ದೆಹಲಿ ಮೇ 11: ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸ್ಥಾನಗಳಲ್ಲಿ 1,717 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿರುವ ಲೋಕಸಭೆ ಚುನಾವಣೆಯ (Lok sabha Election) 4ನೇ ಹಂತದ ಪ್ರಚಾರವು ಶನಿವಾರ ಕೊನೆಗೊಂಡಿದೆ. ಆಂಧ್ರ ಪ್ರದೇಶ(25) ತೆಲಂಗಾಣ(17)ದ ಎಲ್ಲ ಕ್ಷೇತ್ರಗಳು ಸೇರಿದಂತೆ ,ಉತ್ತರ ಪ್ರದೇಶ (13), ಮಹಾರಾಷ್ಟ್ರ (11), ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ (ತಲಾ 8), ಬಿಹಾರ (5), ಒಡಿಶಾ ಮತ್ತು ಜಾರ್ಖಂಡ್ (ತಲಾ 4) ಮತ್ತು ಜಮ್ಮು ಮತ್ತು ಕಾಶ್ಮೀರ (1) ಕ್ಷೇತ್ರಗಳಿಗೆ ಸೋಮವಾರ ಮತದಾನ (Polling) ನಡೆಯಲಿದೆ. 4ನೇ ಹಂತದ ಮತದಾನ ಅಂತ್ಯದೊಂದಿಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಒಟ್ಟಾರೆ 381 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯೂ ಸೋಮವಾರ ನಡೆಯಲಿದೆ.
4 ನೇ ಹಂತದಲ್ಲಿ ಪ್ರಮುಖ ಅಭ್ಯರ್ಥಿಗಳೆಂದರೆ ಅಖಿಲೇಶ್ ಯಾದವ್ (ಕನೌಜ್), ಒಮರ್ ಅಬ್ದುಲ್ಲಾ (ಶ್ರೀನಗರ), ಗಿರಿರಾಜ್ ಸಿಂಗ್ (ಬೆಗುಸರೈ), ಅಧೀರ್ ರಂಜನ್ ಚೌಧರಿ (ಬಹರಂಪುರ), ಮಹುವಾ ಮೊಯಿತ್ರಾ (ಕೃಷ್ಣನಗರ), ಶತ್ರುಘ್ನನ್ ಸಿನ್ಹಾ (ಅಸನ್ಸೋಲ್), ಅಸಾದುದ್ದೀನ್ ಓವೈಸಿ (ಹೈದರಾಬಾದ್) ಮತ್ತು ವೈ.ಎಸ್. ಶರ್ಮಿಳಾ (ಕಡಪಾ).
ಸೋಮವಾರ ಚುನಾವಣೆ ನಡೆಯಲಿರುವ 96 ಸ್ಥಾನಗಳಲ್ಲಿ, 2019 ರಲ್ಲಿ ಬಿಜೆಪಿ 42 ಸ್ಥಾನಗಳನ್ನು ಗೆದ್ದಿದ್ದರೆ, ವೈಎಸ್ಆರ್ ಕಾಂಗ್ರೆಸ್ 22 ಸ್ಥಾನಗಳನ್ನು (ಆಂಧ್ರಪ್ರದೇಶದಲ್ಲಿ), ಬಿಆರ್ಎಸ್ 9 (ತೆಲಂಗಾಣ), ಕಾಂಗ್ರೆಸ್ 6, ತೃಣಮೂಲ ಕಾಂಗ್ರೆಸ್ 4, ಟಿಡಿಪಿ 3, ಬಿಜೆಡಿ, ಎಐಎಂಐಎಂ ಮತ್ತು ಶಿವಸೇನೆ ತಲಾ 2 ಮತ್ತು ಎನ್ ಸಿಪಿ, ಎಲ್ಜೆಪಿ, ಜೆಡಿಯು ಮತ್ತು ಎನ್ ಸಿ ತಲಾ ಒಂದು ಗೆದ್ದಿದೆ.
3ನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ “ದ್ವೇಷ” ಕ್ಕಾಗಿ ಬಿಜೆಪಿ ಮತ್ತು ಖರ್ಗೆ ಮತ್ತು ರಾಹುಲ್ ಅವರ ಹೇಳಿಕೆಗಳ ಕುರಿತು ಕಾಂಗ್ರೆಸ್‌ಗೆ ದೂರುಗಳ ಕುರಿತು ಚುನಾವಣಾ ಆಯೋಗವು ನೋಟಿಸ್‌ಗಳನ್ನು ನೀಡಿದ್ದರೂ, ಚುನಾವಣಾ ಸಂಸ್ಥೆಯು ಈ ವಿಷಯದ ಬಗ್ಗೆ ತನ್ನ ಅಭಿಪ್ರಾಯವನ್ನು ಇನ್ನೂ ನೀಡಿಲ್ಲ. ಪಕ್ಷದ ವರಿಷ್ಠರು ಇನ್ನೂ ಪ್ರತಿಕ್ರಿಯಿಸಿದ್ದಾರೆಯೇ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.
4 ನೇ ಹಂತದ ಪ್ರಚಾರದ ಸಮಯದಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ವಾಗ್ದಾಳಿ ನಡೆಸಿವೆ. ಹಿಂದೂ ಜನಸಂಖ್ಯೆಯ ಪಾಲು ಕಡಿಮೆಯಾಗುತ್ತಿದೆ ಮತ್ತು ಮುಸ್ಲಿಂ ಪಾಲು ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಜನಸಂಖ್ಯೆಯ ಕುರಿತಾದ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಸಮಿತಿಯ ವರದಿಯನ್ನು ಬಿಜೆಪಿಯು ಕಾಂಗ್ರೆಸ್ ಅನ್ನು ಗುರಿಯಾಗಿಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯಕ್ಕೆ ಕೋಟಾ ನೀಡಲು ಬಳಸುತ್ತದೆ ಎಂದು ಆರೋಪಿಸಿದೆ.
ಶುಕ್ರವಾರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ಪಡೆದಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಇತ್ತ ಕಾಂಗ್ರೆಸ್ ಪಕ್ಷಕ್ಕೂ ಹೊಡೆತ ಸಿಕ್ಕಿದೆ. “ಜನಾಂಗೀಯ” ಹೇಳಿಕೆಗಳಿಂದಾಗಿ ಸ್ಯಾಮ್ ಪಿತ್ರೋಡಾ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಅಷ್ಟೇ ಅಲ್ಲದೆ ದರೆ ಮಣಿಶಂಕರ್ ಅಯ್ಯರ್ ಕೆಲವು ತಿಂಗಳ ಹಿಂದೆ ಪಾಕಿಸ್ತಾನದ ಬಗ್ಗೆ ಮಾಡಿದ ಹೇಳಿಕೆಗಳು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ಸೃಷ್ಟಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ