ಲೋಕಸಭೆ ಚುನಾವಣೆ: ಆಂಧ್ರದ ಅನಂತಪಲ್ಲಿ ಗ್ರಾಮದಲ್ಲಿ ಅಪಘಾತಕ್ಕೀಡಾದ ವ್ಯಾನ್ನಲ್ಲಿತ್ತು 7 ಕೋಟಿ ರೂ. ನಗದು!
ಕೆಮಿಕಲ್ ಪೌಡರ್ ಬ್ಯಾಗ್‌ಗಳನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಗೋಣಿಚೀಲಗಳ ಅಡಿಯಲ್ಲಿ 7 ರಟ್ಟಿನ ಪೆಟ್ಟಿಗೆಗಳು ಪತ್ತೆಯಾಗಿವೆ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ನಗದು ಇದ್ದ ಕಾರಣ, ಪೊಲೀಸರು ಅವುಗಳನ್ನು ವಶಪಡಿಸಿಕೊಂಡು ಟೋಲ್ ಪ್ಲಾಜಾದ ಆಡಳಿತ ಕಟ್ಟಡಕ್ಕೆ ಕರೆದೊಯ್ದರು. ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ಬಾಕ್ಸ್‌ಗಳನ್ನು ತೆರೆದಾಗ ಅದರಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ.
ಹೈದರಾಬಾದ್, ಮೇ 11: ಆಂಧ್ರ ಪ್ರದೇಶದ (Andhra Pradesh) ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದಾಗ ನಲ್ಲಜರ್ಲಾ ಮಂಡಲದ ಅನಂತಪಲ್ಲಿ ಗ್ರಾಮದ (Ananthapalli village) ಬಳಿ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಮಿನಿ ವ್ಯಾನ್‌ನಲ್ಲಿ 7 ಕೋಟಿ ರೂ.ನಗದು ಇರುವುದನ್ನು ಪೂರ್ವ ಗೋದಾವರಿ (East Godavari) ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಪಘಾತಕ್ಕೀಡಾದ ಮಿನಿ ವ್ಯಾನ್‌ನ ಅವಶೇಷಗಳ ನಡುವೆ ಏಳು ರಟ್ಟಿನ ಪೆಟ್ಟಿಗೆಗಳಲ್ಲಿ ನಗದು ಪತ್ತೆಯಾಗಿದೆ. ಚೀಲಗಳಲ್ಲಿ ನಗದು ಇರುವ ಪೆಟ್ಟಿಗೆಗಳನ್ನು ಸಾಗಿಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿ ಬಾಕ್ಸ್‌ನಲ್ಲಿ 500 ರೂಪಾಯಿ ಮುಖಬೆಲೆಯ 1 ಕೋಟಿ ರೂಪಾಯಿ ನಗದು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೇ 10ರ ಶುಕ್ರವಾರ ಈ ಘಟನೆ ನಡೆದಿದೆ.
ಚುನಾವಣೆಗೆ ಹಂಚಲು ಕೊಂಡೊಯ್ಯಲಾಗುತ್ತಿದ್ದ ಹಣ
ಕೆಮಿಕಲ್ ಪೌಡರ್ ಬ್ಯಾಗ್‌ಗಳನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಗೋಣಿಚೀಲಗಳ ಅಡಿಯಲ್ಲಿ 7 ರಟ್ಟಿನ ಪೆಟ್ಟಿಗೆಗಳು ಪತ್ತೆಯಾಗಿವೆ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ನಗದು ಇದ್ದ ಕಾರಣ, ಪೊಲೀಸರು ಅವುಗಳನ್ನು ವಶಪಡಿಸಿಕೊಂಡು ಟೋಲ್ ಪ್ಲಾಜಾದ ಆಡಳಿತ ಕಟ್ಟಡಕ್ಕೆ ಕರೆದೊಯ್ದರು.
ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ಬಾಕ್ಸ್‌ಗಳನ್ನು ತೆರೆದಾಗ ಅದರಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ. ಇದನ್ನು ಚುನಾವಣೆಗೆ ಹಂಚಲು ಕೊಂಡೊಯ್ಯಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯ ನಲ್ಲಜರ್ಲ ಮಂಡಲದಲ್ಲಿ ಚುನಾವಣೆ ವೇಳೆ ಸಿಕ್ಕ ಹಣ ಸಂಚಲನ ಮೂಡಿಸುತ್ತಿದೆ. ಇದುವರೆಗೂ ಈ ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Arvind Kejriwal: ನಮ್ಮ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕು, ನನಗೆ ದೇಶದ 140 ಕೋಟಿ ಜನರ ಬೆಂಬಲ ಬೇಕು: ಕೇಜ್ರಿವಾಲ್
ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ನಗದು ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ. ಮೇ 9 ರಂದು ಎನ್‌ಟಿಆರ್ ಜಿಲ್ಲೆಯ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಟ್ರಕ್‌ನಿಂದ 8 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ