ಉತ್ತರಾಖಂಡ ಕಾಡ್ಗಿಚ್ಚು; ಬೆಂಕಿ ನಂದಿಸಬೇಕಾಗಿದ್ದ ಅರಣ್ಯ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ಏಕೆ ಹಾಕಿದ್ದೀರಿ?: ಸುಪ್ರೀಂ ಗರಂ

ಚುನಾವಣಾ ಸಂಬಂಧಿತ ಕರ್ತವ್ಯಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮರು ನಿಯೋಜಿಸುವ ಕುರಿತು ಈ ಹಿಂದೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಲಭ್ಯವಿರುವ ಕೆಲವು ಅಗ್ನಿಶಾಮಕ ದಳಗಳು ಸರಿಯಾದ ಸಲಕರಣೆಗಳಿಲ್ಲದೆ ಬೆಂಕಿಯನ್ನು ನಂದಿಸಬೇಕಾಗಿ ಬಂದಿತ್ತು. ಕಳೆದ ವಿಚಾರಣೆಯಲ್ಲಿ, ಉತ್ತರಾಖಂಡ ಸರ್ಕಾರ ಮತಗಟ್ಟೆಗಳಿಗೆ ನಿಯೋಜಿಸಲಾದ ಅರಣ್ಯ ಅಧಿಕಾರಿಗಳನ್ನು ಅವರ ಪ್ರಾಥಮಿಕ ಪಾತ್ರಗಳಿಗೆ ಹಿಂತಿರುಗಿಸಲಾಗಿದೆ ಎಂದು ಹೇಳಿದೆ

ಉತ್ತರಾಖಂಡ ಕಾಡ್ಗಿಚ್ಚು; ಬೆಂಕಿ ನಂದಿಸಬೇಕಾಗಿದ್ದ ಅರಣ್ಯ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ಏಕೆ ಹಾಕಿದ್ದೀರಿ?: ಸುಪ್ರೀಂ ಗರಂ
ಉತ್ತರಾಖಂಡ ಕಾಡ್ಗಿಚ್ಚು
Follow us
ರಶ್ಮಿ ಕಲ್ಲಕಟ್ಟ
|

Updated on: May 15, 2024 | 4:18 PM

ದೆಹಲಿ ಮೇ 15: ನೂರಾರು ಸಕ್ರಿಯ ಕಾಳ್ಗಿಚ್ಚುಗಳನ್ನು (Forest Fires)ತಡೆಗಟ್ಟಲು ಮತ್ತು ನವೆಂಬರ್‌ನಿಂದ ವರದಿಯಾದ 1,000 ಕ್ಕೂ ಹೆಚ್ಚು ಬೆಂಕಿಯಿಂದ 1,100 ಹೆಕ್ಟೇರ್‌ಗೂ ಹೆಚ್ಚು ಕಾಡು ಬೆಂಕಿಗಾಹುತಿಯಾಗಿ ಲಕ್ಷ ಮೌಲ್ಯದ ಹಾನಿಯನ್ನು ನಿಭಾಯಿಸಲು ರಾಜ್ಯವು ಹೆಣಗಾಡುತ್ತಿರುವಾಗ ಹಣಕಾಸಿನ ಕೊರತೆ ಮತ್ತು ಚುನಾವಣಾ ಕರ್ತವ್ಯಗಳಿಗೆ ಫಾರೆಸ್ಟ್ ಗಾರ್ಡ್ ಗಳನ್ನು ಕಳಿಸಿದ್ದರ ಕುರಿತು ಸುಪ್ರೀಂಕೋರ್ಟ್ (Supreme Court) ಬುಧವಾರ ಕೇಂದ್ರ ಮತ್ತು ಉತ್ತರಾಖಂಡ (Uttarakhand) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬೆಂಕಿಯನ್ನು ನಿಭಾಯಿಸಲು ₹ 10 ಕೋಟಿಯ ಬೇಡಿಕೆ ಇಟ್ಟಿದ್ದರೂ ರಾಜ್ಯಕ್ಕೆ ಕೇವಲ ₹ 3.15 ಕೋಟಿ ನೀಡಲಾಗಿದೆ ಎಂದ ರಾಜ್ಯ ಸರ್ಕಾರವನ್ನು ಟೀಕಿಸಿದ ನ್ಯಾಯಾಲಯ, ಅರಣ್ಯ ಅಧಿಕಾರಿಗಳಿಗೆ ಚುನಾವಣೆ ನೀಡಬೇಕು ಎಂದು ಒತ್ತಾಯಿಸಿದ್ದಕ್ಕಾಗಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು. ಆದಾಗ್ಯೂ, “ಸಮರ್ಪಕ ಹಣವನ್ನು ಏಕೆ ನೀಡಿಲ್ಲ? ಬೆಂಕಿಯ ನಡುವೆ ಅರಣ್ಯ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ಏಕೆ ಹಾಕಿದ್ದೀರಿ?” ನ್ಯಾಯಾಲಯ ಪ್ರಶ್ನಿಸಿದೆ.

ಉತ್ತರಾಖಂಡದ ಐದು ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆದಿದೆ.

ಚುನಾವಣಾ ಸಂಬಂಧಿತ ಕರ್ತವ್ಯಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮರು ನಿಯೋಜಿಸುವ ಕುರಿತು ಈ ಹಿಂದೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಲಭ್ಯವಿರುವ ಕೆಲವು ಅಗ್ನಿಶಾಮಕ ದಳಗಳು ಸರಿಯಾದ ಸಲಕರಣೆಗಳಿಲ್ಲದೆ ಬೆಂಕಿಯನ್ನು ನಂದಿಸಬೇಕಾಗಿ ಬಂದಿತ್ತು. ಕಳೆದ ವಿಚಾರಣೆಯಲ್ಲಿ, ಉತ್ತರಾಖಂಡ ಸರ್ಕಾರ ಮತಗಟ್ಟೆಗಳಿಗೆ ನಿಯೋಜಿಸಲಾದ ಅರಣ್ಯ ಅಧಿಕಾರಿಗಳನ್ನು ಅವರ ಪ್ರಾಥಮಿಕ ಪಾತ್ರಗಳಿಗೆ ಹಿಂತಿರುಗಿಸಲಾಗಿದೆ ಎಂದು ಹೇಳಿದೆ. “ಇನ್ನು ಮುಂದೆ ಯಾವುದೇ ಅರಣ್ಯ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ಹಾಕದಂತೆ ಮುಖ್ಯ ಕಾರ್ಯದರ್ಶಿ ನಮಗೆ ಸೂಚನೆ ನೀಡಿದರು. ನಾವು ಈಗ ಆದೇಶವನ್ನು ಹಿಂಪಡೆಯುತ್ತೇವೆ…” ಎಂದು ರಾಜ್ಯದ ಕಾನೂನು ಪ್ರತಿನಿಧಿ ಹೇಳಿದ್ದಾರೆ.

“ಇದು ವಿಷಾದನೀಯ ಸ್ಥಿತಿಯಾಗಿದೆ. ನೀವು ನೆಪ ಹೇಳುತ್ತಿದ್ದೀರಿ ” ಎಂದು ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠ ಹೇಳಿದೆ.

ಕಾಡ್ಗಿಚ್ಚು ಹತ್ತಿಕ್ಕುವಲ್ಲಿ ವಿಫಲವಾಗಿರುವ ರಾಜ್ಯವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ಇದೇ ಮೊದಲಲ್ಲ. ಕಳೆದ ವಾರ ನ್ಯಾಯಾಲಯ ಬೆಂಕಿಯನ್ನು ನಂದಿಸಲು ಆಡಳಿತಾರೂಢ ಬಿಜೆಪಿಗೆ ನಿರ್ದೇಶನವನ್ನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಅಧಿಕಾರಿಗಳು “ಮಳೆ ದೇವರು ಅಥವಾ ಮೋಡ ಬಿತ್ತನೆಯ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ” ಅಥವಾ ವಾಯುಪಡೆಯ ಅಗ್ನಿಶಾಮಕ ಪ್ರಯತ್ನಗಳನ್ನು ಅವಲಂಬಿಸಿರುವುದಲ್ಲ ಎಂದಿದೆ. ಈ ತಿಂಗಳ ಆರಂಭದಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗಳು 4,500 ಲೀಟರ್ ನೀರು ಸುರಿದು ಬೆಂಕಿ ನಂದಿಸಿತ್ತು.

ಉತ್ತರಾಖಂಡದ ಭೂಪ್ರದೇಶದ ಅಂದಾಜು ಶೇಕಡಾ 45 ರಷ್ಟಿರುವ ಒಟ್ಟು ಅರಣ್ಯದ ಶೇಕಡಾ 0.1 ರಷ್ಟು ಮಾತ್ರ ಬೆಂಕಿಯಿಂದ ಪ್ರಭಾವಿತವಾಗಿದೆ ಎಂದು ರಾಜ್ಯವು ಹೇಳಿಕೊಂಡಿದೆ. ರಾಜ್ಯದಲ್ಲಿ ಕಾಡ್ಗಿಚ್ಚುಗಳು ಕೇಳರಿಯದ ವಿದ್ಯಮಾನವಲ್ಲ. ಇದು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಹೊಂದಿದೆ ಎಂದು ಅದು ಹೇಳಿಕೊಂಡಿದೆ. ಅದೇ ವೇಳೆ ಅರಣ್ಯಗಳ ಬಳಿ ಘನತ್ಯಾಜ್ಯವನ್ನು ಸುಡುವುದನ್ನು ನಿಷೇಧಿಸುತ್ತದೆ ಎಂದು ರಾಜ್ಯ ಹೇಳಿದೆ.

ಅಧಿಕೃತವಾಗಿ, ಉತ್ತರಾಖಂಡ ಕಾಡ್ಗಿಚ್ಚಿನಲ್ಲಿ ತನ್ನ ಜಮೀನನ್ನು ಉಳಿಸಲು ಪ್ರಯತ್ನಿಸುತ್ತಿರುವಾಗ ಮಾರಣಾಂತಿಕ ಸುಟ್ಟ ಗಾಯಗಳಿಗೆ ಒಳಗಾದ 65 ವರ್ಷದ ಸಾವಿತ್ರಿ ದೇವಿ ಸೇರಿದಂತೆ ಐದು ಜನರು ಸಾವಿಗೀಡಾಗಿದ್ದಾರೆ. ಅಲ್ಮೋರಾ ಜಿಲ್ಲೆಯಲ್ಲಿ ಮೇಘಸ್ಫೋಟದಿಂದಾಗಿ ಬೆಂಕಿ ನಂದಿತ್ತು. ಏತನ್ಮಧ್ಯೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ತಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಅಂತಹ ಬೆಂಕಿ ಹಚ್ಚುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಧಾಮಿ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ₹91 ಕೋಟಿ ಆಸ್ತಿ ಘೋಷಣೆ, ಮಂಡಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಕಂಗನಾ ರಣಾವತ್

ಇದು ನಮಗೆ ದೊಡ್ಡ ಸವಾಲಾಗಿದೆ. ಸೇನೆಯಿಂದ ಸಹಾಯ ಪಡೆಯುವುದು ಸೇರಿದಂತೆ ಎಲ್ಲಾ ಸಾಧ್ಯತೆಗಳ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ. ಬೆಂಕಿಗೆ ಹಬ್ಬಲು ಕಾರಣರಾದವರ ನಾವು ಕ್ರಮ ಕೈಗೊಳ್ಳುತ್ತೇವೆ. ಬೆಂಕಿಯನ್ನು ಆದಷ್ಟು ಬೇಗ ನಿಯಂತ್ರಣಕ್ಕೆ ತರುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಏತನ್ಮಧ್ಯೆ, ಪಿಥೋರಗಢ ಜಿಲ್ಲೆಯ ಗಂಗೊಳ್ಳಿಹತ್ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಹಚ್ಚಿದ್ದಕ್ಕಾಗಿ ಭಾರತೀಯ ಅರಣ್ಯ ಕಾಯಿದೆಯಡಿ ಪಿಯೂಷ್ ಸಿಂಗ್, ಆಯುಷ್ ಸಿಂಗ್, ರಾಹುಲ್ ಸಿಂಗ್ ಮತ್ತು ಅಂಕಿತ್ ಎಂಬ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್