ಮದುವೆ ಹೊಸ್ತಿಲಲ್ಲಿ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ ಭಾರತ-ಪಾಕ್​​​​​ ಸಲಿಂಗ ಜೋಡಿ

ಭಾರತದ ಅಂಜಲಿ ಚಕ್ರ ಮತ್ತು ಪಾಕಿಸ್ತಾನದ ಸೂಫಿ ಮಲಿಕ್ ಇದೀಗ ತಮ್ಮ ಸಲಿಂಗ ಸಂಬಂಧ ಅಥವಾ ಸಲಿಂಗ ವಿವಾಹಕ್ಕೆ ಮುಕ್ತಿ ಹಾಡಿದ್ದಾರೆ. ಸಲಿಂಗ ಪ್ರೇಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಅಂಜಲಿ ಚಕ್ರ ಮತ್ತು ಸೂಫಿ ಮಲಿಕ್ ತಾವು ಸಂಬಂಧವನ್ನು ಮುರಿದುಕೊಂಡಿರುವ ಬಗ್ಗೆ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

ಮದುವೆ ಹೊಸ್ತಿಲಲ್ಲಿ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ ಭಾರತ-ಪಾಕ್​​​​​ ಸಲಿಂಗ ಜೋಡಿ
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 26, 2024 | 1:53 PM

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದ, ಭಾರತ- ಪಾಕ್ ಸಲಿಂಗಿಗಳಾದ ಅಂಜಲಿ ಚಕ್ರ ಮತ್ತು ಪಾಕಿಸ್ತಾನದ ಸೂಫಿ ಮಲಿಕ್ ಇದೀಗ ತಮ್ಮ ಸಲಿಂಗ ಸಂಬಂಧ ಅಥವಾ ಸಲಿಂಗ ವಿವಾಹಕ್ಕೆ ಅಂತ್ಯ ಹಾಡಿದ್ದಾರೆ. ಸಲಿಂಗ ಪ್ರೇಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಅಂಜಲಿ ಚಕ್ರ ಮತ್ತು ಸೂಫಿ ಮಲಿಕ್ ತಾವು ಸಂಬಂಧವನ್ನು ಮುರಿದುಕೊಂಡಿರುವ ಬಗ್ಗೆ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ನನಗೆ ಸೂಫಿ ಮಲಿಕ್​​​ನಿಂದ ದ್ರೋಹ ಆಗಿದೆ ಎಂದು ಅಂಜಲಿ ಚಕ್ರ ಹೇಳಿದ್ದಾರೆ.

ಅಂಜಲಿ ಮತ್ತು ಸೂಫಿ ಅವರ ಐದು ವರ್ಷಗಳಿಂದ ಸಂಬಂಧವನ್ನು ಹೊಂದಿದ್ದರು. ಗಡಿ ಮತ್ತು ಸಂಸ್ಕೃತಿಗೂ ಮೀರಿದ ಸಂಬಂಧ ಅವರಲ್ಲಿತ್ತು. ಇದು ಅನೇಕ ಸಲಿಂಗಿಗಳಿಗೆ ಮಾದರಿಯಾಗಿತ್ತು. ಒಂದು ವರ್ಷದ ಹಿಂದೆ ಇಬ್ಬರು ಕೂಡ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದರು. ನ್ಯೂಯಾರ್ಕ್‌ನ ಐಕಾನಿಕ್ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ ಸೂಫಿ ಅಂಜಲಿಗೆ ಪ್ರಪೋಸ್ ಮಾಡಿದರು. ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದರು.

ಸೂಫಿ ಮಲಿಕ್

View this post on Instagram

A post shared by Sufi Malik (@sufi.sun)

ಇನ್ನು ಸ್ವಲ್ಪ ದಿನದಲ್ಲಿ ಮದುವೆಯಾಗಬೇಕು ಎಂದುಕೊಂಡಿದ್ದ ಅಂಜಲಿಗೆ ಸೂಫಿ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಇಬ್ಬರು ಕೂಡ ಸಂಬಂಧ ಕಡಿದುಕೊಂಡು ದೂರವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೂಫಿ ಹೀಗೆ ಬರೆದುಕೊಂಡಿದ್ದಾರೆ. “ನಮ್ಮ ಮದುವೆಗೆ ಸ್ವಲ್ಪ ದಿನ ಇರುವಾಗಲೇ ಅಂಜಲಿಗೆ ಮೋಸ ಮಾಡುತ್ತಿದ್ದೇನೆ. ನಾನು ತಪ್ಪನ್ನು ಒಪ್ಪಿಕೊಳ್ಳುವೇ, ನಾನು ಅವಳನ್ನು ತುಂಬಾ ನೋಯಿಸಿದ್ದೇನೆ, ನನ್ನ ಜನರನ್ನು ನೋಯಿಸಿದ್ದೇನೆ. ನಮ್ಮ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ಅನೇಕರಿಗೆ ಈ ಕಾರಣದಿಂದ ನೋವು ನೀಡಿದ್ದೇನೆ. ನಾನು ಅವರನ್ನು ಪ್ರೀತಿಸುವೆ ಮತ್ತು ಅವರು ನನ್ನ ಬಗ್ಗೆ ಕಾಳಜಿ ಹೊಂದಿದ್ದಾರೆ. ನಾನು ಪ್ರೀತಿಸುವ ನಮ್ಮ ಸಮುದಾಯಕ್ಕೂ ನೋವು ನೀಡಿದ್ದೇನೆ ಎಂದು ಇನ್ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಾಲ್​​​​ಗಳ ಪಾರ್ಕಿಂಗ್​​ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಅವಕಾಶ ಇಲ್ಲ, ಯಾಕೆ?

ಅಂಜಲಿ ಚಕ್ರ

View this post on Instagram

A post shared by Anjali (@anjalichakra)

ಇದು ತುಂಬಾ ಆಘಾತಕಾರಿ, ಆದರೆ ನಮ್ಮ ಪ್ರಯಾಣ ಬದಲಾಗುತ್ತಿದೆ. ಸೂಫಿ ಮಾಡಿದ ದಾಂಪತ್ಯ ದ್ರೋಹದಿಂದಾಗಿ ನಾವು ನಮ್ಮ ಮದುವೆಯನ್ನು ರದ್ದುಗೊಳಿಸಲು ಮತ್ತು ನಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ ಎಂದು ಅಂಜಲಿ ಅವರ ಕೂಡ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ