ಮೋದಿ ಮತ್ತೆ ಪ್ರಧಾನಿಯಾದರೆ 6 ತಿಂಗಳೊಳಗೆ ಪಿಒಕೆ ಭಾರತಕ್ಕೆ ಸೇರಲಿದೆ; ಸಿಎಂ ಯೋಗಿ ಭರವಸೆ

|

Updated on: May 18, 2024 | 9:47 PM

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಾಲ್ಘರ್‌ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಪಾಲ್ಘರ್ ಲೋಕಸಭಾ ಕ್ಷೇತ್ರಕ್ಕೆ 5ನೇ ಹಂತದಲ್ಲಿ ಮೇ 20ರಂದು ಚುನಾವಣೆ ನಡೆಯಲಿದೆ. ಇದು ಮಹಾರಾಷ್ಟ್ರದಲ್ಲಿ 2024ರ ಸಂಸತ್ ಚುನಾವಣೆಯ ಕೊನೆಯ ಹಂತವಾಗಿದೆ.

ಮೋದಿ ಮತ್ತೆ ಪ್ರಧಾನಿಯಾದರೆ 6 ತಿಂಗಳೊಳಗೆ ಪಿಒಕೆ ಭಾರತಕ್ಕೆ ಸೇರಲಿದೆ; ಸಿಎಂ ಯೋಗಿ ಭರವಸೆ
ಯೋಗಿ ಆದಿತ್ಯನಾಥ್
Follow us on

ಮುಂಬೈ: ನರೇಂದ್ರ ಮೋದಿ (Narendra Modi) ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಮರು ಆಯ್ಕೆಯಾದ 6 ತಿಂಗಳೊಳಗೆ ಪಾಕ್ ಆಕ್ರಮಿತ ಕಾಶ್ಮೀರ (PoK) ಭಾರತದ ಭಾಗವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಭರವಸೆ ನೀಡಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಪಾಕ್ ಆಕ್ರಮಿತ ಕಾಶ್ಮೀರವನ್ನು ಉಳಿಸಿಕೊಳ್ಳುವಲ್ಲಿ ಪಾಕಿಸ್ತಾನವು ತೊಂದರೆಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ಪಾಕ್ ಆಕ್ರಮಿತ ಕಾಶ್ಮೀರವನ್ನು ಉಳಿಸುವುದು ಪಾಕಿಸ್ತಾನಕ್ಕೆ ಕಷ್ಟಕರವಾಗಿದೆ. ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ಅವರು ಅಧಿಕಾರ ಸ್ವೀಕರಿಸಿದ 6 ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ. ಇಂತಹ ಕೆಲಸಕ್ಕೆ ಧೈರ್ಯ ಬೇಕು’’ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ನಾವು ನಮ್ಮ ಶತ್ರುಗಳನ್ನು ಪೂಜಿಸುವುದಿಲ್ಲ. ನಕ್ಸಲಿಸಂ ಮತ್ತು ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೃಢ ನಿಲುವನ್ನು ಹೊಂದಿದೆ. ಕಳೆದ 10 ವರ್ಷಗಳಲ್ಲಿ ನಾವು ನವ ಭಾರತವನ್ನು ಕಂಡಿದ್ದೇವೆ. ಗಡಿಗಳನ್ನು ಭದ್ರಪಡಿಸಲಾಗಿದೆ, ಭಯೋತ್ಪಾದನೆ ಮತ್ತು ನಕ್ಸಲಿಸಂ ನಿಗ್ರಹಿಸಲಾಗಿದೆ. ಮುಂಬೈ ಸ್ಫೋಟ ನಡೆದಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಭಯೋತ್ಪಾದಕರು ಗಡಿಯಾಚೆಯಿಂದ ಬಂದವರು ಎಂದು ಹೇಳುತ್ತಿತ್ತು. ಹಾಗಾದರೆ ನಿಮ್ಮ ಕ್ಷಿಪಣಿಯ ಉಪಯೋಗವೇನು?” ಎಂದು ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿಎಎ ಬಗ್ಗೆ ಕಾಂಗ್ರೆಸ್, ಎಸ್​ಪಿ ಸುಳ್ಳು ಸುದ್ದಿ ಹರಡುತ್ತಿದೆ; ಅಜಂಗಢದಲ್ಲಿ ಪ್ರಧಾನಿ ಮೋದಿ ಆರೋಪ

ಪಾಕಿಸ್ತಾನದಲ್ಲಿ ಭಯೋತ್ಪಾದಕರ ಹತ್ಯೆಗೆ ಸಂಬಂಧಿಸಿದಂತೆ ಭಾರತದ ಮೇಲೆ ಇತ್ತೀಚಿನ ಆರೋಪಗಳ ಕುರಿತು ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, “ಕಳೆದ 3 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಅನೇಕ ಭಯೋತ್ಪಾದಕರು ಹತರಾಗಿದ್ದಾರೆ. ಅದರ ಹಿಂದೆ ಭಾರತೀಯ ಏಜೆನ್ಸಿಗಳು ಇವೆ ಎಂದು ಬ್ರಿಟಿಷ್ ದೊಡ್ಡ ಪತ್ರಿಕೆ ಬರೆದಿದೆ. ನಾವು ನಮ್ಮ ಜನರನ್ನು ಯಾರಾದರೂ ಕೊಂದರೆ ನಾವು ಅವರನ್ನು ಪೂಜಿಸುವುದಿಲ್ಲ. ಅವರಿಗೆ ಅರ್ಹವಾದ ಉತ್ತರವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲಿ ಬುಲ್ಡೋಜರ್ ಚಲಾಯಿಸಬೇಕು ಎಂದು ಯೋಗಿ ಆದಿತ್ಯನಾಥ್ ಅವರಿಂದ ಕಲಿಯಿರಿ: ಮೋದಿ

“ಪಾಕಿಸ್ತಾನವನ್ನು ಹೊಗಳುತ್ತಿರುವವರಿಗೆ, ಪ್ರಧಾನಿ ಮೋದಿ ಅವರು ಇಡೀ ಪಾಕಿಸ್ತಾನದ ಜನಸಂಖ್ಯೆಗಿಂತ ಹೆಚ್ಚಿನ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದಾರೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಅವರು ಭಾರತದಲ್ಲಿ ವಾಸಿಸುತ್ತಿದ್ದರೆ ಅವರು ಹಸಿವಿನಿಂದ ಸಾಯುತ್ತಿರಲಿಲ್ಲ ಮತ್ತು ಉಚಿತ ರೇಷನ್ ಪಡೆಯುತ್ತಿದ್ದರು” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Sat, 18 May 24