ನ್ಯಾಯಾಧೀಶರ ಮೇಲೆ ದಾಳಿ ಮಾಡಲು ಟಿಎಂಸಿ ಗೂಂಡಾಗಳನ್ನು ಬಿಡುತ್ತದೆಯೇ?: ಮೋದಿ

|

Updated on: May 28, 2024 | 6:33 PM

ಟಿಎಂಸಿ ತನ್ನ ವಿಶ್ವಾಸಘಾತುಕತನ ಮತ್ತು ಸುಳ್ಳುಗಳನ್ನು ಬಹಿರಂಗಪಡಿಸುವವರನ್ನು ಇಷ್ಟಪಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಪಕ್ಷವು ನ್ಯಾಯಾಂಗವನ್ನು ಹೇಗೆ ಪ್ರಶ್ನಿಸುತ್ತಿದೆ ಎಂಬುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಅವರಿಗೆ ನ್ಯಾಯಾಂಗ ಮತ್ತು ನಮ್ಮ ಸಂವಿಧಾನದ ಮೇಲೆ ನಂಬಿಕೆ ಇಲ್ಲವೇ? ಎಂದು ನರೇಂದ್ರ ಮೋದಿ ಕೇಳಿದ್ದಾರೆ.

ನ್ಯಾಯಾಧೀಶರ ಮೇಲೆ ದಾಳಿ ಮಾಡಲು ಟಿಎಂಸಿ ಗೂಂಡಾಗಳನ್ನು ಬಿಡುತ್ತದೆಯೇ?: ಮೋದಿ
ನರೇಂದ್ರ ಮೋದಿ
Follow us on

ಬರಾಸತ್  ಮೇ 28: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ವಿರುದ್ಧ ವಾಗ್ದಾಳಿ ನಡೆಸಿದ್ದು, ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಕ್ಷ ತುಷ್ಟೀಕರಣ ರಾಜಕೀಯ ಮತ್ತು ವೋಟ್ ಜಿಹಾದ್”ಗೆ ಅನುಕೂಲವಾಗುವಂತೆ “ಇತರ ಹಿಂದುಳಿದ ವರ್ಗಗಳ (OBC) ಯುವಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ. ಕಳೆದ ವಾರ, ಕಲ್ಕತ್ತಾ ಉಚ್ಚ ನ್ಯಾಯಾಲಯವು 2010 ರಿಂದ ರಾಜ್ಯದ ಹಲವಾರು ಸಮುದಾಯಗಳ ಒಬಿಸಿ ಸ್ಥಾನಮಾನವನ್ನು ರದ್ದುಗೊಳಿಸಿದ್ದು, ಪಶ್ಚಿಮ ಬಂಗಾಳದಲ್ಲಿನ ಸೇವೆಗಳು ಮತ್ತು ಹುದ್ದೆಗಳಲ್ಲಿನ ಖಾಲಿ ಹುದ್ದೆಗಳಿಗೆ ಅಂತಹ ಮೀಸಲಾತಿಗಳನ್ನು ಕಾನೂನುಬಾಹಿರವೆಂದು ಕಂಡುಹಿಡಿದಿದೆ. ಆದಾಗ್ಯೂ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ತೀರ್ಪನ್ನು “ಒಪ್ಪುವುದಿಲ್ಲ” ಎಂದು ಹೇಳಿದ್ದು, ಇದು ಬಿಜೆಪಿಯ ಪ್ರಭಾವದಿಂದ ನೀಡಲಾದ ತೀರ್ಪು ಎಂದು ಹೇಳಿದ್ದಾರೆ.

ಒಬಿಸಿಗಳೊಂದಿಗೆ ತೃಣಮೂಲ ಕಾಂಗ್ರೆಸ್ ನಡೆಸಿದ ದ್ರೋಹವನ್ನು ನ್ಯಾಯಾಲಯ ಬಯಲು ಮಾಡಿದೆ. ಟಿಎಂಸಿ ತನ್ನ ತುಷ್ಟೀಕರಣ ರಾಜಕೀಯ ಮತ್ತು ‘ವೋಟ್ ಜಿಹಾದ್’ ಬೆಂಬಲಿಸಲು ಒಬಿಸಿ ಯುವಕರ ಹಕ್ಕುಗಳನ್ನು ಕಸಿದುಕೊಂಡಿದೆ. ಪಶ್ಚಿಮ ಬಂಗಾಳದ ಒಬಿಸಿಗಳಿಗೆ ಟಿಎಂಸಿ ದ್ರೋಹ ಬಗೆದಿದೆ’ ಎಂದು ಬರಾಸತ್ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಾರೆ.

ಬರಾಸತ್ ರ‍್ಯಾಲಿಯಲ್ಲಿ ಮೋದಿ ಮಾತು

ಟಿಎಂಸಿ ತನ್ನ ವಿಶ್ವಾಸಘಾತುಕತನ ಮತ್ತು ಸುಳ್ಳುಗಳನ್ನು ಬಹಿರಂಗಪಡಿಸುವವರನ್ನು ಇಷ್ಟಪಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಪಕ್ಷವು ನ್ಯಾಯಾಂಗವನ್ನು ಹೇಗೆ ಪ್ರಶ್ನಿಸುತ್ತಿದೆ ಎಂಬುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಅವರಿಗೆ ನ್ಯಾಯಾಂಗ ಮತ್ತು ನಮ್ಮ ಸಂವಿಧಾನದ ಮೇಲೆ ನಂಬಿಕೆ ಇಲ್ಲವೇ?

“ನ್ಯಾಯಾಧೀಶರ ಮೇಲೆ ಅವರು ದಾಳಿ ಮಾಡುತ್ತಿರುವ ರೀತಿ ಅಚ್ಚರಿ ಮೂಡಿಸಿದೆ. ಟಿಎಂಸಿ ಈಗ ನ್ಯಾಯಾಧೀಶರ ಮೇಲೆ ಹರಿಹಾಯಲು ತನ್ನ ಗೂಂಡಾಗಳನ್ನು ಬಿಡುತ್ತದೆಯೇ? ಎಂದು ಮೋದಿ ಕೇಳಿದ್ದಾರೆ.

ಟಿಎಂಸಿ ಸಾಧುಗಳನ್ನು ನಿಂದಿಸಿದೆ: ಪ್ರಧಾನಿ ಮೋದಿ

ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘದ  ಬಗ್ಗೆ ಮಮತಾ ಬ್ಯಾನರ್ಜಿ ಮಾಡಿದ ಹೇಳಿಕೆಗಳ ಬಗ್ಗೆ ಪ್ರಧಾನಿ ಮೋದಿ ಅವರು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. “ಟಿಎಂಸಿ ಸತ್ಯವನ್ನು ಸಹಿಸುವುದಿಲ್ಲ, ಟಿಎಂಸಿಯ ಸತ್ಯವನ್ನು ಹೊರತರಲು ಪ್ರಯತ್ನಿಸುವವರನ್ನು ಟಿಎಂಸಿ ಟೀಕಿಸುತ್ತದೆ. ಟಿಎಂಸಿ ಶಾಸಕರೊಬ್ಬರು, “ಹಿಂದುವೋಂಕೋ ಭಾಗೀರಥಿ ಮೇ ಬಹಾ ದೇಂಗೆ” ಎಂದು ಹೇಳಿದರು. ಬಂಗಾಳದ ಸಾಧುಗಳು ತಮ್ಮ ತಪ್ಪನ್ನು ಸರಿಪಡಿಸುವಂತೆ ವಿನಮ್ರವಾಗಿ ಟಿಎಂಸಿಗೆ ವಿನಂತಿಸಿದರು. ಆದರೆ ಟಿಎಂಸಿ ಸಾಧುಗಳನ್ನು ನಿಂದಿಸಲು ಶುರು ಮಾಡಿತು. ರಾಮಕೃಷ್ಣ ಮಿಷನ್, ಇಸ್ಕಾನ್, ಭಾರತ್ ಸೇವಾಶ್ರಮ ಸಂಘದಂತಹ ಮಹಾನ್ ಸಂಸ್ಥೆಗಳ ಸಂತರನ್ನು ಅವಮಾನಿಸಲಾಗಿದೆ. ಅವರ ವೋಟ್ ಬ್ಯಾಂಕ್ ಅನ್ನು ಸಮಾಧಾನಪಡಿಸಲು ಮತ್ತು ‘ವೋಟ್ ಜಿಹಾದ್’ ಅನ್ನು ಮತ್ತಷ್ಟು ಹೆಚ್ಚಿಸಲು ಇದನ್ನು ಮಾಡಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Tue, 28 May 24