AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಪ್ರಿಯಕರನನ್ನು ಮದುವೆಯಾಗಲು ಮುಸ್ಲಿಂ ಧರ್ಮದಿಂದ ಮತಾಂತರಗೊಂಡ ಯುವತಿ

ಹಿಂದೂ ಪ್ರಿಯಕರನನ್ನು ಮದುವೆಯಾಗಲು ಯುವತಿಯೊಬ್ಬಳು ಮುಸ್ಲಿಂ ಧರ್ಮದಿಂದ ಮತಾಂತರಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುಕ್ತಿ ಫರಾನಾ ಎಂಬ ಯುವತಿಯು ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು, ಆತನನ್ನು ಮದುವೆಯಾಗುವ ಸಲುವಾಗಿ ಫರಾನಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲದೇ ಹೆಸರನ್ನೂ ಕೂಡ ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಾರೆ.

ಹಿಂದೂ ಪ್ರಿಯಕರನನ್ನು ಮದುವೆಯಾಗಲು ಮುಸ್ಲಿಂ ಧರ್ಮದಿಂದ ಮತಾಂತರಗೊಂಡ ಯುವತಿ
ಮದುವೆ
ನಯನಾ ರಾಜೀವ್
|

Updated on: May 15, 2024 | 11:45 AM

Share

ಪ್ರೀತಿಗೋಸ್ಕರ ಯುವತಿಯೊಬ್ಬಳು ತನ್ನ ಧರ್ಮವನ್ನೇ ಬದಲಿಸಿಕೊಂಡ ಘಟನೆ ಉತ್ತರ ಪ್ರದೇಶ(Uttar Pradesh) ಬರೇಲಿಯಲ್ಲಿ ನಡೆದಿದೆ. ಯುಕ್ತಿ ಫರಾನಾ ಎಂಬ ಯುವತಿಯು ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು, ಆತನನ್ನು ಮದುವೆಯಾಗುವ ಸಲುವಾಗಿ ಫರಾನಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲದೇ ಹೆಸರನ್ನೂ ಕೂಡ ಪಲ್ಲವಿ ಎಂದು ಬದಲಾಯಿಸಿಕೊಂಡಿದ್ದಾರೆ.

ಯುವತಿ ತನ್ನ ಪ್ರಿಯಕರ ಧರಂವೀರ್​ಗಾಗಿ ಧರ್ಮವನ್ನೇ ಬದಲಿಸಿಕೊಳ್ಳಲು ಮುಂದಾಗಿದ್ದಾರೆ, 19 ವರ್ಷದ ಫರಾನಾ ಹಾಗೂ ಧರಂವೀರ್ ಇಬ್ಬರು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಆರು ತಿಂಗಳ ಹಿಂದೆ ಚಂಡೀಗಢದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರೂ ಪರಿಚಯವಾಗಿದ್ದರು.

ನನಗೆ ಮೊದಲಿನಿಂದಲೂ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇದೆ, ನಾನು ನನ್ನ ಬಾಲ್ಯದ ದಿನಗಳಿಂದಲೂ ಪೂಜೆ ಮಾಡುತ್ತಿದ್ದೆ, ಆದರೆ ನನ್ನ ಕುಟುಂಬ ಸದಸ್ಯರು ಅದನ್ನು ವಿರೋಧಿಸಿದ್ದರು. ಇದೀಗ ಫರಾನಾ ಪಲ್ಲವಿಯಾಗಿ ಬದಲಾಗಿದ್ದು, ಜೀವನ ಪರ್ಯಂತ ಧರಂವೀರ್​ ಜತೆ ಬಾಳುವುದಾಗಿ ನಿರ್ಧರಿಸಿದ್ದಾರೆ.

ಮತ್ತಷ್ಟು ಓದಿ: ಮದುವೆ ಹೊಸ್ತಿಲಲ್ಲಿ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ ಭಾರತ-ಪಾಕ್​​​​​ ಸಲಿಂಗ ಜೋಡಿ

ಚಂಡೀಗಢದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪಲ್ಲವಿ ಹೇಳಿದ್ದಾರೆ, ಶಾಹಿ ಪ್ರದೇಶದ ವಿಕ್ರಮ್​ಪುರ ಕುಲ್ಚಾ ಗ್ರಾಮದ ನಿವಾಸಿ ಧರಂವೀರ್ ಎಂಬಾತ ಸಹ ಈಕೆಯೊಂದಿಗೆ ಕೆಲಸ ಮಾಡುತ್ತಿದ್ದರು.

ಅವರಿಬ್ಬರು ಕ್ರಮೇಣವಾಗಿ ಮಾತನಾಡಲು ಶುರು ಮಾಡಿದ್ದರು, ಅದು ನಿಧಾನವಾಗಿ ಪ್ರೀತಿಗೆ ತಿರುಗಿತ್ತು. ಪಲ್ಲವಿ ಹಾಗೂ ಧರಂವೀರ್ ಅಗಸ್ತ್ಯ ರಿಷಿ ಮುನಿ ಆಶ್ರಮದಲ್ಲಿ ವಿವಾಹವಾದರು. ಈ ಮದುವೆಯನ್ನು ಪಂಡಿತ್ ಕೆಕೆ ಶಕ್ದರ್ ಅವರು ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನೆರವೇರಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?