ಪಾಟ್ನಾ ಸೆಪ್ಟೆಂಬರ್ 16: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು (ಸೆಪ್ಟೆಂಬರ್ 16 ರಂದು) ಬಿಹಾರದ ಮಧುಬನಿ ಜಿಲ್ಲೆಯ ಝಂಜರ್‌ಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ವಿರುದ್ಧ ವ್ಯಂಗ್ಯವಾಡಿದ್ದು, ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಗೆಲ್ಲಲಿದೆ ಎಂದು ಹೇಳಿದ್ದಾರೆ. ಕುಮಾರ್ ನೇತೃತ್ವದ ಮಹಾಘಟಬಂಧನ್ ಆಡಳಿತದಲ್ಲಿ ಬಿಹಾರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಬಿಹಾರದಲ್ಲಿ ಲಾಲು ಮತ್ತು ನಿತೀಶ್ ಅವರ ಸರ್ಕಾರವಿದೆ. ನಾನು ಬಿಹಾರದ ದಿನಪತ್ರಿಕೆಗಳನ್ನು ನೋಡುತ್ತೇನೆ. ಇಲ್ಲಿ ಪ್ರತಿದಿನ ಗುಂಡಿನ ದಾಳಿ, ಲೂಟಿ, ಅಪಹರಣ, ಪತ್ರಕರ್ತರ ಹತ್ಯೆ ಮತ್ತು ದಲಿತರ ಹತ್ಯೆಗಳು ನಡೆಯುತ್ತಿವೆ.
ಸ್ವಾರ್ಥಿ ಮೈತ್ರಿಯು ಮತ್ತೊಮ್ಮೆ ಬಿಹಾರವನ್ನು ‘ಜಂಗಲ್ ರಾಜ್’ಗೆ ಕೊಂಡೊಯ್ಯುತ್ತದೆ ಎಂದು ನಾನು ಬಿಹಾರದ ಜನರಿಗೆ ಹೇಳಲು ಬಯಸುತ್ತೇನೆ. ಝಂಜರ್‌ಪುರದ ಜನರಿಗೆ ಜಂಗಲ್ ರಾಜ್ ಬೇಕೇ? ಲಾಲೂ ಜಿ ಮತ್ತೊಮ್ಮೆ ಸಕ್ರಿಯರಾಗಿದ್ದಾರೆ. ನಿತೀಶ್ ಜಿ ನಿಷ್ಕ್ರಿಯರಾಗಿದ್ದಾರೆ. ಲಾಲೂ ಜಿ ಸಕ್ರಿಯರಾದರೆ ಮತ್ತು ನಿತೀಶ್ ಜಿ ನಿಷ್ಕ್ರಿಯಗೊಂಡರೆ ಬಿಹಾರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವೆಲ್ಲರೂ ಅರ್ಥಮಾಡಿಕೊಳ್ಳಬಹುದು ಎಂದು ಶಾ ಹೇಳಿದ್ದಾರೆ.
बिहार में जनता अराजकता और माफिया राज से त्रस्त है। प्रदेश में कमल खिलाने के लिए झंझारपुर लोकसभा में @BJP4Bihar द्वारा आयोजित विशाल जनसभा को संबोधित कर रहा हूँ। https://t.co/ratnsNhKt3
— Amit Shah (@AmitShah) September 16, 2023
ಆರ್‌ಜೆಡಿ ನಾಯಕ ರೈಲ್ವೇ ಸಚಿವರಾಗಿದ್ದಾಗ ಕೋಟ್ಯಂತರ ರೂಪಾಯಿ ಹಗರಣ ಮಾಡಿದ್ದಾರೆ ಎಂಬುದು ಗೊತ್ತಿದ್ದರೂ ಲಾಲು ಯಾದವ್ ಅವರ ಹಗರಣ ಪ್ರಕರಣಗಳನ್ನು ನಿತೀಶ್ ಕುಮಾರ್ ನಿರ್ಲಕ್ಷಿಸುತ್ತಿದ್ದಾರೆ. ಯಾದವ್ ವಿರುದ್ಧ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣ ಕುಮಾರ್ ಅವರಿಗೆ ಕಾಣುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.
ಅಮಿತ್ ಶಾ ಅವರು ಲೋಕಸಭೆ ಚುನಾವಣೆ 2024 ರ ‘ಲೋಕಸಭೆ ಪ್ರವಾಸ’ ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜೆಡಿಯು ಬಿಜೆಪಿಯಿಂದ ಬೇರ್ಪಟ್ಟು ಮಹಾಮೈತ್ರಿಕೂಟವನ್ನು ರಚಿಸಿದಾಗಿನಿಂದ ಬಿಹಾರಕ್ಕೆ ಅಮಿತ್ ಶಾ ಅವರ ಆರನೇ ಭೇಟಿಯಾಗಿದೆ ಇದು.
ಆರ್‌ಜೆಡಿ ಮತ್ತು ಜೆಡಿಯು ಮೈತ್ರಿ ಸ್ವಾರ್ಥದ ಮೈತ್ರಿ. ಲಾಲು ಜಿ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಬಯಸುತ್ತಾರೆ. ನಿತೀಶ್ ಜಿ ಮತ್ತೊಮ್ಮೆ ಪ್ರಧಾನಿಯಾಗಲು ಬಯಸುತ್ತಾರೆ. ನಿತೀಶ್ ಬಾಬು ಆಪ್ಕಿ ದಾಲ್ ನಹೀ ಗಲೇಗಿ (ನಿತೀಶ್ ಅವರೇ, ಇಲ್ಲಿ ನಿಮ್ಮ ಬೇಳೆ ಬೇಯುವುದಿಲ್ಲ). ಪ್ರಧಾನಿ ಹುದ್ದೆಗೆ ಯಾವುದೇ ಹುದ್ದೆ ಖಾಲಿ ಇಲ್ಲ. ಏಕೆಂದರೆ ಮತ್ತೊಮ್ಮೆ ನರೇಂದ್ರ ಮೋದಿ ಜಿ ಆ ಸ್ಥಾನಕ್ಕೇರಲಿದ್ದಾರೆ.
ಯಾರನ್ನೂ ಹೆಸರಿಸದೆ, ಸನಾತನ ಧರ್ಮ ಮತ್ತು ರಾಮಚರಿತಮಾನಗಳ ವಿರುದ್ಧ ಮಾತನಾಡುವ ಜನರ ಬಗ್ಗೆ ಶಾ ಅಕ್ರೋಶ ವ್ಯಕ್ತಪಡಿಸಿದ್ದಾರೆ. ರಕ್ಷಾ ಬಂಧನ ಮತ್ತು ಜನ್ಮಾಷ್ಟಮಿ ಸೇರಿದಂತೆ ಹಬ್ಬದ ರಜೆಗಳನ್ನು ಕಡಿತಗೊಳಿಸಿದ ಮತ್ತು ರದ್ದುಗೊಳಿಸುವ ಬಗ್ಗೆ ಬಿಹಾರ ಸರ್ಕಾರವನ್ನು ಶಾ ತರಾಟೆಗೆ ತೆಗೆದುಕೊಂಡರು ಆದಾಗ್ಯೂ, ಸಾಮೂಹಿಕ ಪ್ರತಿಭಟನೆ ಮತ್ತು ಆಕ್ರೋಶ ನಂತರ ಬಿಹಾರ ಸರ್ಕಾರವು ನಿರ್ದಿಷ್ಟ ಸುತ್ತೋಲೆಯನ್ನು ಹಿಂತೆಗೆದುಕೊಂಡಿತು.
ಬಿಹಾರ ಸರ್ಕಾರವು ಮತ ಬ್ಯಾಂಕ್‌ಗಾಗಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಜನರು ರಾಮಚರಿತಮಾನಸ ವಿರುದ್ಧ ಮಾತನಾಡುತ್ತಿದ್ದಾರೆ. ಹಲವಾರು ಹೆಸರುಗಳನ್ನು ಸನಾತನ ಧರ್ಮದೊಂದಿಗೆ ಹೋಲಿಸುತ್ತಿದ್ದಾರೆ. ಈ ಜನರ ಒಂದೇ ಒಂದು ಕೆಲಸ ಎಂದರೆ ಸಂಧಾನ. ಬಿಹಾರದ ಜನರು ಲಾಲು-ನಿತೀಶ್ ಮೈತ್ರಿಕೂಟದ ಸರ್ಕಾರವನ್ನು ಮಾಡಿದರೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗದಿದ್ದರೆ ಇಡೀ ಸೀಮಾಂಚಲ್ ಪ್ರದೇಶವು ನುಸುಳುಕೋರರ ಕೇಂದ್ರವಾಗುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಲಾಲೂ ಜಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಶಾ ಆರೋಪಿಸಿದ್ದಾರೆ.
ಬಿಹಾರದಲ್ಲಿ ಗೂಂಡಾರಾಜ್ ಮರಳಿದೆ. ಮರಳು ಮಾಫಿಯಾಗಳು ಸಕ್ರಿಯವಾಗಿವೆ. ರಾಜ್ಯದಲ್ಲಿ ಅನೇಕ ಸಾವಿಗೆ ಮದ್ಯ ಮಾಫಿಯಾಗಳು ಕಾರಣವಾಗುತ್ತಿವೆ.ಬಿಹಾರದ ಪ್ರವಾಹ ಸಮಸ್ಯೆಗಳನ್ನು ನಿಭಾಯಿಸುವ ವಿಷಯದಲ್ಲಿ ನಿತೀಶ್ ಕುಮಾರ್ ಸರ್ಕಾರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ.
ಇದನ್ನೂ ಓದಿ: ‘ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ’: ಇಂಡಿಯಾ ಮೈತ್ರಿಕೂಟದ ಮಾಧ್ಯಮ ನೀತಿ ಕುರಿತು ಪವನ್ ಖೇರಾ
ಉಭಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಜೆಡಿಯು ಮತ್ತು ಆರ್‌ಜೆಡಿ ಮೈತ್ರಿ ಎಣ್ಣೆ ಮತ್ತು ನೀರಿನಂತೆ, ಅದು ಎಂದಿಗೂ ಒಟ್ಟಿಗೆ ಬರುವುದಿಲ್ಲ. ಎಣ್ಣೆ ಏನನ್ನೂ ಕಳೆದುಕೊಳ್ಳುವುದಿಲ್ಲ ಬದಲಿಗೆ ಅದು ನೀರನ್ನು ಕೊಳಕು ಮಾಡುತ್ತದೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು 81 ಎಕರೆ ಅಗತ್ಯ ಭೂಮಿಯನ್ನು ನೀಡದ ಕಾರಣ ದರ್ಭಾಂಗಾ ಏಮ್ಸ್‌ನ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ಯುಪಿಎ ಆಡಳಿತದಲ್ಲಿ 1200 ಲಕ್ಷ ಕೋಟಿ ರೂಪಾಯಿಗಳ ಹಗರಣ ನಡೆದಿದ್ದರಿಂದ ಯುಪಿಎ ಹೆಸರು ಇಂಡಿಯಾ ಎಂದು ಬದಲಾಯಿತು. ಯುಪಿಎ ಹೆಸರನ್ನು ಇಂಡಿಯಾ ಎಂದು ಹೆಸರನ್ನು ಬದಲಾಯಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಬಿಹಾರವನ್ನು ಹಿಂದಕ್ಕೆ ತಳ್ಳಿದ ವ್ಯಕ್ತಿ ಅದೇ ಲಾಲು ಯಾದವ್.
ಯುಪಿಎ 10 ವರ್ಷಗಳಲ್ಲಿ ಬಿಹಾರಕ್ಕೆ ₹ 2 ಲಕ್ಷ ಕೋಟಿ ನೀಡಿದೆ. ಪ್ರಸ್ತುತ ಪ್ರಧಾನಿ ಒಂಬತ್ತು ವರ್ಷಗಳಲ್ಲಿ ಬಿಹಾರಕ್ಕೆ ₹ 5.92 ಸಾವಿರ ಕೋಟಿ ನೀಡಿದ್ದಾರೆ. ಬಿಹಾರದಲ್ಲಿ ಕೇಂದ್ರ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಡೇಟಾವನ್ನು ಅಮಿತ್ ಶಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ