವಿಡುತ್ತಾ ಈ ಬಾಲಕ ಗಳಿಸುತ್ತಿರುವುದು ಎಷ್ಟು ಗೊತ್ತಾ? ವಿಡಿಯೋ ನೋಡಿ

ಈ ವಿನೂತನ ಪ್ರದರ್ಶನವು ಕೇವಲ ಮನರಂಜನೆಯ ರೂಪವಲ್ಲ ಆದರೆ ಪ್ರದೀಪ್ ಅವರ ಜೀವನೋಪಾಯವೂ ಆಗಿದೆ. ಅದಕ್ಕೆ ತಕ್ಕಂತೆ ದಿನಕ್ಕೆ ಒಂದು ಸಾವಿರದಿಂದ ಮೂರು ಸಾವಿರ ರೂಪಾಯಿಗಳವರೆಗೆ ಗಳಿಸುತ್ತಾರಂತೆ. ಅಂದಹಾಗೆ, ಸಾರ್ವಜನಿಕರಿಂದ ಅವರು ಪಡೆಯುವ ಬೆಂಬಲ ಮತ್ತು ಮೆಚ್ಚುಗೆಗಳು ಅವರ ವಿಶಿಷ್ಟ ವೃತ್ತಿಯನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕವಾಗಿವೆ.

ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಪ್ರದರ್ಶನಗಳನ್ನು ನೋಡಿದ ನಂತರ ಅವರು ಈ ಉದ್ಯೋಗಕ್ಕೆ ನಿಂತುಬಿಟ್ಟಿದ್ದಾರೆ. ತಮ್ಮ ನಿಯಮಿತ ಪ್ರದರ್ಶನಗಳ ಜೊತೆಗೆ, ಪ್ರದೀಪ್ ಅವರು ಇತರೆ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಭಾಗವಹಿಸಲು ಮುಕ್ತವಾಗಿದ್ದಾರೆ. ಅವರನ್ನು ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸಲು ಯಾರಾದರೂ ಆಸಕ್ತಿ ಹೊಂದಿದ್ದರೆ ಅಂತಹವರು ಈ ಮೊಬೈಲ್​​ ಸಂಖ್ಯೆಗಳ 9083333008 ಮತ್ತು 8080265061 ಮೂಲಕ ಸಂಪರ್ಕಿಸಬಹುದಂತೆ.

ಇದನ್ನೂ ಓದಿ: ಸಂತಾನಕ್ಕಾಗಿ ವಿದೇಶದಿಂದ ಬರುವ ವಿಶೇಷ ಅತಿಥಿಗಳು! ಬರುವಾಗ ಸಿಂಗಲ್ ಸಿಂಗಲ್ ಹೋಗುವಾಗ ಡಬಲ್ ಡಬಲ್!!

Published On - 12:24 pm, Wed, 15 May 24